Mid Season Sale 2026: ಮಾಲ್‌ಗಳಲ್ಲಿ ಶುರುವಾಯ್ತು ಮಿಡ್ ಸೀಸನ್ ಸೇಲ್
Mid Season Sale: ಮಾಲ್‌ಗಳಲ್ಲಿ ಮಿಡ್ ಸೀಸನ್ ಸೇಲ್ ಆರಂಭವಾಗಿದೆ. ದೊಡ್ಡ ದೊಡ್ಡ ಬ್ರಾಂಡ್‌ಗಳು ಸಾಕಷ್ಟು ಡಿಸ್ಕೌಂಟ್‌ಗಳನ್ನು ನೀಡುತ್ತಿವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಮಾಲ್‌ಗಳಲ್ಲಿ ಮಿಡ್ ಸೀಸನ್ ಸೇಲ್ ಶಾಪಿಂಗ್ ಆರಂಭಗೊಂಡಿದೆ. ಮಾಲ್‌ಗಳಲ್ಲಿ ಈಗಾಗಲೇ ಆರಂಭಗೊಂಡಿರುವ ಮಿಡ್ ಸೀಸನ್ ಸೇಲ್ ಶಾಪಿಂಗ್, ಉದ್ಯಾನನಗರಿಯ ಎಲ್ಲಾ ಮಾಲ್‌ಗಳಲ್ಲೂ ಹೆಚ್ಚಾಗಿದೆ.
ಫ್ಯಾಷನ್‌ವೇರ್ಸ್ ಮೇಲೆ ಆಫರ್ಸ್-ಡಿಸ್ಕೌಂಟ್ಸ್
ಮಾಲ್‌ಗಳಲ್ಲಿ ವಿಶೇಷವಾಗಿ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳ ಮೇಲೆ ಶೇಕಡಾ 50 & 75 ರಷ್ಟು ಸೇಲ್ಸ್ ನೋಟ್ ಬೋರ್ಡ್‌ಗಳನ್ನು ಹಾಕಲಾಗಿದೆ. ಇದು ಗ್ರಾಹಕರನ್ನು ಆಕರ್ಷಿಸುವ ಟ್ರಿಕ್ಸ್. ಇದರೊಂದಿಗೆ ರೆಗ್ಯುಲರ್ ಗ್ರಾಹಕರಿಗೆ ಡಿಸ್ಕೌಂಟ್ಸ್ ಕೂಡ ಘೋಷಿಸಲಾಗುತ್ತಿದೆ. ಇವೆಲ್ಲಾ ಮಿಡ್ ಸೀಸನ್ ಸೇಲ್ ತಂತ್ರ ಎನ್ನುತ್ತಾರೆ ಮಾಲ್‌ವೊಂದರ ಮ್ಯಾನೇಜರ್ ರಿಚರ್ಡ್.
ಇಂತಹ ಸೌಲಭ್ಯಗಳನ್ನು ಯಾವುದೇ ನಷ್ಟವಿಲ್ಲದೇ ಬಳಸಿಕೊಳ್ಳಬೇಕೆಂದುಕೊಂಡವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ ರಮಣ.
ವಿಂಡೋ ಶಾಪಿಂಗ್ ಮಾಡಿ
ಮಿಡ್ ಸೀಸನ್ ಸೇಲ್‌ನಲ್ಲಿ ಯಾವುದೇ ಫ್ಯಾಷನ್‌ವೇರ್ಸ್ ಖರೀದಿಸಬೇಕಿದ್ದಲ್ಲಿ ಮೊದಲು ಏನೂ ಕೊಳ್ಳದೇ ಬರೀ ಹಾಗೆಯೇ ಗಮನಿಸುವ ವಿಂಡೋ ಶಾಪಿಂಗ್ ಮಾಡಿ. ನಂತರ ನಿಮಗೆ ಅಗತ್ಯವಿರುವಿಕೆಯ ಬಗ್ಗೆ ಯೋಚಿಸಿ, ಖರೀದಿಸಿ.
ಫ್ಯಾಷನ್‌ವೇರ್ಸ್ ಪರಿಶೀಲಿಸಿ ಖರೀದಿಸಿ
ಮಾಲ್‌ಗಳಲ್ಲಿನ ಮಿಡ್ ಸೀಸನ್ ಸೇಲ್‌ನಲ್ಲಿ ಆದಷ್ಟೂ ಕಳೆದ ಸೀಸನ್‌ನ ಅಳಿದುಳಿದ ಫ್ಯಾಷನ್‌ವೇರ್‌ಗಳ ಸಂಗಮವೇ ಇರುತ್ತದೆ. ಹಾಗಾಗಿ ರಿಪಿಟೇಷನ್ ಫ್ಯಾಷನ್‌ವೇರ್ಸ್ ಖರೀದಿ ಆವಾಯ್ಡ್ ಮಾಡಿ.
ವೋಚರ್‌ಗಳಿಗೆ ಮನಸೋಲಬೇಡಿ
ಇಂತಿಷ್ಟು ಹೆಚ್ಚು ಖರೀದಿಸಿದಲ್ಲಿ ಗಿಫ್ಟ್ ವೋಚರ್ ದೊರೆಯುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ. ಇದು ಸುಮ್ಮನೆ ದುಂದು ವೆಚ್ಚಕ್ಕೆ ಕಾರಣವಾಗುತ್ತದೆ.
ಕಳೆದ ಸೀಸನ್‌ನದ್ದನ್ನು ಕೊಳ್ಳಬೇಡಿ
ಕಳೆದ ಸಮ್ಮರ್ ಸೀಸನ್‌ನ ಉಡುಪುಗಳನ್ನು ಖರೀದಿಸಬೇಡಿ. ಮುಂದಿನ ವರ್ಷದವರೆಗೂ ಧರಿಸಲಾಗುವುದಿಲ್ಲ! ಅಲ್ಲದೇ ನಿಮ್ಮ ತೂಕದಲ್ಲೂ ಏರಿಳಿತವಿದ್ದಲ್ಲಿ ಸುಮ್ಮನೆ ವಾರ್ಡ್ರೋಬ್‌ನಲ್ಲಿ ಸುಮ್ಮನೇ ಇಡಬೇಕಾದೀತು!
ಎಥ್ನಿಕ್‌ವೇರ್ಸ್ ಕೊಳ್ಳಿ
ಯಾವುದೇ ಎಥ್ನಿಕ್‌ವೇರ್‌ಗಳಾದಲ್ಲಿ ಸಮಾರಂಭ ಹಾಗೂ ಹಬ್ಬಗಳಿಗೆ ಧರಿಸಬಹುದು. ಕಡಿಮೆ ಬೆಲೆಗೆ ದೊರೆತಲ್ಲಿ, ಪರಿಶೀಲಿಸಿ ಖರೀದಿ ಮಾಡಿ.