ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yogesh Gowda Murder Case: ಮೂವರು ಮಕ್ಕಳು ಇದ್ದಾರೆ, ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

MLA Vinay Kulkarni: ಶಾಸಕ ವಿನಯ್‌ ಕುಲಕರ್ಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು, ವಿನಯ್‌ ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಗೆದ್ದಿದ್ದಾರೆ. ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ಅವರಿಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದಾರೆ.

ಶಾಸಕ ವಿನಯ್‌ ಕುಲಕರ್ಣಿ.

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ (ಏ.17) ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ವಿಚಾರಣೆ ವೇಳೆ ಕೇಸ್‌ನಲ್ಲಿ ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು, ಅಪರಾಧಿಗಳಿಗೆ ಕ್ಷಮಾದಾನವಿಲ್ಲದ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಡ್ಜ್‌ ಅವರನ್ನು ಕೋರಿದ್ದಾರೆ. ಆದರೆ, ಈ ವೇಳೆ ತಮಗೆ ಪ್ರಕರಣದಲ್ಲಿ ಕಡಿಮೆ ಶಿಕ್ಷೆ ವಿಧಿಸಲು ನ್ಯಾಯಾಧೀಶರನ್ನು ಶಾಸಕ ವಿನಯ್‌ ಕುಲಕರ್ಣಿ (MLA Vinay Kulkarni) ಕೋರಿರುವುದು ಕಂಡುಬಂದಿದೆ.

ಪ್ರಕರಣದಲ್ಲಿ 17 ಮಂದಿಯನ್ನು ಕೊಲೆ ಪ್ರಕರಣದಲ್ಲಿ ದೋಷಿಗಳು ಎಂದು ನಿರ್ಧರಿಸಿದ್ದು, ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ನಾಳೆ ತೀರ್ಪು ಪ್ರಕಟಿಸುವುದಾಗಿ ಹೇಳಿದರು.

ಗುರುವಾರ ವಿಚಾರಣೆ ವೇಳೆ ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು ವಾದ ಮಂಡಿಸಿ, “ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರುವುದಿಲ್ಲ. ಬದಲಿಗೆ ಕ್ಷಮಾದಾನವಿಲ್ಲದ ಜೀವನ ಪರ್ಯಂತ ಶಿಕ್ಷೆ ವಿಧಿಸಬೇಕು” ಎಂದು ಕೋರಿದರು.

“ಸಂತ್ರಸ್ತನಾದ ಯೋಗೀಶ್‌ ಗೌಡನ ಕಣ್ಣಿಗೆ ಖಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸ್‌ ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಹೀಗಾಗಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು.

ವಿನಯ್‌ ಕುಲಕರ್ಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು, “ವಿನಯ್‌ ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಗೆದ್ದಿದ್ದಾರೆ. ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು” ಎಂದು ಕೋರಿದರು.

ಗಲಾಟೆ ಕೇಸ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರನಿಗೆ ತಾತ್ಕಾಲಿಕ ರಿಲೀಫ್‌; ವಿಚಾರಣೆಗೆ ಹೈಕೋರ್ಟ್‌ ತಡೆ

ನ್ಯಾಯಾಲದಯ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್‌ ಕುಲಕರ್ಣಿ, “27 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೂವರು ಮಕ್ಕಳಿದ್ದು, ಅವರು ಮದುವೆ ವಯಸ್ಸಿಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದು, ಒಮ್ಮೆ ಸಚಿವನಾಗಿದ್ದೇನೆ. ಎರಡು ಬಾರಿ ಸಂಸತ್‌ ಚುನಾವನೆಯಲ್ಲಿ ನಿಂತು ಸೋತಿದ್ದೇನೆ. ಈ ಪ್ರಕರಣದಿಂದಾಗಿ ನನ್ನ ಕ್ಷೇತ್ರದ ಜನರಿಗೂ ಅನ್ಯಾಯವಾಗಿದೆ. ಹೀಗಾಗಿ, ನನಗೆ ಕಡಿಮೆ ಶಿಕ್ಷೆ ವಿಧಿಸಬೇಕು” ಎಂದು ಮನವಿ ಮಾಡಿದರು.