ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Minimum Salary for Librarian: ಗ್ರಾಪಂ ಗ್ರಂಥಪಾಲಕರಿಗೆ ಕನಿಷ್ಠ ವೇತನ 19,200 ರೂ.ಗೆ ಹೆಚ್ಚಳ

ಗ್ರಾ. ಪಂ. ವ್ಯಾಪ್ತಿಯಲ್ಲಿ ರುವ ಅರಿವು ಕೇಂದ್ರ (ಗ್ರಂಥಾಲ ಯ)ಗಳ ಮೇಲ್ವಿಚಾರಕರಿಗೆ 19,200 ರು. ಕನಿಷ್ಠ ವೇತನ ಖಾತ್ರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 5420ಕ್ಕೂ ಅಧಿಕ ಗ್ರಂಥಾಲಯ ಮೇಲ್ವಿಚಾರಕರಿದ್ದು, ಇವರಿಗೆ 12 ಸಾವಿರ ಗೌರವ ಧನ ನೀಡಲಾಗುತ್ತಿತ್ತು.

ಬೆಂಗಳೂರು: ಗ್ರಾ. ಪಂ. ವ್ಯಾಪ್ತಿಯಲ್ಲಿ ರುವ ಅರಿವು ಕೇಂದ್ರ (ಗ್ರಂಥಾಲ ಯ)ಗಳ ಮೇಲ್ವಿಚಾರಕರಿಗೆ 19,200 ರು. ಕನಿಷ್ಠ ವೇತನ ಖಾತ್ರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 5420ಕ್ಕೂ ಅಧಿಕ ಗ್ರಂಥಾಲಯ ಮೇಲ್ವಿಚಾರಕರಿದ್ದು, ಇವರಿಗೆ 12 ಸಾವಿರ ಗೌರವ ಧನ ನೀಡಲಾಗುತ್ತಿತ್ತು.

ಇದನ್ನೂ ಓದಿ: Eshwar B Khandre: ಕಲುಷಿತ ನೀರು ಪೂರೈಸಿದರೆ ಕಠಿಣ ಕ್ರಮ: ಈಶ್ವರ ಖಂಡ್ರೆ

ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದ ನಂತರ ಇವರ ಗೌರವಧನ 19201 ಆಗಿದೆ.

ಗ್ರಂಥಾಲಯ ಮೇಲ್ವಿಚಾರಕರಿಗೆ ನೀಡುವ ಮಾಸಿಕ 19201 ರು.ಗಳ ಪೈಕಿ 12000ವನ್ನು ಸರಕಾರ ದಿಂದ ಪಾವತಿಸಲಾಗುತ್ತಿದ್ದು, ಉಳಿಕೆ ಮೊತ್ತ 7201 ರು.ಗಳನ್ನು ರಾಜ್ಯಮಟ್ಟದಲ್ಲಿ ಸಂಗ್ರಹಿಸ ಲಾಗುವ ಗ್ರಂಥಾಲಯ ಸೆಸ್‌ನಿಂದ ಪಾವತಿಸಲು ಅನುಮೋದನೆ ನೀಡಲಾಗಿದೆ.