ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರು ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಭಿಮನ್ಯುವಿಗೆ ನಿವೃತ್ತಿ, ಭೀಮನಿಗೂ ಮಿಸ್‌ ಆಯ್ತಾ ಚಾನ್ಸ್‌?

Dussehra Jambu Savari 2026: ದಸರಾ ಮಹೋತ್ಸವ ಅಂಗವಾಗಿ ದಸರಾ ಗಜಪಡೆಯ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅಭಿಮನ್ಯು ಆನೆಗೆ ವಿರಾಮ ನೀಡಿ ಹೊಸ ನಾಯಕತ್ವಕ್ಕೆ ಅರಣ್ಯ ಇಲಾಖೆ ಮಣೆ ಹಾಕಿದೆ. ಅರ್ಜುನನ ಬಳಿಕ ಅಭಿಮನ್ಯು ತಂಡವನ್ನು ಮುನ್ನಡೆಸಿದ್ದ. 60 ವರ್ಷ ಮೀರಿದ ಹಿನ್ನಲೆಯಲ್ಲಿ ಈ ಬಾರಿ ಅಭಿಮನ್ಯುಗೆ ವಿಶ್ರಾಂತಿ ನೀಡಲಾಗಿದೆ.

ಮೈಸೂರು ದಸರಾ ( ಸಂಗ್ರಹ ಚಿತ್ರ)

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ದಸರಾ ಗಜಪಡೆಯ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅಭಿಮನ್ಯು ಆನೆಗೆ ವಿರಾಮ ನೀಡಿ ಹೊಸ (Dussehra Jambu Savari 2026) ನಾಯಕತ್ವಕ್ಕೆ ಅರಣ್ಯ ಇಲಾಖೆ ಮಣೆ ಹಾಕಿದೆ. ಅರ್ಜುನನ ಬಳಿಕ ಅಭಿಮನ್ಯು (Abhimanyu) ತಂಡವನ್ನು ಮುನ್ನಡೆಸಿದ್ದ. 60 ವರ್ಷ ಮೀರಿದ ಹಿನ್ನಲೆಯಲ್ಲಿ ಈ ಬಾರಿ ಅಭಿಮನ್ಯುಗೆ ವಿಶ್ರಾಂತಿ ನೀಡಲಾಗಿದೆ. ಸತತ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಈ ಗಜರಾಜನಿಗೆ ಇದೀಗ ದಸರಾ ಕರ್ತವ್ಯದಿಂದ ನಿವೃತ್ತಿಯಂತಾಗಿದೆ.

ಸಂಪ್ರದಾಯದಂತೆ 14ರಿಂದ 15 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ನಾಗರಹೊಳೆ, ಬಂಡೀಪುರ ಸಂರಕ್ಷಿತಾರಣ್ಯ ಪ್ರದೇಶದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಿಗೆ ತೆರಳಿ ಆನೆಗಳ ಆರೋಗ್ಯ, ಸಾಮರ್ಥ್ಯ ಹಾಗೂ ಸ್ವಭಾವವನ್ನು ಕೂಲಂಕಷವಾಗಿ ಪರಿಶೀಲಿಸಿ 20 ರಿಂದ 25 ಆನೆಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಂಡಿದ್ದರು. ಆ.26ರಂದು ಗಜಪಯಣ ಮೂಲಕ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳನ್ನು ಮೊದಲ ಹಂತದಲ್ಲಿ ಕರೆತರಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಉಳಿದ ಆನೆಗಳನ್ನು ಕರೆತರಲು ಯೋಜಿಸಲಾಗಿದೆ.

ಅರಣ್ಯ ಸಚಿವ ರಾಮಲಿಂಗರೆಡ್ಡಿ ಬಿಡುಗಡೆ ಮಾಡಿರುವ ಗಜಪಡೆಯ ಪಟ್ಟಿಯ ಮೊದಲ ಹಂತದಲ್ಲಿ ಮಹೇಂದ್ರ, ಧನಂಜಯ, ಗೋಪಿ, ಶ್ರೀರಾಮ, ಲಕ್ಷ್ಮಿ, ಕಾವೇರಿ, ಸುಗ್ರೀವ, ಏಕಲವ್ಯ, ಪ್ರಶಾಂತ ಆಗಮಿಸಲಿದ್ದು, ಎರಡನೇ ಹಂತದಲ್ಲಿ ರೂಪ, ಚೈತ್ರಾ, ಶ್ರೀಕಂಠ ಆನೆಗಳು ಬರಲಿವೆ. ತುರ್ತು ಕಾರಣಗಳಿಗಾಗಿ ಬಲಿಷ್ಠ ಆನೆಗಳಾದ ಭೀಮ ಮತ್ತು ಹರ್ಷನನ್ನು ಅರಣ್ಯ ಇಲಾಖೆಯು ಮೀಸಲು ಪಡೆಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.

Mysuru Dasara 2026: ಈ ಬಾರಿ 11 ದಿನಗಳ ವಿಜೃಂಭಣೆಯ ಮೈಸೂರು ದಸರಾ; ಅ.11ಕ್ಕೆ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ

ಭೀಮನನ್ನು ಈ ಬಾರಿಯ ದಸರಾ ಪಟ್ಟಿಯಿಂದ ಕೈಬಿಡಲು ಮುಖ್ಯ ಕಾರಣ ಆತನಿಗೆ ಮದ ಏರಿದೆ ಎನ್ನಲಾಗಿದೆ. ಆನೆಗಳಿಗೆ ಮದ ಬಂದಾಗ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾಗಿ ಅವು ಅಶಾಂತ ಹಾಗೂ ಅತ್ಯಂತ ಆಕ್ರಮಣಕಾರಿ ಸ್ವಭಾವವನ್ನು ಪ್ರದರ್ಶಿಸುತ್ತವೆ. ಇಂತಹ ಸಂದರ್ಭದಲ್ಲಿ ಆನೆಗೆ ತಾಲೀಮು ನೀಡುವುದು ಅಪಾಯಕಾರಿ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡು ಭೀಮನನ್ನು ಆಯ್ಕೆ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಲಿರುವ ಈ ಗಜಪಡೆಗೆ ಅರಣ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಗುತ್ತದೆ.

Vishakha Bhat Heggar

View all posts by this author