ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಂಟಿಆರ್‌ ಸಂಸ್ಥೆಯ ವಾರ್ಷಿಕ ಸಾಂಸ್ಕೃತಿಕ ಮತ್ತು ಆಹಾರ ಹಬ್ಬ ಎಂಟಿಆರ್ ಕರುನಾಡು ಸ್ವಾದ 2026 ಯಶಸ್ವಿ ಸಮಾರೋಪ

ಆಹಾರ ಮೇಳವು ಕರ್ನಾಟಕದ ಶ್ರೀಮಂತ ಆಹಾರ ಪರಂಪರೆಯ ವೈವಿಧ್ಯತೆ ಮತ್ತು ಸೊಗಸ ನ್ನು ಮರುಶೋಧಿಸಲು ಆಹಾರ ಪ್ರೇಮಿಗಳು, ಸಾಂಸ್ಕೃತಿಕ ಆಸಕ್ತರು ಮತ್ತು ಪಾಕ ಪ್ರವೀಣ ರನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸಿತು. ಪಾಕವಿಧಾನದ ಹಿಂದಿನ ಕಥೆ ಎಂಬ ವಿಷಯದ ಸುತ್ತ ಈ ಬಾರಿಯ ಆಹಾರ ಮೇಳ ಆಯೋಜಿತವಾಗಿತ್ತು. ಈ ವರ್ಷದ ಎಂಟಿಆರ್ ಕರುನಾಡು ಸ್ವಾದವು ಕರ್ನಾಟಕದ ಸ್ಥಳೀಯ ಪದಾರ್ಥಗಳ ಮಹತ್ವವನ್ನು ನೆರೆದ ಜನರಿಗೆ ಸಾರಿತು

ಎರಡು ದಿನಗಳ ಕಾಲ ನಡೆದ ಆಹಾರಮೇಳದಲ್ಲಿ ಪ್ರಾದೇಶಿಕ ಫ್ಲೇವರ್ ಗಳು ಮತ್ತು ಸಾಂಸ್ಕೃತಿಕ ಅನುಭವಗಳ ಸಂಗಮ; ಸಂಗೀತಕಾರ ವಾಸು ದೀಕ್ಷಿತ್ ಅವರು ಸಂಗೀತ ಸಂಯೋಜಿಸಿರುವ ವಿನೂತನ ಸಾಂಬಾರ್ ಹಾಡು ಬಿಡುಗಡೆ

ಬೆಂಗಳೂರು, ಏಪ್ರಿಲ್ 28, 2026: ಎಂಟಿಆರ್ ಸಂಸ್ಥೆಯು ಪ್ರತೀ ವರ್ಷ ಆಯೋಜಿಸು ತ್ತಿರುವ ತಮ್ಮ ಹೆಮ್ಮೆಯ ವಾರ್ಷಿಕ ಫುಡ್ ಫೆಸ್ಟಿವಲ್ ಆದ ಎಂಟಿಆರ್ ಕರುನಾಡು ಸ್ವಾದ ಕಾರ್ಯಕ್ರಮವನ್ನು ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ ನಲ್ಲಿ ಏ.25–26ರಂದು ಅದ್ದೂರಿಯಾಗಿ ಆಯೋಜಿಸಿದ್ದು, ಕಾರ್ಯಕ್ರಮವು ಯಶಸ್ವಿಯಾಗಿ ಸಮಾರೋಪ ಗೊಂಡಿದೆ. ಈ ಎರಡು ದಿನಗಳ ಸಂಭ್ರಮವನ್ನು ಜಿಬಿಎ ಮುಖ್ಯ ಆಯುಕ್ತರು ಹಾಗೂ ಬೆಂಗಳೂರಿನ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತಾಧಿಕಾರಿಗಳಾದ ಶ್ರೀ ಮಹೇಶ್ವರ್ ರಾವ್ ಎಂ, ಐ.ಎ.ಎಸ್. ಅವರು ಉದ್ಘಾಟಿಸಿದ್ದರು.

ಈ ವಿಶಿಷ್ಟ ಆಹಾರ ಮೇಳವು ಕರ್ನಾಟಕದ ಶ್ರೀಮಂತ ಆಹಾರ ಪರಂಪರೆಯ ವೈವಿಧ್ಯತೆ ಮತ್ತು ಸೊಗಸನ್ನು ಮರುಶೋಧಿಸಲು ಆಹಾರ ಪ್ರೇಮಿಗಳು, ಸಾಂಸ್ಕೃತಿಕ ಆಸಕ್ತರು ಮತ್ತು ಪಾಕ ಪ್ರವೀಣರನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸಿತು. ಪಾಕವಿಧಾನದ ಹಿಂದಿನ ಕಥೆ ಎಂಬ ವಿಷಯದ ಸುತ್ತ ಈ ಬಾರಿಯ ಆಹಾರ ಮೇಳ ಆಯೋಜಿತವಾಗಿತ್ತು. ಈ ವರ್ಷದ ಎಂಟಿಆರ್ ಕರುನಾಡು ಸ್ವಾದವು ಕರ್ನಾಟಕದ ಸ್ಥಳೀಯ ಪದಾರ್ಥಗಳ ಮಹತ್ವ ವನ್ನು ನೆರೆದ ಜನರಿಗೆ ಸಾರಿತು.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಉದ್ಘಾಟನಾ ದಿನದ ರಾತ್ರಿಯಂದು ಕರ್ನಾಟಕದ ಆರು ಪ್ರಮುಖ ಪ್ರದೇಶಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಹಳೇ ಮೈಸೂರು ಪ್ರಾಂತ್ಯಗಳ ವೈವಿಧ್ಯಮಯ ಆಹಾರ ಪದ್ಧತಿಯನ್ನು ಪ್ರದರ್ಶಿಸಲಾಯಿತು. 75ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನದೊಂದಿಗೆ, ಅತ್ಯಂತ ಪ್ರಸಿದ್ಧ ಅಡುಗೆ ಕ್ರಮಗಳು ಹಾಗೂ ಮರೆಯಾಗುತ್ತಿರುವ ಅಪರೂಪದ ರುಚಿಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಈ ಮೇಳವು ಒಂದು ಅಪೂರ್ವ ಆಹಾರ ಸಂಗ್ರಹಾಲಯದಂತೆ ಗಮನ ಸೆಳೆಯಿತು.

ಎಂಟಿಆರ್‌ ನ ಪಾಕಪ್ರವೀಣರು ಮತ್ತು ಗೃಹಿಣಿಯರು ಸೇರಿ ರೂಪಿಸಿರುವ ಈ ಹಬ್ಬದಲ್ಲಿ, ಕರ್ನಾಟಕದ ಅಡುಗೆಯ ಅಸಲಿತನ, ಸುಸ್ಥಿರತೆ ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸ್ಥಳೀಯ ಮತ್ತು ಕಾಲೋಚಿತ ಪದಾರ್ಥಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ "ಒಂದು ಪ್ರಾಂತ್ಯ. ಒಂದು ವಿಶಿಷ್ಟ ಪದಾರ್ಥ. ಒಂದು ಮರೆಯಾದ ಪಾಕವಿಧಾನ" ಎಂಬ ಪರಿಕಲ್ಪನೆ. ಈ ಪರಿಕಲ್ಪನೆ ಅಡಿಯಲ್ಲಿ ಪ್ರತಿಯೊಂದು ಪ್ರಾಂತ್ಯದ ಸ್ಥಳೀಯ ಜ್ಞಾನ ಮತ್ತು ಹವಾಮಾನಕ್ಕೆ ಪೂರಕ ವಾದ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳನ್ನು ಇಲ್ಲಿ ಪರಿಚಯಿಸಲಾಯಿತು.

MTR Karunada Swada 2026 1 ok

ಕರುನಾಡ ಸ್ವಾದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಎಂಟಿಆರ್ ಸಂಸ್ಥೆಯು ತನ್ನ ಮಹ್ವಾಕಾಂಕ್ಷೆಯ 'ಕಾಫಿ ಟೇಬಲ್ ಬುಕ್' ನ ಎರಡನೇ ಆವೃತ್ತಿಯನ್ನು ಅನಾವರಣ ಗೊಳಿಸಿತು. ಈ ಕಾಫಿ ಟೇಬಲ್ ಬುಕ್ ಎಂಟಿಆರ್ ಸಂಸ್ಥೆಯು ಕರ್ನಾಟಕದ ಪಾಕ ಪರಂಪರೆ ಗೆ ಸಲ್ಲಿಸಿರುವ ಗೌರವಾರ್ಪಣೆಯಾಗಿದೆ. ಪಾಕವಿಧಾನದ ಹಿಂದಿನ ಕಥೆ ಎಂಬ ಶೀರ್ಷಿಕೆಯ ಈ ಪುಸ್ತಕವು ಕರ್ನಾಟಕದ 6 ಪ್ರಾಂತ್ಯಗಳಲ್ಲಿ ಬೆಳೆಯುವ ಮತ್ತು ಇಲ್ಲಿನ ಶ್ರೀಮಂತ ಆಹಾರ ಸಂಪ್ರದಾಯವನ್ನು ರೂಪಿಸಿದ ಪದಾರ್ಥಗಳ ಮಾಹಿತಿ, ವಿವರವನ್ನು ಒಳಗೊಂಡಿದೆ.

ಈ ಕರುನಾಡ ಸ್ವಾದ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಲು ಖ್ಯಾತ ಸಂಗೀತಗಾರ ವಾಸು ದೀಕ್ಷಿತ್ ಅವರು ವಿಶೇಷವಾಗಿ ಸಾಂಬಾರ್ ಹಾಡು ಸಂಯೋಜಿಸಿದ್ದು, ಈ ಹಾಡನ್ನು ಆಹಾರ ಮೇಳದಲ್ಲಿ ನೇರವಾಗಿ ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಲಾಯಿತು. ಈ ಹಾಡು ನಮ್ಮ ದೈನಂದಿನ ಜೀವನದ ಭಾಗವಾಗಿರುವ ಸಾಂಬಾರ್‌ ನ ಸುವಾಸನೆ, ನೆನಪು ಗಳು ಮತ್ತು ಆತ್ಮೀಯತೆಯನ್ನು ಸಂಭ್ರಮಿಸುವ ಮೂಲಕ, ಸಾಂಬಾರ್ ಅನ್ನು ಕೇವಲ ಒಂದು ಸಾಂಬಾರ್ ಆಗಿ ನೋಡದೆ ಒಗ್ಗಟ್ಟಿನ ಸಂಕೇತವಾಗಿ ಬಿಂಬಿಸುತ್ತದೆ.

ಸಂದರ್ಭದಲ್ಲಿ ಮಾತನಾಡಿದ ಎಂಟಿಆರ್‌ ಸಿಇಓ ಸುನಯ್ ಭಸಿನ್ ಅವರು, "ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಎಂಟಿಆರ್ ಕರ್ನಾಟಕದ ಪಾಕಪರಂಪರೆಯ ಮಹತ್ವದ ಭಾಗವಾಗಿ ಬೆಳೆದು ಬಂದಿದೆ. ಪ್ರಾದೇಶಿಕ ಅಡುಗೆಯ ಅಸಲಿತನವನ್ನು ಸಂರ ಕ್ಷಿಸಲು ಮತ್ತು ಸಂಭ್ರಮಿಸಲು ನಾವು ಸದಾ ಬದ್ಧರಾಗಿದ್ದೇವೆ. 'ಎಂಟಿಆರ್ ಕರುನಾಡು ಸ್ವಾದ' ಕಾರ್ಯಕ್ರಮವು ಈಗ ಪ್ರತಿ ಆಹಾರ ಪ್ರೇಮಿಯ ಕ್ಯಾಲೆಂಡರ್‌ ನಲ್ಲಿ ವಾರ್ಷಿಕ ನಿಗದಿತ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಇದು ಕರ್ನಾಟಕದ ಸ್ಥಳೀಯ ಪದಾರ್ಥ ಗಳನ್ನು ಗೌರವಿಸುವ, ಮರೆಯಾದ ಪಾಕವಿಧಾನಗಳನ್ನು ಪುನರುಜ್ಜೀವನಗೊಳಿಸುವ ಮತ್ತು ರಾಜ್ಯದ ಪ್ರಾದೇಶಿಕ ವೈವಿಧ್ಯತೆಯನ್ನು ಎತ್ತಿ ತೋರಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ಮೂಲಕ ಜನರನ್ನು ಕರ್ನಾಟಕದ ಆಹಾರ ಸಂಪ್ರದಾಯಗಳಿಗೆ ಇನ್ನಷ್ಟು ಹತ್ತಿರ ತರುತ್ತಿದೆ," ಎಂದು ತಿಳಿಸಿದರು.

ಆಹಾರದ ಜೊತೆಗೆ, ಈ ಹಬ್ಬದಲ್ಲಿ ಜಾನಪದ ಮತ್ತು ಶಾಸ್ತ್ರೀಯ ಕಲಾ ಪ್ರದರ್ಶನಗಳ ಮೂಲಕ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಸಂಗೀತ, ನೃತ್ಯ ಮತ್ತು ಕಲೆಯ ಮೂಲಕ ಕರ್ನಾಟಕದ ಚೇತನವನ್ನು ಜೀವಂತವಾಗಿರಿಸುವ ಈ ಆಹಾರ ಮೇಳವು, ಭೇಟಿ ನೀಡುವವರಿಗೆ ನಿಜವಾದ ಸಾಂಸ್ಕೃತಿಕ ಅನುಭವ ನೀಡಿತು.

ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚು ಆಹಾರ ಪ್ರೇಮಿಗಳು ಭಾಗಿ ಯಾದರು. ಈ ಮೂಲಕ ಬೆಂಗಳೂರಿನ ಅತ್ಯಂತ ನಿರೀಕ್ಷಿತ ಆಹಾರ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ಒಂದಾಗಿ ಈ ಮೇಳವು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು.