ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೇ 1 ರಿಂದ ಕರ್ನಾಟಕದಲ್ಲಿ ಮೋಟಾರು ವಾಹನ ತಿದ್ದುಪಡಿ ಬಿಲ್‌ ಜಾರಿ

ಕರ್ನಾಟಕ ಸರ್ಕಾರವು ಮೋಟಾರು ವಾಹನಗಳ (Motor Vehicle) ತೆರಿಗೆ ದರವನ್ನು ಕಡಿತಗೊಳಿಸಿದ್ದು, ಪರಿಷ್ಕೃತ ತೆರಿಗೆ ವಿಧೇಯಕವೂ ನಾಳೆ ಮೇ 1ರಿಂದ ಜಾರಿಗೆ ಬರಲಿದೆ. ಸಾರಿಗೆ ಇಲಾಖೆಗೆ ಈಗಾಗಲೇ ಸರ್ಕಾರ ಸೂಚನೆ ನೀಡಿದ್ದು, ಮೇ 1ರಿಂದ ಹೊಸ ದರಗಳು ಜಾರಿಯಾಗಲಿವೆ.

ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಸರ್ಕಾರವು ಮೋಟಾರು ವಾಹನಗಳ ( Motor Vehicle Amendment Bill) ತೆರಿಗೆ ದರವನ್ನು ಕಡಿತಗೊಳಿಸಿದ್ದು, ಪರಿಷ್ಕೃತ ತೆರಿಗೆ ವಿಧೇಯಕವೂ ನಾಳೆ ಮೇ 1ರಿಂದ ಜಾರಿಗೆ ಬರಲಿದೆ. ಸಾರಿಗೆ ಇಲಾಖೆಗೆ ಈಗಾಗಲೇ ಸರ್ಕಾರ ಸೂಚನೆ ನೀಡಿದ್ದು, ಮೇ 1ರಿಂದ ಹೊಸ ದರಗಳು ಜಾರಿಯಾಗಲಿವೆ. ಈ ಕ್ರಮದಿಂದಾಗಿ ರಾಜ್ಯದಲ್ಲಿ ವಾಹನಗಳ ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ವಾಹನ ಮಾಲೀಕರಿಗೆ ಆರ್ಥಿಕ ಹೊರೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.

12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಇಂತಹ ವಾಹನಗಳ ಪ್ರತಿ ಆಸನಕ್ಕೆ ವಿಧಿಸಲಾಗುತ್ತಿದ್ದ ತೆರಿಗೆಯಲ್ಲಿ 1,000 ರೂ. ಕಡಿತ ಮಾಡಲಾಗಿದೆ. ಈ ಹಿಂದೆ ಪ್ರತಿ ಸೀಟಿಗೆ ₹3,500 ಇದ್ದ ತೆರಿಗೆಯು ಈಗ 2,500 ರೂ. ಕ್ಕೆ ಇಳಿಕೆಯಾಗಲಿದೆ.ಅದೇ ರೀತಿ 4,000 ರೂ. ಇದ್ದ ತೆರಿಗೆ ದರವು 3,000 ರೂ. ಕ್ಕೆ ಇಳಿಕೆಯಾಗಲಿದೆ. ರಾಜ್ಯದಲ್ಲಿ ಹೆಚ್ಚಿನ ತೆರಿಗೆಯ ಹೊರೆಯಿಂದಾಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ನೆರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಿದ್ದರು. ಇದನ್ನು ತಡೆಗಟ್ಟಲು ಮತ್ತು ಕರ್ನಾಟಕದಲ್ಲೇ ವಾಹನಗಳ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡಲು ಸರ್ಕಾರವು ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಈ ತಿದ್ದುಪಡಿಯ ವಿಧೇಯಕವನ್ನು ಮಂಡಿಸಿತ್ತು.

ತೆರಿಗೆ ಕಡಿಮೆ ಎಂಬ ಕಾರಣಕ್ಕೆ ಅನ್ಯರಾಜ್ಯಗಳಲ್ಲಿ ವಾಹನಗಳ ನೋಂದಣಿಯಾಗುತ್ತಿರುವುದನ್ನು ತಪ್ಪಿಸಿ ರಾಜ್ಯದಲ್ಲಿಯೇ ನೋಂದಣಿಗೆ ಪ್ರೋತ್ಸಾಹ ನೀಡಲು, ವಾಣಿಜ್ಯ ಉದ್ದೇಶದ ಟ್ರ್ಯಾಕ್ಟ‌ರ್, ಪವ‌ರ್ ಟಿಲ್ಲರ್, ಟ್ರೇಲರ್‌ಗಳ ನೋಂದಣಿ, ಜೀವಿತಾವಧಿ ತೆರಿಗೆ ಪರಿಷ್ಕರಿಸಲು ಹಾಗೂ ಕಾರು, ಜೀಪು, ಓಮ್ಮಿ ಸೇರಿದಂತೆ ಖಾಸಗಿ ಸೇವಾ ವಾಹನಗಳ ನೋಂದಣಿ ತೆರಿಗೆಯಲ್ಲಿ ಹೆಚ್ಚಳ ಮಾಡಲು ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಮೋಟಾರು ವಾಹನ ಕಾಯ್ದೆಯಡಿ ಬೈಕ್ ಟ್ಯಾಕ್ಸಿಗಳ ನಿಷೇಧ ಸಮರ್ಥನೀಯವಲ್ಲ

ಕರ್ನಾಟಕದಿಂದ ಹೊರಗೆ ನೋಂದಣಿಯಾಗುವ ವಾಹನಗಳಿಗೆ ಶೇ 5ರಿಂದ 15ರಷ್ಟು ತೆರಿಗೆ ವಿಧಿಸಲಾಗುತ್ತದೆ. 10 ರೂ. ಲಕ್ಷದ ಒಳಗಿನ ವಾಹನಗಳಿಗೆ 10 ಲಕ್ಷದಿಂದ 15 ಲಕ್ಷದ ಒಳಗಿನ ವಾಹನಗಳಿಗೆ ಶೇ 10 ಹಾಗೂ 15 ಲಕ್ಷಕ್ಕಿಂತ ಅಧಿಕ ಮೌಲ್ಯದ ವಾಹನಗಳಿಗೆ ಶೇ 15ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈಗಾಗಲೇ ನೋಂದಣಿಯಾಗಿರುವ ವಾಹನಗಳು ನೋಂದಣಿಯಾದ ವರ್ಷದ ಆಧಾರದಲ್ಲಿ ಆಜೀವ ತೆರಿಗೆಯ ಶೇ 25ರಿಂದ ಶೇ 93ರಷ್ಟು ಮೊತ್ತ ನೀಡಬೇಬೇಕಾಗುತ್ತದೆ.

Vishakha Bhat Heggar

View all posts by this author