ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Murder Case: ಹೃದಯವಿದ್ರಾವಕ ಘಟನೆ: ಪಾರ್ಶ್ವವಾಯು ಪೀಡಿತ ತಾಯಿಯನ್ನು 4ನೇ ಅಂತಸ್ತಿನಿಂದ ತಳ್ಳಿ ಕೊಂದ ಮಗ

ತಾಯಿ ಪ್ರತಿದಿನ ಅನುಭವಿಸುತ್ತಿದ್ದ ನೋವು ಮತ್ತು ನರಳಾಟವನ್ನು ನೋಡಿ ವೆಂಕಟೇಶ್ ಮಾನಸಿಕವಾಗಿ ಕುಗ್ಗಿದ್ದ. ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲು ಆಗುತ್ತಿರಲಿಲ್ಲ, ಆ ಯಾತನೆಯ ಬದುಕಿನಿಂದ ಅವರಿಗೆ ಮುಕ್ತಿ ನೀಡಲು ಈ ನಿರ್ಧಾರ ಮಾಡಿದೆ ಎಂದು ವೆಂಕಟೇಶ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ಪಾರ್ಶ್ವವಾಯು ಪೀಡಿತ ತಾಯಿಯನ್ನು 4ನೇ ಅಂತಸ್ತಿನಿಂದ ತಳ್ಳಿ ಕೊಂದ ಮಗ

ಮೃತ ಸಾವಿತ್ರಮ್ಮ, ಆರೋಪಿ ವೆಂಕಟೇಶ್ -

ಹರೀಶ್‌ ಕೇರ
ಹರೀಶ್‌ ಕೇರ Apr 16, 2026 8:53 AM

ಬೆಂಗಳೂರು, ಏ.16: ಪಾರ್ಶ್ವವಾಯು (Stroke) ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಾಯಿಯ (mother) ಯಾತನೆಯನ್ನು ನೋಡಲಾಗದೆ, ಸ್ವಂತ ಮಗನೇ (son) ಆಕೆಯನ್ನು 4ನೇ ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ (murdr case) ಮಾಡಿರುವ ಹೃದಯವಿದ್ರಾವಕ ಘಟನೆ ರಾಜಧಾನಿಯ (bengaluru) ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಆರ್.ಆರ್. ನಗರದ ಬಿಇಎಂಎಲ್ 3ನೇ ಹಂತದ ನಿವಾಸಿ ಸಾವಿತ್ರಮ್ಮ (75) ಕೊಲೆಯಾದ ದುರ್ದೈವಿ.

ಇವರ ಮಗ ಸಿ. ವೆಂಕಟೇಶ್ ಅಲಿಯಾಸ್ ದಶರಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಖಾಸಗಿ ಕಂಪನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ತಾಯಿಯ ಆರೈಕೆ ಮಾಡುತ್ತಿದ್ದ. ಹಲವಾರು ಆಸ್ಪತ್ರೆಗಳಿಗೆ ತೋರಿಸಿದರೂ ತಾಯಿಯ ಆರೋಗ್ಯ ಸುಧಾರಿಸಿರಲಿಲ್ಲ.

ತಾಯಿ ಪ್ರತಿದಿನ ಅನುಭವಿಸುತ್ತಿದ್ದ ನೋವು ಮತ್ತು ನರಳಾಟವನ್ನು ನೋಡಿ ವೆಂಕಟೇಶ್ ಮಾನಸಿಕವಾಗಿ ಕುಗ್ಗಿದ್ದ.”ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಲು ಆಗುತ್ತಿರಲಿಲ್ಲ, ಆ ಯಾತನೆಯ ಬದುಕಿನಿಂದ ಅವರಿಗೆ ಮುಕ್ತಿ ನೀಡಲು ಈ ನಿರ್ಧಾರ ಮಾಡಿದೆ” ಎಂದು ವೆಂಕಟೇಶ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

Chikkamagaluru news: ಅಂಬೇಡ್ಕರ್‌ ಜಯಂತಿ ಮೆರವಣಿಗೆಗೆ ನುಗ್ಗಿದ ಕಾರು, ಬಾಲಕಿ ಸಾವು, ಹಲವರಿಗೆ ಗಾಯ

ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿಯನ್ನು ಎತ್ತಿಕೊಂಡು ಹೋದ ವೆಂಕಟೇಶ್, ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಸಾವಿತ್ರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.