ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ; ಮಕರ ಸಂಕ್ರಾಂತಿಯಂದು ಜರುಗಿತು ವಿಸ್ಮಯ

ಮಕರ ಸಂಕ್ರಾಂತಿಯಂದು ಪ್ರಕೃತಿಯ ವಿಸ್ಮಯ ನಡೆದಿದ್ದು, ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಪುನೀತ ಕ್ಷಣವನ್ನು ಕಣ್ತುಂಬಿಕೊಂಡು ನೆರೆದಿದ್ದ ನೂರಾರು ಮಂದಿ ಪುನೀತರಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್​​ ವ್ಯವಸ್ಥೆ ಮಾಡಲಾಗಿಯಿತು.

ಶಿವಲಿಂಗವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ (ಸಂಗ್ರಹ ಚಿತ್ರ)

ಬೆಂಗಳೂರು, ಜ. 15: ಮಕರ ಸಂಕ್ರಾಂತಿಯಂದು (Makar Sankranti 2026) ಪ್ರಕೃತಿಯ ವಿಸ್ಮಯ ನಡೆದಿದ್ದು, ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದ (Gavi Gangadhareshwara Temple) ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಪುನೀತ ಕ್ಷಣವನ್ನು ಕಣ್ತುಂಬಿಕೊಂಡು ನೆರೆದಿದ್ದ ನೂರಾರು ಮಂದಿ ಪುನೀತರಾಗಿದ್ದಾರೆ. ಈ ವೇಳೆ ಶಿವ ಸ್ತ್ರೋತ್ರ ಮೊಳಗಿ ಭಕ್ತಗಣ ರೋಮಾಂಚನಗೊಂಡಿತು.

ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಸೂರ್ಯ ಕಿರಣ ಶಿವಲಿಂಗವನ್ನು ಸ್ಪರ್ಶಿಸುವುದು ವಾಡಿಕೆ. ಆದರೆ ಕಳೆದ ವರ್ಷ ಮೋಡ ಕವಿದ ಕಾರಣ ಭಕ್ತರಿಗೆ ಈ ಅಪರೂಪದ ಘಳಿಗೆ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಜನವರಿ 15ರ ಸಂಜೆ 5 ಗಂಟೆ 19 ನಿಮಿಷಕ್ಕೆ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದ್ದು, ಭಕ್ತರು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು. ಗುಡಿಯ ಬಲಭಾಗದ ಕಿಟಕಿ ಮೂಲಕ ತೂರಿ ಬಂದ ಸೂರ್ಯ ರಶ್ಮಿ ನಂದಿ ಕೊಂಬಿನ ಮೂಲಕ ಶಿವನ ಗರ್ಭಗೃಹ ಪ್ರವೇಶಿಸಿತು. ಬಳಿಕ ಸುಮಾರು 2 ನಿಮಿಷ ಶಿವಲಿಂಗವನ್ನು ಸ್ಪರ್ಶಿಸಿತು. ದೇವರ ದರ್ಶನಕ್ಕೆ ಸುಮಾರು 200 ಮೀಟರ್​​ನಷ್ಟು ಉದ್ದದ ಸಾಲು ಕಂಡುಬಂತು. ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್​​ ವ್ಯವಸ್ಥೆ ಮಾಡಲಾಗಿಯಿತು. ಈ ಅಪರೂದ ಕ್ಷಣಕ್ಕೆ ಸಾಕ್ಷಿಯಾಗಲು ಮಧ್ಯಾಹ್ನದಿಂದಲೇ ಭಕ್ತರು ಆಗಮಿಸಿದ್ದರು.

ಹಾವೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ; ಹಲವು ಕಡೆ ಜಾತ್ರಾ ಮಹೋತ್ಸವ

ಗವಿಗಂಗಾಧರೇಶ್ವರ ದೇವಸ್ಥಾನದ ವೈಶಿಷ್ಟ್ಯ

ಗವಿಗಂಗಾಧರೇಶ್ವರ ದೇವಸ್ಥಾನವು ಬೆಂಗಳೂರಿನ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಯಿತು. 16ನೇ ಶತಮಾನದಲ್ಲಿ ಕೆಂಪೇಗೌಡರು ಇದನ್ನು ನವೀಕರಿಸಿದರು ಎನ್ನುತ್ತದೆ ಇತಿಹಾಸ. ಉಳಿದ ದೇವಸ್ಥಾನಗಳಿಂದ ಭಿನ್ನವಾಗಿ ಇಲ್ಲಿ ಶಿವ ಗುಹೆಯಲ್ಲಿ ನೆಲೆ ನಿಂತಿದ್ದಾನೆ. ದೇವಸ್ಥಾನದೊಳಗೆ ಭಕ್ತರು ಬಾಗಿಕೊಂಡೇ ತೆರಳಬೇಕು. ಈ ದೇವಾಲಯದಲ್ಲಿ ಮಕರ ಸಂಕ್ರಾಂತಿ ಬಹಳ ವಿಶೇಷ. ಆ ದಿನ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತವೆ. ಕಿಟಕಿ ಒಳಗಿನಿಂದ ಸೂರ್ಯನ ರಶ್ಮಿಗಳು ತೂರಿ ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಅದ್ಭುತವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ.