ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಣೆ; ಹೋಟೆಲ್ ಊಟ- ತಿಂಡಿ ಬೆಲೆಯಲ್ಲಿ ಮತ್ತೆ ಹೆಚ್ಚಳ?

ಸರ್ಕಾರವು ರಾಜ್ಯದ 81 ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಗರಿಷ್ಠ ಶೇ. 60 ರಷ್ಟು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಈ ನಿರ್ಧಾರದಿಂದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಗಳ ಬೆಲೆ ತೀವ್ರ ಏರಿಕೆಗೆ ಕಾರಣವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಸೋಮವಾರ ಎಚ್ಚರಿಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರವು ರಾಜ್ಯದ 81 ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಗರಿಷ್ಠ ಶೇ. 60 ರಷ್ಟು (Minimum wage) ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಈ ನಿರ್ಧಾರದಿಂದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಗಳ ಬೆಲೆ ತೀವ್ರ ಏರಿಕೆಗೆ ಕಾರಣವಾಗಲಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಸೋಮವಾರ ಎಚ್ಚರಿಸಿದೆ. ಸರಾಸರಿ ಕನಿಷ್ಠ ವೇತನ ಹೆಚ್ಚಳವು ಪ್ರಸ್ತುತ ವೇತನಕ್ಕಿಂತ ಸುಮಾರು ಶೇ. 60 ರಷ್ಟಿದ್ದು, ರೆಸ್ಟೋರೆಂಟ್‌ಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿಯ ಬೆಲೆ 50 ರೂ.ಗಳಿಂದ 80 ರೂ.ಗಳಿಗೆ ಮತ್ತು ಮಸಾಲೆ ದೋಸೆ 80-90 ರೂ.ಗಳಿಂದ 150 ರೂ.ಗಳಿಗೆ ಏರಿಕೆಯಾಗಬಹುದು ಎಂದು ಸಂಘದ ಅಧ್ಯಕ್ಷ ಜಿ. ಕೆ. ಶೆಟ್ಟಿ ಹೇಳಿದ್ದಾರೆ.

150-200 ರೂ. ಇರುವ ಸಸ್ಯಾಹಾರಿ ಊಟವು 250-300 ರೂ.ಗಳಿಗೆ ಏರಿಕೆಯಾಗಬಹುದು ಮತ್ತು ಬೆಂಗಳೂರಿನಲ್ಲಿ ಬಿರಿಯಾನಿ ಭಕ್ಷ್ಯಗಳು 300-350 ರೂ.ಗಳಿಂದ ಸುಮಾರು 500 ರೂ.ಗಳಿಗೆ ಏರಿಕೆಯಾಗಬಹುದು. "ಇಂತಹ ಹೆಚ್ಚಳಗಳೊಂದಿಗೆ, ಸಾಮಾನ್ಯ ನಾಗರಿಕರಿಗೆ ಹೊರಗೆ ಊಟ ಮಾಡುವುದು ಹೆಚ್ಚು ದುಬಾರಿಯಾಗಲಿದೆ. ಇದು ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆ ಕರ್ನಾಟಕ ಹೊಸ ಕನಿಷ್ಠ ವೇತನವನ್ನು ಪ್ರಕಟಿಸಿದೆ.ಈ ಪರಿಷ್ಕೃತ ವೇತನದ ಪ್ರಕಾರ, ಕೌಶಲರಹಿತ ನೌಕರರಿಗೆ ತಿಂಗಳಿಗೆ ಕನಿಷ್ಠ ರೂ. 19,300 ಹಾಗೂ ಕೌಶಲ ನುರಿತ (Skilled) ನೌಕರರಿಗೆ ತಿಂಗಳಿಗೆ ರೂ. 31,100 ರವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ ವೇತನದಲ್ಲಿ ಸುಮಾರು ಶೇ.60 ರಷ್ಟು ಹೆಚ್ಚಳವು ಹೋಟೆಲ್‌ಗಳಿಗೆ, ವಿಶೇಷವಾಗಿ ಸಣ್ಣ ಮತ್ತು ಕುಟುಂಬ ನಡೆಸುವ ಸಂಸ್ಥೆಗಳಿಗೆ ನಿರ್ವಹಣಾ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಶೆಟ್ಟಿ ಹೇಳಿದರು.

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (ಕಮರ್ಷಿಯಲ್) ಸಿಲಿಂಡರ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಹೋಟೆಲ್‌ ತಿಂಡಿ ತಿನಿಸುಗಳು ಮತ್ತು ಕಾಫಿ-ಟೀ ದರಗಳು ದುಬಾರಿಯಾಗುವುದು ಬಹುತೇಕ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ.

ಹೋಟೆಲ್‌ಗಳಲ್ಲಿ ಬಳಸಲಾಗುವ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಹೋಟೆಲ್ ನಿರ್ವಹಣಾ ವೆಚ್ಚದಲ್ಲಿ ಶೇ. 60 ರಷ್ಟು ಭಾರೀ ಏರಿಕೆಯಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮ ನಡೆಸುವುದೇ ಕಷ್ಟಕರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Vishakha Bhat Heggar

View all posts by this author