ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

20ನೇ ವರ್ಷಾಚರಣೆಯಲ್ಲಿ ಮೌರ್ಯ ಕಾನ್ಸೆಪ್ಟ್ಸ್ ಸಾಧನೆ ದೇಶದಾದ್ಯಂತ 135 ದ್ವಿಚಕ್ರ ವಾಹನಗಳ ವಿತರಣೆ

ಉದ್ಯೋಗಿ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಮೌರ್ಯ ಕಾನ್ಸೆಪ್ಟ್ಸ್ ತನ್ನ 20ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸಂಸ್ಥೆಯ ವತಿಯಿಂದ ದೇಶದಾದ್ಯಂತ ತನ್ನ ಸಿಬ್ಬಂದಿಗೆ 135 ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು, ಉದ್ಯೋಗಿ ಪ್ರಥಮ HONESTY DELIVERED ಧೋರಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಬೆಂಗಳೂರು: ಉದ್ಯೋಗಿ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಮೌರ್ಯ ಕಾನ್ಸೆಪ್ಟ್ಸ್ ತನ್ನ 20ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸಂಸ್ಥೆಯ ವತಿಯಿಂದ ದೇಶದಾದ್ಯಂತ ತನ್ನ ಸಿಬ್ಬಂದಿಗೆ 135 ದ್ವಿಚಕ್ರ ವಾಹನಗಳನ್ನು ವಿತರಿಸ ಲಾಗಿದ್ದು, ಉದ್ಯೋಗಿ ಪ್ರಥಮ HONESTY DELIVERED ಧೋರಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಪ್ರಸ್ತುತ ಭಾರತ ದೇಶದ ವಿವಿಧ ಭಾಗಗಳಲ್ಲಿ 45 ಶಾಖೆಗಳು ಮತ್ತು 330ಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ, ಉದ್ಯೋಗ ಸೃಷ್ಟಿ ಹಾಗೂ ಸಿಬ್ಬಂದಿ ಸಬಲೀ ಕರಣದ ದಿಟ್ಟ ಉದ್ದೇಶದೊಂದಿಗೆ ತನ್ನ ವಿಸ್ತರಣೆಯನ್ನು ಮುಂದುವರಿಸುತ್ತಿದೆ.

ಇದೇ ಸಂದರ್ಭದಲ್ಲಿ, ಮೌರ್ಯ ಕಾನ್ಸೆಪ್ಟ್ಸ್ ಇತ್ತೀಚೆಗೆ ₹1.5 ಕೋಟಿ ಮೌಲ್ಯದ 6 ಮಹೀಂದ್ರ BE6 ಎಲೆಕ್ಟ್ರಿಕ್ ವಾಹನಗಳನ್ನು ಹಾನೆಸ್ಟಿ ಡೆಲಿವರ್ಡ್ ಸ್ಲೋಗನ್ ಅಡಿಯಲ್ಲಿ ಉಡುಗೊರೆಯಾಗಿ ನೀಡಿದೆ.

ಇದನ್ನೂ ಓದಿ:Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್

ಮೌರ್ಯ ಕಾನ್ಸೆಪ್ಟ್ಸ್ ಸಂಸ್ಥಾಪಕ ವೇಣುಗೋಪಾಲ್ ಮಾತನಾಡಿ, “ನಮ್ಮ ಉದ್ಯೋಗಿಗಳೇ ನಮ್ಮ ಶಕ್ತಿ, ನಮ್ಮ ಸಂಸ್ಥೆಯ ಬೆನ್ನೆಲುಬು. ಅವರ ಸಂಚಾರ ಸುಗಮಗೊಳಿಸಲು, ಕಾರ್ಯ ಕ್ಷಮತೆ ಹೆಚ್ಚಿಸಲು ಹಾಗೂ ಅವರ ಸಮಗ್ರ ಬೆಳವಣಿಗೆಗೆ ಬೆಂಬಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ” ಎಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಮೌರ್ಯ ಕನ್ಸೆಪ್ಟ್ಸ್ ಮೌಲ್ಯಮಾಪನ, ಚಾರ್ಟರ್ಡ್ ಎಂಜಿನಿ ಯರಿಂಗ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹತೆ ಮತ್ತು ವೃತ್ತಿಪರತೆಗೆ ಹೆಸರಾಗಿದೆ. ವಿಶ್ವಾಸ, ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಯನ್ನು ಆಧಾರವಾಗಿಸಿಕೊಂಡು ಸಂಸ್ಥೆ ತನ್ನ ಬೆಳವಣಿಗೆಯ ಹಾದಿಯನ್ನು ಯಶಸ್ವಿಯಾಗಿ ಮುಂದುವರಿಸುತ್ತಿದೆ.