ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

World Motorcycle Day: ಒಟ್ಟಾಗಿ ಸವಾರಿ ಮಾಡಿ ಸಂಭ್ರಮಿಸಿದ 2 ಸಾವಿರಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ರೈಡರ್‌ಗಳು

ಈ ಬೃಹತ್ ಸಂಭ್ರಮದಲ್ಲಿ ಭಾರತದ 19 ರಾಜ್ಯಗಳ 59 ನಗರಗಳಿಂದ ಬರೋಬ್ಬರಿ 2,000ಕ್ಕೂ ಹೆಚ್ಚು ಬೈಕ್ ರೈಡರ್‌ ಉತ್ಸಾಹಿಗಳು ಪಾಲ್ಗೊಂಡಿದ್ದರು. ಯುವಕರಿಂದ ಹಿಡಿದು ಹಿರಿಯರವರೆಗೆ, ತಾವು ಬಳಸುವ ಬ್ರ್ಯಾಂಡ್ ಮತ್ತು ಹಿನ್ನೆಲೆಯ ಭೇದವನ್ನು ಮರೆತು, ಮೋಟಾರ್‌ಸೈಕ್ಲಿಂಗ್ ಮೇಲಿನ ತಮ್ಮ ಪ್ರೀತಿ ಮತ್ತು ಒಗ್ಗಟ್ಟನ್ನು ಇವರು ಈ ಸಂದರ್ಭದಲ್ಲಿ ಪ್ರದರ್ಶಿಸಿದರು.

ಬೆಂಗಳೂರು: ಬೈಕ್ ಓಡಿಸುವುದು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಪ್ರಯಾಣವಲ್ಲ; ಅದೊಂದು ಸಾಹಸ, ಸ್ವಾತಂತ್ರ್ಯ ಮತ್ತು ಸಂಭ್ರಮದ ಪ್ರತೀಕ. ಇಂತಹ ಮೋಟಾರ್‌ ಸೈಕ್ಲಿಂಗ್ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಆಚರಿಸುವ 'ವಿಶ್ವ ಮೋಟಾರ್‌ಸೈಕಲ್ ದಿನ' ದಂದು (ಜೂ.21), ಖ್ಯಾತ ಬೈಕ್ ತಯಾರಕ ಸಂಸ್ಥೆ 'ಕ್ಲಾಸಿಕ್ ಲೆಜೆಂಡ್ಸ್' ವಿಶೇಷ ಕಾರ್ಯಕ್ರಮ ವೊಂದನ್ನು ಆಯೋಜಿಸಿತ್ತು.

ದೇಶದ ಮೂಲೆ ಮೂಲೆಗಳಲ್ಲಿರುವ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್ ಸಮುದಾಯದ ರೈಡರ್‌ಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಕ್ಲಾಸಿಕ್ ಲೆಜೆಂಡ್ಸ್ ಈ ದಿನವನ್ನು ಸ್ಮರಣೀಯ ವಾಗಿಸಿತು.

2,000ಕ್ಕೂ ಹೆಚ್ಚು ರೈಡರ್‌ಗಳಿಂದ ಬೈಕ್‌ ರೈಡ್‌

ಈ ಬೃಹತ್ ಸಂಭ್ರಮದಲ್ಲಿ ಭಾರತದ 19 ರಾಜ್ಯಗಳ 59 ನಗರಗಳಿಂದ ಬರೋಬ್ಬರಿ 2,000ಕ್ಕೂ ಹೆಚ್ಚು ಬೈಕ್ ರೈಡರ್‌ ಉತ್ಸಾಹಿಗಳು ಪಾಲ್ಗೊಂಡಿದ್ದರು. ಯುವಕರಿಂದ ಹಿಡಿದು ಹಿರಿಯರವರೆಗೆ, ತಾವು ಬಳಸುವ ಬ್ರ್ಯಾಂಡ್ ಮತ್ತು ಹಿನ್ನೆಲೆಯ ಭೇದವನ್ನು ಮರೆತು, ಮೋಟಾರ್‌ಸೈಕ್ಲಿಂಗ್ ಮೇಲಿನ ತಮ್ಮ ಪ್ರೀತಿ ಮತ್ತು ಒಗ್ಗಟ್ಟನ್ನು ಇವರು ಈ ಸಂದರ್ಭದಲ್ಲಿ ಪ್ರದರ್ಶಿಸಿದರು.

ಇದನ್ನೂ ಓದಿ: Biker Movie: ಶರ್ವಾನಂದ್ ನಟನೆಯ 'ಬೈಕರ್' ಮೂವಿ ಒಟಿಟಿ ಎಂಟ್ರಿ ಯಾವಾಗ?

ರಕ್ಷಣೆ ಮತ್ತು ಕಾಳಜಿಯ 'ಗಾರ್ಡಿಯನ್ ಬೆಲ್' ವಿತರಣೆ

ಈ ಆಚರಣೆಯ ಪ್ರಮುಖ ಆಕರ್ಷಣೆ ಎಂದರೆ 'ಗಾರ್ಡಿಯನ್ ಬೆಲ್ ಇನಿಶಿಯೇಟಿವ್'. ಈ ಗಾರ್ಡಿ ಯನ್ ಬೆಲ್ (ಸಣ್ಣ ಗಂಟೆ) ಎಂದರೆ ಜಗತ್ತಿನಾದ್ಯಂತ ಬೈಕ್ ಸವಾರರು ಪರಸ್ಪರ ಗೌರವಿಸುವ ಒಂದು ವಿಶಿಷ್ಟ ಸಂಪ್ರದಾಯ. ತಮ್ಮ ಸಹ-ರೈಡರ್, ಆಪ್ತ ಸ್ನೇಹಿತ ಅಥವಾ ಪ್ರೀತಿಪಾತ್ರರಿಗೆ ಈ ಗಂಟೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇದು ಬೈಕ್ ಪ್ರಯಾಣದ ಉದ್ದಕ್ಕೂ ಅವರಿಗೆ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ. ಹೀಗಾಗಿ ಶುಭಹಾರೈಕೆಯ ಸಂಕೇತವಾಗಿ ಇದನ್ನು ನೀಡಲಾಗು ತ್ತದೆ.

ಅಂತೆಯೇ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈಡರ್‌ಗಳಿಗೆ ಈ ಗಾರ್ಡಿಯನ್ ಬೆಲ್‌ಗಳನ್ನು ವಿತರಿಸಲಾಯಿತು ಮತ್ತು ಅವರು ಅದನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಸಹೋದರತ್ವ ಹಾಗೂ ಕಾಳಜಿಯನ್ನು ಹಂಚಿಕೊಂಡರು.

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸ್ಥಾಪಕ ಅನುಪಮ್ ಥರೇಜಾ, "ಮೋಟಾರ್‌ಸೈಕ್ಲಿಂಗ್ ಎಂದರೆ ಕೇವಲ ಎರಡು ಚಕ್ರದ ಯಂತ್ರಗಳ ಸವಾರಿಯಲ್ಲ. ಬದಲಾಗಿ ರಸ್ತೆಯ ಪ್ರಯಾಣದಲ್ಲಿ ಬೆಸೆಯುವ ಸಂಬಂಧಗಳು ಮತ್ತು ಹಂಚಿಕೊಳ್ಳುವ ಅನುಭವಗಳಾಗಿವೆ. ನಮ್ಮ ಈ 'ಗಾರ್ಡಿಯನ್ ಬೆಲ್' ಉಪಕ್ರಮದ ಮೂಲಕ ರೈಡರ್‌ಗಳಲ್ಲಿ ಪರಸ್ಪರ ಕಾಳಜಿ ವಹಿಸುವ ಗುಣ ಬೆಳೆಯಲಿ ಹಾಗೂ ಬೈಕ್ ಸಮುದಾಯದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ ಎಂದು ನಾವು ಆಶಿಸುತ್ತೇವೆ" ಎಂದರು.

ಕೇವಲ ಬೈಕ್‌ಗಳನ್ನು ತಯಾರಿಸುವುದಷ್ಟೇ ಅಲ್ಲ, ಬೈಕ್ ಅಭಿಮಾನಿಗಳ ನಡುವೆ ಸಂಬಂಧ ಬೆಸೆಯುವುದು, ಒಂದು ಸಮುದಾಯವನ್ನು ಕಟ್ಟುವುದು ಕ್ಲಾಸಿಕ್ ಲೆಜೆಂಡ್ಸ್‌ನ ಉದ್ದೇಶವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿದೆ.