ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನುವಿಕಾಸ ಸಂಸ್ಥೆಗೆ ಇಂಡಿಯಾ ಸಿಎಸ್ಆರ್ ಮತ್ತು ಸಸ್ಟೇನೆಬಿಲಿಟಿ ಅವಾರ್ಡ್ 2025 ರಾಷ್ಟ್ರೀಯ ಪ್ರಶಸ್ತಿ

ಮನುವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ಕೆರೆ ಅಭಿವೃದ್ಧಿ, ಕೃಷಿ ಹೊಂಡ ಗಳ ನಿರ್ಮಾಣ ಮತ್ತು ಬೆಟ್ಟ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಗಮನಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ. ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮತ್ತು ಗುರುದಾಸ್ ಪ್ರಭು ಈ ಪ್ರಶಸ್ತಿಯನ್ನು ಪಡೆದರು

ಮನುವಿಕಾಸ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ

-

Ashok Nayak Ashok Nayak Sep 5, 2025 8:10 AM

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯು ಕೊಡ ಮಾಡುವ ಇಂಡಿಯಾ ಸಿ.ಎಸ್.ಆರ್ ಮತ್ತು ಸಸ್ಟೇನೆಬಿಲಿಟಿ ಅವಾರ್ಡ್-2025, ಮನುವಿಕಾಸ ಸಂಸ್ಥೆಗೆ ನೀರು ನಿರ್ವಹಣೆಯ NGO ಕೆಟಗರಿಯಲ್ಲಿ ದೊರಕಿದೆ.

ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ.ಪರಮೇಶ್ವರ ಅವರಿಂದ ಸೆ.4ರಂದು ಬೆಂಗಳೂರಿನ ಎಫ್ ಕೆ ಸಿ ಸಿ ಐ ನ ಸರ್. ಎಂ. ವಿ. ಆಡಿಟೋರಿಯಂನಲ್ಲಿ ನೀಡಿದರು.

Stem

ಮನುವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ಕೆರೆ ಅಭಿವೃದ್ಧಿ, ಕೃಷಿ ಹೊಂಡ ಗಳ ನಿರ್ಮಾಣ ಮತ್ತು ಬೆಟ್ಟ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಗಮನಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ. ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮತ್ತು ಗುರುದಾಸ್ ಪ್ರಭು ಈ ಪ್ರಶಸ್ತಿಯನ್ನು ಪಡೆದರು

ದೇಶದಾದ್ಯಂತ ಅನೇಕ ಸಂಘ ಸಂಸ್ಥೆಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.