ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರ್(Dr G Parameshwar) ರವರು ಆದಷ್ಟು ಬೇಗ ಗುಣಮುಖರಾಗಿ ರಾಜ್ಯದ ಜನತೆಯ ಸೇವೆ ಮಾಡಲು ಇನ್ನಷ್ಟು ಆಯುಷ್ಯ ಆರೋಗ್ಯ ಯಶಸ್ಸನ್ನು ಕರುಣಿಸಲಿ ಎಂದು ವಿಶ್ವ ಚೇತನ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ " ಭಗವಾನ್ ಬುದ್ಧ ವಂದನ " ಕಾರ್ಯಕ್ರಮವನ್ನು ಎಚ್ ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಚ್ ಕೆ ಮಹಾನಂದ್ ರವರ ಅಭಿಮಾನಿಗಳ ಬಳಗದ ವತಿಯಿಂದ ನೆರವೇರಿಸಲಾಯಿತು.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಮನೋರಕ್ಖಿತ ಬಂತೇಜಿ ರವರು ಡಾ. ಜಿ ಪರಮೇಶ್ವರ್ ರವರು ಆದಷ್ಟು ಬೇಗ ಗುಣಮುಖರಾಗಿ ಬಡವರ ಸೇವೆ ಮಾಡುವ ಶಕ್ತಿಯನ್ನು ಭಗವಾನ್ ಬುದ್ಧರು ನೀಡಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮಲತಾ ಕೃಷ್ಣ ಸ್ವಾಮಿರವರು ಮುಖಂಡರಾದ ನಾಗರಾಜು, ಪ್ರಕಾಶ್, ಬೆಹಂಚಿ, ನಗರ ಸಭೆ ಮಾಜಿ ಸದಸ್ಯರು ಗಳಾದ ಶಿವಾನಂದ , ರವಿ ಮುಡುಗುಂಡ, ಸಮಾಜಕರಾದ ರಾಜೇಶ್ ಪ್ರಭಾರ ಪ್ರಾಂಶುಪಾಲರಾದ ಭಾಸ್ಕರ್ ದೈಹಿಕ ಶಿಕ್ಷಕರಾದ ನಟರಾಜು ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.