ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಂತ್ರಿ ಪಟ್ಟ: ಲಾಬಿಗೆ ʼಹೈʼ ತಡೆ

ಇನ್ನೊಂದು ವಾರದ ರಾಜ್ಯದಲ್ಲಿಯೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ, ರಾಜ್ಯ ನಾಯಕರ ದೆಹಲಿ ಪ್ರವಾಸ ಈ ತಿಂಗಳಲ್ಲಿ ಆಗುವುದು ಅನುಮಾನ. ರಾಹುಲ್ ಗಾಂಧಿ ವಿದೇಶದಿಂದ ಜೂ.28ಕ್ಕೆ ದೆಹಲಿಗೆ ಮರಳಲಿದ್ದಾರೆ. ಅನಂತರವೇ ಈ ಮೂವರು ನಾಯಕರನ್ನು ದೆಹಲಿಗೆ ಕರೆಸಿಕೊಂಡು, ಚರ್ಚಿಸುವ ಸಾಧ್ಯತೆಯಿದೆ. ಆದ್ದರಿಂದ ಜುಲೈನ ಮೂರನೇ ವಾರದಲ್ಲಿ ನಡೆಯುವ ಮಳೆಗಾಲದ ಅಧಿವೇಶನದ ವೇಳೆಗೆ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತ ಎನ್ನಲಾಗಿದೆ.

ಅಧಿವೇಶನ ಆರಂಭಕ್ಕೆ ಮುನ್ನ ಪುನಾರಚನೆ: ವರಿಷ್ಠರ ಭರವಸೆ

ಪ್ರತಿಭಟನೆ, ಬಲಪ್ರದರ್ಶನಕೆ ಅವಕಾಶ ಕೊಡದಿರಲು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸಚಿವಾಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸಂಪುಟ ವಿಸ್ತರಣೆ ವಿಷಯದಲ್ಲಿ ಅವಸರ ಬೇಡ ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಿದೆ. ಈ ಹಿಂದೆ ಜೂನ್ ಅಂತ್ಯಕ್ಕೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿತ್ತು. ರಾಹುಲ್ ಗಾಂಧಿ ಸದ್ಯ ಲಭ್ಯರಿಲ್ಲ. ಡಿ.ಕೆ.ಶಿ ಕುಮಾರ್, ಬಿ.ಕೆ.ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ಮೂವರು ದೆಹಲಿಗೆ ತೆರಳುವ ಲೆಕ್ಕಾಚಾರದಲ್ಲಿಲ್ಲ.

ಇನ್ನೊಂದು ವಾರದ ರಾಜ್ಯದಲ್ಲಿಯೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ, ರಾಜ್ಯ ನಾಯಕರ ದೆಹಲಿ ಪ್ರವಾಸ ಈ ತಿಂಗಳಲ್ಲಿ ಆಗುವುದು ಅನುಮಾನ. ರಾಹುಲ್ ಗಾಂಧಿ ವಿದೇಶದಿಂದ ಜೂ.28ಕ್ಕೆ ದೆಹಲಿಗೆ ಮರಳಲಿದ್ದಾರೆ. ಅನಂತರವೇ ಈ ಮೂವರು ನಾಯಕರನ್ನು ದೆಹಲಿಗೆ ಕರೆಸಿಕೊಂಡು, ಚರ್ಚಿಸುವ ಸಾಧ್ಯತೆಯಿದೆ. ಆದ್ದರಿಂದ ಜುಲೈನ ಮೂರನೇ ವಾರದಲ್ಲಿ ನಡೆಯುವ ಮಳೆಗಾಲದ ಅಧಿವೇಶನದ ವೇಳೆಗೆ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತ ಎನ್ನಲಾಗಿದೆ. ಆದರೆ ಈ ನಡುವೆ ಸಂಪುಟ ಆಕಾಂಕ್ಷಿಗಳು ಸ್ಥಳೀಯ ಮಟ್ಟದಲ್ಲಿ, ಬೆಂಗಳೂರಿನಲ್ಲಿ ಹಾಗೂ ದೆಹಲಿ ಮಟ್ಟದಲ್ಲಿ ಶಕ್ತಿ ಪ್ರದರ್ಶನವನ್ನು ಪದೇಪದೇ ಮಾಡುತ್ತಿರುವುದು ಪಕ್ಷದ ವರ್ಚಸ್ಸನ್ನು ಹಾಳು ಮಾಡುವುದರೊಂದಿಗೆ ಪ್ರತಿಪಕ್ಷಗಳಿಗೆ ಆಹಾರವಾಗುತ್ತಿದೆ. ಆದ್ದರಿಂದ ಈ ಬಲಪ್ರದರ್ಶನಗಳಿಗೆ ತಡೆ ಹಾಕುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Cabinet Meaning: ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ 'ಪ್ರಜಾಸೇವೆ ಇಲಾಖೆ' ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ

ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆ, ರ‍್ಯಾಲಿ, ಹೇಳಿಕೆ ಹಾಗೂ ನಾಯಕರ ಭೇಟಿಗೆ ಪ್ರಯತ್ನ ಮಾಡುವುದರಿಂದ ರಾಜ್ಯದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಈ ಎಲ್ಲವಕ್ಕೂ ಬ್ರೇಕ್ ಹಾಕುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಮಳೆಗಾಲದ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆಯಾಗಬೇಕು ಎನ್ನುವುದು ಪಕ್ಷದ ಹೈಕ ಮಾಂಡ್ ಮನಸ್ಸಿನಲ್ಲಿದೆ. ಆದರೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಸಮಯ ನೋಡಿಕೊಂಡು, ಮೊದಲ ಹಂತದಲ್ಲಿ ಮಲ್ಲಿ ಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸುರ್ಜೇವಾಲ ಹಾಗೂ ವೇಣುಗೋಪಾಲ್ ಅವರು ಚರ್ಚಿ ಸಿದ ಬಳಿಕ, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿ, ಅಂತಿಮ ಗೊಳಿಸಲಾಗುವುದು. ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿರುವ ಪಕ್ಷದ ಹೈಕಮಾಂಡ್, ಸಚಿವ ಸ್ಥಾನಕ್ಕಾಗಿ ಅನೇಕರು ನಿಮ್ಮನ್ನು ಹಾಗೂ ಬಿ.ಕೆ.ಹರಿಪ್ರಸಾದ್ ಅವರನ್ನು ಗುಂಪು ಕಟ್ಟಿಕೊಂಡು ಬಂದು ಮನವಿ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಬೆಳವಣಿಗೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ. ಸಮುದಾಯ, ಪ್ರದೇಶ ಸೇರಿದಂತೆ ವಿವಿಧ ಆಯಾಮದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವ ಒತ್ತಡ ಹೆಚ್ಚಾಗಿದ್ದು, ಇದಕ್ಕೆ ಬ್ರೇಕ್ ಹಾಕಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ದೆಹಲಿಗೆ ಆಕಾಂಕ್ಷಿಗಳು ಬರುವುದು ಬೇಡ

ಸಂಪುಟ ವಿಸ್ತರಣೆಯಾಗುವ ತನಕ ಹಲವು ಆಕಾಂಕ್ಷಿಗಳು ಭೇಟಿಗೆ ಅವಕಾಶವಿಲ್ಲದಿದ್ದರೂ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಪ್ರತಿ ಶಾಸಕ ದೆಹಲಿಗೆ ಹೋಗಿ ಬಂದಾಗ, ಬೇರೆ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಆಕಾಂಕ್ಷಿಗಳು ಯಾರೂ ದೆಹಲಿಗೆ ಬರುವುದು ಬೇಡ ಎನ್ನುವ ಕಿವಿಮಾತನ್ನು ಹೇಳುವಂತೆ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಆಕಾಂಕ್ಷಿಗಳು ದೆಹಲಿಗೆ ಬರುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ನಾವು ಸೂಕ್ತ ಸಮಯದಲ್ಲಿ ನಾಯಕರನ್ನು ಕರೆಸಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ಕೊಡಿ

ಸಚಿವ ಸಂಪುಟದಲ್ಲಿ ಸ್ಥಾನ ಕೇಳುತ್ತಿರುವ ನಾಯಕರು ಮೊದಲು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ. ಕೆಲವೇ ತಿಂಗಳಲ್ಲಿ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿದೆ. ಈ ಹಂತದಲ್ಲಿ ಸಚಿವ ಸ್ಥಾನದ ವಿಷಯದಲ್ಲಿ ಗೊಂದಲ, ಗಲಾಟೆಗಳಿಂದ ಪಕ್ಷಕ್ಕೆ ಹೊಡೆತ ಬೀಳುವುದು ಬೇಡ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು, 2028ರ ಚುನಾವಣೆಗೆ ಸಿದ್ಧತೆ ಆರಂಭಿಸಿ. ಹಿರಿಯ ನಾಯಕರುಗಳಿಗೆ ಪಕ್ಷದ ಸಂಘಟನೆಗೆ ಒತ್ತು ನೀಡುವುದಕ್ಕೆ ಬಳಸಿಕೊಳ್ಳುವಂತೆ ಹೈಕಮಾಂಡ್ ಸಂದೇಶ ರವಾನಿಸಿದೆ.

ವರಿಷ್ಠರ ನಿಲುವೇನು?

ಜುಲೈನಲ್ಲಿ ನಡೆಯುವ ರಾಜ್ಯ ವಿಧಾನ ಸಭಾ ಮಳೆಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಖಚಿತ

ಅದಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ವೇಣುಗೋಪಾಲ್ರೊಂದಿಗೆ ರಾಹುಲ್ ಗಾಂಧಿ ಚರ್ಚೆ

ಅನಂತರ ಸಿಎಂ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಜೊತೆ ಮಾತುಕತೆ

ವಿವಿಧ ಮಾತುಕತೆ ನಂತರ ಸಚಿವರಪಟ್ಟಿ, ಆತುರ ಮಾಡಬೇಡಿ,

ಪಕ್ಷದವರ್ಚಸ್ಸಿಗೆ ಹಾನಿ ಮಾಡಬೇಡಿ: ಸಂದೇಶ

ಪದೇಪದೇ ದೆಹಲಿಗೆ ಬರುವುದು, ಬಲಪ್ರದರ್ಶಿಸುವುದು ಬೇಡ, 2028ರ ಚುನಾವಣೆಗೆ ಪಕ್ಷ ಸಂಘಟಿಸಿ: ವರಿಷ್ಠರು