ಬೆಂಗಳೂರು: ದೇಶಾದ್ಯಂತ ಮೆಡಿಕಲ್ ಶಾಪ್‍ಗಳು ಬಂದ್ (Medical Shop Bandh) ಆಗಲಿವೆ. ಆನ್‍ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಓಸಿಡಿ) ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕರ್ನಾಟಕದಲ್ಲೂ ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ಬಂದ್‍ಗೆ ಬೆಂಬಲ ನೀಡಿದೆ.
ರಾಜ್ಯದಲ್ಲಿ ಸರಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಇದ್ದು, ಬೆಂಗಳೂರಿನ ಶೇಕಡಾ 90 ರಷ್ಟು ಮೆಡಿಕಲ್ ಮಳಿಗೆಗಳು ಓಪನ್ ಆಗಲಿದೆ. ಕಪ್ಪು ರಿಬ್ಬನ್ ಕಟ್ಟಿ ನೈತಿಕ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಳಗೆ ಇರುವ ಫಾರ್ಮಸಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಗಂಭೀರ ಪರಿಸ್ಥಿತಿಗಳಲ್ಲಿ ಅಗತ್ಯ ಔಷಧಿಗಳನ್ನು ಒದಗಿಸಲು ಆಯ್ದ ಪ್ರಮುಖ ಕೇಂದ್ರಗಳಲ್ಲಿ ತುರ್ತು ಕೌಂಟರ್‌ಗಳು ತೆರೆದಿರುತ್ತವೆ. ತುರ್ತು ಸಂದರ್ಭ ಬಂದ್ರೆ ಆಸ್ಪತ್ರೆಯ ಫಾರ್ಮಸಿಗಳು ಓಪನ್ ಇರಲಿದ್ದು ಜನ ಇದರ ಸೇವೆ ಪಡೆಯಬಹುದಾಗಿದೆ.
AIOCD ಪ್ರಕಾರ, ಆನ್‌ಲೈನ್ ಔಷಧಾಲಯಗಳು (ಇ-ಫಾರ್ಮಸಿಗಳು) ಮತ್ತು ಕಾರ್ಪೊರೇಟ್ ವೇದಿಕೆಗಳ ಮೂಲಕ ಔಷಧಗಳನ್ನು ನಿಯಂತ್ರಣವಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಅವರು ಶೇಕಡಾ 20 ರಿಂದ 60 ರಷ್ಟು ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಪರಿಣಾಮವಾಗಿ, ಸಣ್ಣ ವೈದ್ಯಕೀಯ ಅಂಗಡಿಗಳ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳಿವೆ. ಇದಲ್ಲದೆ, ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ನಕಲಿ/AI- ರಚಿತವಾದ ಪ್ರಿಸ್ಕ್ರಿಪ್ಷನ್‌ಗಳ ವಿರುದ್ಧ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಣ್ಣ ವೈದ್ಯಕೀಯ ಅಂಗಡಿಗಳು ಆರೋಪಿಸುತ್ತಿವೆ.
Transport workers Strike: ಹೈಕೋರ್ಟ್ ಆದೇಶದ ಹಿನ್ನೆಲೆ ಸಾರಿಗೆ ಮುಷ್ಕರ ವಾಪಸ್; ನಾಳೆ ಎಂದಿನಂತೆ ಬಸ್‌ಗಳ ಸಂಚಾರ
ಬೇಡಿಕೆ ಏನು?
ಜಿಎಸ್‌ಆರ್ 220(ಇ)/ ಜಿಎಸ್‌ಆರ್ 817 (ಇ) ಹಿಂಪಡೆಯಬೇಕು.
ಅಕ್ರಮ ಇ-ಫಾರ್ಮಸಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು.
ಅತಿಯಾದ ರಿಯಾಯ್ತಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.