ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yoga Day celebration: ಪ್ರೆಸ್ ಕ್ಲಬ್ ನಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ

ಪತ್ರಕರ್ತರ ಮಕ್ಕಳು ಕ್ಲಿಷ್ಟಕರ ಯೋಗಗಳನ್ನು ಮಾಡುವ ಮೂಲಕ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನಿತಾ ವಿ ಉದ್ಘಾಟಿಸಿದರು.

ಪ್ರೆಸ್ ಕ್ಲಬ್ ನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪತ್ರಕರ್ತರ ಮಕ್ಕಳು ಯೋಗ ಪ್ರದರ್ಶನ ಮಾಡಿದರು. ನಟಿ ಅನಿತಾ, ಜನಪ್ರಿಯ ಯೋಗ ಸಾಧಕಿ ಅಂಬಿಕಾ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಕಾರ್ಯದರ್ಶಿ ಜಿ.ವೈ. ಮಂಜುನಾಥ್ ಹಾಜರಿದ್ದರು.

ಬೆಂಗಳೂರು: ಪತ್ರಕರ್ತರ ಮಕ್ಕಳು ಕ್ಲಿಷ್ಟಕರ ಯೋಗಗಳನ್ನು ಮಾಡುವ ಮೂಲಕ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನ(International Yoga Day)ವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನಿತಾ ವಿ(Actress and Rajyotsava Award winner Anitha V) ಉದ್ಘಾಟಿಸಿದರು.

ಇದನ್ನೂ ಓದಿ: 12th International Yoga Day: ದೈಹಿಕ, ಮಾನಸಿಕ ಆರೋಗ್ಯಕ್ಕೆ ಭಾರತೀಯ ಯೋಗವೇ ಶ್ರೇಷ್ಠ ಮಾರ್ಗ: ಜಿಲ್ಲಾಧಿಕಾರಿ ಜಿ. ಪ್ರಭು

ನಂತರ ಮಾತನಾಡಿ ಯೋಗ ಅಭ್ಯಾಸ ನಿತ್ಯ ಕೂಡಿಸಿಕೊಳ್ಳುವ ಮೂಲಕ ರೋಗಗಳನ್ನು ಬಡಿದೊಡಿಸಬಹುದು. ಸದಾ ಒತ್ತಡದಲ್ಲಿರುವ ಪತ್ರಕರ್ತರು ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಮಾಡುವುದು ನಿಜಕ್ಕೂ ಅರ್ಥಪೂರ್ಣ ಎಂದರು.

Yoga at PCB

ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಬಹು ವಿಶ್ವದಾಖಲೆ ಸಾಧಕಿ ಯೋಗ ಶಿಕ್ಷಕಿ ಡಾ. ಅಂಬಿಕಾ ಮಾತನಾಡಿ, ದೈನಂದಿನ ಸಮಸ್ಯೆ ಮತ್ತು ಸವಾಲುಗಳಿಗೆ ಯೋಗ ಒಂದೇ ಅದ್ಭುತ ಪರಿಹಾರ ಎಂದು ಯೋಗದ ಮಹತ್ವವನ್ನು ವಿವರಿಸಿದರು

ಯೋಗ ಶಿಕ್ಷಕಿ ಪುಷ್ಪ ಸಿ, ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ಮಂಜುನಾಥ್ ಜಿ.ವೈ. ಸಮಿತಿ ಸದಸ್ಯ ಸಿ.ಆರ್. ಮಂಜುನಾಥ್, ಗಾಯಕ ದಿನಕರ್, ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಮುಖ್ಯಸ್ಥ ಶ್ರೀನಿವಾಸ್ ಹಾಜರಿದ್ದರು.