Murder Case: ತಂದೆಯ ಕೊಲೆಗೆ 16 ವರ್ಷ ಬಳಿಕ ಸೇಡು ತೀರಿಸಿಕೊಂಡ ಮಗ; ಮಾವನ ಕಗ್ಗೊಲೆ
ಆರೋಪಿ ಫಹಾದ್ ಚಿಕ್ಕವನಿದ್ದಾಗ ಆತನ ತಂದೆ ಅನ್ವರ್ ಪಾಷಾ ಎಂಬಾತನನ್ನು ಸಿರಾಜ್ ಕೊಚ್ಚಿ ಕೊಲೆ (Murder case) ಮಾಡಿದ್ದ. ಕಣ್ಣೆದುರೇ ನಡೆದ ತಂದೆಯ ಕಗ್ಗೊಲೆಯನ್ನು ಕಂಡಿದ್ದ ಫಹಾದ್ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದ. 16 ವರ್ಷಗಳ ನಂತರ ಸೇಡು ತೀರಿಸಿಕೊಳ್ಳುವ ಸಮಯ ಫಹಾದ್‌ಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru crime news) ಮತ್ತೊಂದು ಭೀಕರವಾದ ಕೊಲೆ (murder case) ನಡೆದಿದೆ. ತನ್ನ ಕಣ್ಣೆದುರೇ ತಂದೆಯನ್ನು (father) ಕೊಚ್ಚಿ ಕೊಲೆ ಮಾಡಿದ್ದ ಮಾವನನ್ನು ಅಳಿಯನೊಬ್ಬ ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ತನ್ನ ಮಾವ ಸಿರಾಜ್ (32) ಎಂಬಾತನನ್ನು ಆತನ ಅಳಿಯ ಫಹಾದ್ ಹತ್ಯೆಗೈದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕೊಲೆ ನಡೆದಿದೆ.
ಆರೋಪಿ ಫಹಾದ್ ಚಿಕ್ಕವನಿದ್ದಾಗ ಆತನ ತಂದೆ ಅನ್ವರ್ ಪಾಷಾ ಎಂಬಾತನನ್ನು ಸಿರಾಜ್ ಕೊಚ್ಚಿ ಕೊಲೆ ಮಾಡಿದ್ದ. ಕಣ್ಣೆದುರೇ ನಡೆದ ತಂದೆಯ ಕಗ್ಗೊಲೆಯನ್ನು ಕಂಡಿದ್ದ ಫಹಾದ್ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದ. 16 ವರ್ಷಗಳ ನಂತರ ಸೇಡು ತೀರಿಸಿಕೊಳ್ಳುವ ಸಮಯ ಫಹಾದ್‌ಗೆ ಬಂದಿದೆ. ಅನ್ವರ್ ಪಾಷಾ ಹತ್ಯೆ ಪ್ರಕರಣದಲ್ಲಿ ಸಿರಾಜ್ 10 ವರ್ಷ ಜೈಲಿನಲ್ಲಿ ಇದ್ದ. ಸದ್ಯ ಜೈಲಿನಿಂದ ಬಿಡುಗಡೆಯಾಗಿದ್ದ ಸಿರಾಜ್, ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ. ನಿನ್ನೆ ರಾತ್ರಿ ನಡು ರಸ್ತೆಯಲ್ಲಿಯೇ ಫಹಾದ್ ಕೈಗೆ ಈತ ಸಿಕ್ಕಿಬಿದ್ದಿದ್ದು, ಆತನನ್ನು ಅಟ್ಟಾಡಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಫಹಾದ್‌ನನ್ನು ರಾಮಮೂರ್ತಿನಗರ ಪೊಲೀಸರು ಆರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ದಾವಣಗೆರೆಯಲ್ಲಿ ರೌಡಿಶೀಟರ್ ಕಗ್ಗೊಲೆ
ದಾವಣಗೆರೆ: ಕುಖ್ಯಾತ ರೌಡಿಶೀಟರ್ (Rowdy sheeter) ಸಂತೋಷ್ ಕುಮಾರ್ ಎಂಬಾತನನ್ನು ಹಾಡಹಗಲೇ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ (hacked to death) ಬರ್ಬರವಾಗಿ ಹತ್ಯೆ (murder case) ಮಾಡಿದ್ದಾರೆ. ಮೃತನನ್ನು ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಎಂದು ಗುರುತಿಸಲಾಗಿದೆ. ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ತಂಡ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರ ಮುಂಭಾಗ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಬೀಳಿಸಿ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು ಹತ್ಯೆಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾದ ರೀತಿ ನೋಡಿದರೆ ವೈಯಕ್ತಿಕ ದ್ವೇಷ ಹಾಗೂ ಗ್ಯಾಂಗ್ ಇರುವ ಸಾಧ್ಯತೆ ಇದೆ. ಸುತ್ತಮುತ್ತಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: Murder Case: ಮೊಬೈಲ್ ಸ್ಪೀಕರ್ ಹಾಕಲು ಒತ್ತಾಯಿಸಿದ ಪತ್ನಿಯ ಕತ್ತು ಹಿಸುಕಿ ಕೊಲೆ