ಸದನ ಕದನದ ಬಳಿಕ, ಬಿಜೆಪಿ-ಜೆಡಿಎಸ್‌ನಿಂದ ವಿಧಾನಸೌಧ ಚಲೋ
ಸಚಿವ ನಾಗೇಂದ್ರ ವಿರುದ ಹೋರಾಟ ಕೈಬಿಡದೇ ಇರಲು ನಿರ್ಧಾರ
ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲೇ ಬೇಕೆಂಬ ಪಟ್ಟನ್ನು ಇನ್ನಷ್ಟು ಬಿಗಿ ಗೊಳಿಸಲು ನಿರ್ಧರಿಸಿರುವ ಬಿಜೆಪಿ, ಸೋಮವಾರ ಇದೇ ವಿಷಯ ಮುಂದಿಟ್ಟುಕೊಂಡು ವಿಧಾನಸೌಧ ಚಲೋ ಹಮ್ಮಿಕೊಂಡಿದೆ. ಇದಕ್ಕೆ ಮಿತ್ರಪಕ್ಷ ಜೆಡಿಎಸ್ ಕೂಡ ಕೈಗೂಡಿಸಲಿದೆ. ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಳೆದೊಂದು ವಾರದಿಂದ ಸದನದ ಒಳಗೆ ಹೋರಾಟ ನಡೆಸುತ್ತಿರುವ ಬಿಜೆಪಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಆರಂಭದಲ್ಲಿ ಸೋಮವಾರದಿಂದ ಬರ, ನೈಸ್, ಬಿಡದಿ ವಿಷಯಗಳ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತದೆ. ಆದ್ದರಿಂದ ನಾಗೇಂದ್ರ ರಾಜೀನಾಮೆ ವಿಷಯವನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಒಂದು ವಾರದ ಹೋರಾಟದ ಬಳಿಕ ಯಾವುದೇ ತಾರ್ತಿಕ ಅಂತ್ಯವಿಲ್ಲದೇ ಹೋರಾಟ ಕೈಬಿಟ್ಟರೆ ಅದು ಇನ್ನೊಂದು ಸಂದೇಶವನ್ನು ರವಾನಿಸು ತ್ತದೆ ಎನ್ನುವ ಆತಂಕ ಬಿಜೆಪಿ ನಾಯಕ ರಲ್ಲಿದೆ. ಆದ್ದರಿಂದ ಇದೇ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: B Nagendra: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರಗೆ ತುಸು ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ
ಜೆಡಿಎಸ್ ಬೆಂಬಲ: ನಾಗೇಂದ್ರ ರಾಜೀನಾಮೆ ವಿಷಯದಲ್ಲಿ ಜೆಡಿಎಸ್-ಬಿಜೆಪಿ ಬಹಿರಂಗವಾಗಿ ಒಗ್ಗಟ್ಟಿನ ಮಂತ್ರ ಪಠಿಸಿಲ್ಲ ವಾದರೂ, ಸದನದಲ್ಲಿ ಬಿಜೆಪಿಯ ಹೋರಾ ಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿದೆ. ಇದೀಗ ಸೋಮವಾರ ನಡೆಯಲಿರುವ ಪ್ರತಿಭಟ ಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸುವ ಮೂಲಕ ಮೈತ್ರಿ ಒಗ್ಗಟ್ಟನ್ನು ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ವಿಜಯೇಂದ್ರ, ಅಶೋಕ್ ಚರ್ಚಿಸಿದ್ದು, ಹೋರಾಟದಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ಸದನದ ಒಳಗೆ ನಡೆಸುತ್ತಿರುವ ಹೋರಾಟದ ಕಿಡಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸೋಮವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್, ಛಲವಾದಿ ನಾರಾಯಣಸ್ವಾಮಿ ಬೆ.9.30ಕ್ಕೆ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಶಾಸಕರು ಸದನದಲ್ಲಿ ಹೋರಾಟ ಮುಂದುವರಿಸಿದರೆ, ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಮಾಜಿ ಶಾಸಕರು, ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷರು, ಪಕ್ಷದ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
![]()
ಇಲ್ಲಿ ನೆಲದ ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಲು ಅವಕಾಶವಿದೆ. ಬಿಜೆಪಿ ಯವರು ಗೂಂಡಾಗಿರಿ ಮಾಡುತ್ತಿದ್ದಾರೆ. ಒಂದು ನೋಟಿಸ್ ಕೂಡ ಕೊಡದೇ ಅಧಿವೇಶನದ ಕಲಾಪ ಗಳನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಪಕ್ಷ ಧರಣಿ ಮಾಡುವುದು ತಪ್ಪಲ್ಲ. ಆದರೆ ನೋಟಿಸ್ ನೀಡಿ ಚರ್ಚೆ ನಡೆಸಲಿ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
![]()
ನಾವು ನಿರಂತರವಾಗಿ ಹೋರಾಡುತ್ತೇವೆ. ರಾಜ್ಯಪಾಲರವರೆಗೂ ಹೋಗು ತ್ತೇವೆ. ನಾಗೇಂದ್ರ ಪರ ಯಾರೂ ಮಾತನಾಡುತ್ತಿಲ್ಲ. ಅವರ ರಾಜೀನಾಮೆ ಪಡೆದು ನೈಸ್, ಬಿಡದಿ ವಿಷಯ ಚರ್ಚೆಗೆ ಅವಕಾಶ ನೀಡುವ ಬುದ್ಧಿಯನ್ನು ದೇವರು ಕಾಂಗ್ರೆಸ್‌ಗೆ ನೀಡುತ್ತಾನೆ ಎಂಬ ಆಶಾಭಾವನೆಯಿದೆ.
-ಆರ್.ಅಶೋಕ್, ಪ್ರತಿಪಕ್ಷ ನಾಯಕ