ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ; ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

ನಾಗರಬಾವಿಯಲ್ಲಿರುವ ಹೊಟೆಲ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ ನಡೆದಿದ್ದು, ಓರ್ವ ಸಜೀವ ದಹನವಾದರೆ ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ನಾಗರಬಾವಿ ಪ್ರದೇಶದ ಮಾಳಗಾಳದಲ್ಲಿ ಇರುವ ದುರ್ಗಾ ಶ್ರೀ ಗ್ರ್ಯಾಂಡ್ ಹೋಟೆಲ್‌ನಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಾಗರಬಾವಿಯಲ್ಲಿರುವ ಹೊಟೆಲ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ ನಡೆದಿದ್ದು, ಓರ್ವ ಸಜೀವ ದಹನವಾದರೆ ಇನ್ನೂ (Fire Accident) ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ನಾಗರಬಾವಿ ಪ್ರದೇಶದ ಮಾಳಗಾಳದಲ್ಲಿ ಇರುವ ದುರ್ಗಾ ಶ್ರೀ ಗ್ರ್ಯಾಂಡ್ ಹೋಟೆಲ್‌ನಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ. ಸುಮಾರು 3.30ರ ಹೊತ್ತಿಗೆ ಹೋಟೆಲ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್‌ನ ನೆಲಮಹಡಿಯಲ್ಲಿ ಗೋಡೌನ್ ಇದ್ದರೂ, ಅಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಆದರೆ ಹೋಟೆಲ್​ನಲ್ಲಿ ಬೆಂಕಿ ಜೋರಾಗಿದ್ದು ಓರ್ವ ಸಜೀವ ದಹನವಾಗಿದ್ದಾನೆ.

ಹೋಟೆಲ್ ಒಳಗೆ ಸಿಲುಕಿದ್ದವರನ್ನು ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ. ದುರದೃಷ್ಟವಶಾತ್, ಅತಿಯಾದ ಹೊಗೆ ಸೇವನೆಯಿಂದ ಅಸ್ವಸ್ಥರಾಗಿದ್ದ 45 ವರ್ಷದ ರಾಜಕುಮಾರ್ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಹೊಟೆಲ್‌ನ ಮೊದಲ ಮಹಡಿಯಲ್ಲಿ ಒಟ್ಟು 5 ಮಂದಿ ಸಿಬ್ಬಂದಿ ವಾಸವಿದ್ದರು. ಬೆಂಕಿ ಜೋರಾಗಿ ಮೇಲಿನ ಫ್ಲೋರ್‌ಗೂ ತಗುಲಿದ್ದು, ಹೊಗೆ ತುಂಬಿದ ಪರಿಣಾಮ ಮೊದಲ ಮಹಡಿಯಲ್ಲಿ ಇದ್ದ ಆ 5 ಮಂದಿಗೂ ಹೊರಗೆ ಬರಲು ಆಗಿಲ್ಲ. ಹೊಗೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿ, ಅಲ್ಲಿದ್ದ ಸಿಬ್ಬಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಕಿ ಅವಘಡ: ಪಿಜಿಯಿಂದ ಹಾರಿ ಜೀವ ಉಳಿಸಿಕೊಂಡ ಯುವತಿಯರು, ವಿಡಿಯೋ ನೋಡಿ

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಹೋಟೆಲ್‌ನ 2ನೇ ಮತ್ತು 3ನೇ ಮಹಡಿಯಲ್ಲಿ ವಾಸಿಸುತ್ತಿದ್ದವರು, ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡು, ಅಲ್ಲಿಂದ ಹೊರಬರಲು ಯತ್ನಿಸಿದ್ದಾರೆ. ಹೋಟೆಲ್ ಒಳಗಿನಿಂದ ಹೊರಗೆ ಬರಲು ಆಗದ ಕಾರಣ, ಪಕ್ಕದ ಕಟ್ಟಡದ ಮೂಲಕ ಹೊರಗೆ ಕರೆತರಲಾಗಿದೆ. ಕಳೆದ ವರ್ಷವೇ ಈ ಹೋಟೆಲ್‌ನ್ನು ರಿನವೇಶನ್ ಮಾಡಲಾಗಿತ್ತು. ನವೀಕರಣಗೊಂಡರೂ ಬೆಂಕಿ ದುರಂತವಾಗಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

Vishakha Bhat Heggar

View all posts by this author