ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

National Girl Child Day: ರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ರಾಜ್ಯ ಸರ್ಕಾರದಿಂದ ʼಹೆಣ್ಣು – ಪ್ರಗತಿಯ ಕಣ್ಣುʼ ಅಭಿಯಾನ

National Girl Child Day: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ರಾಜ್ಯ ಸರ್ಕಾರ ಸ್ತ್ರೀಸಬಲೀಕರಣಕ್ಕಾಗಿ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ʼಹೆಣ್ಣು – ಪ್ರಗತಿಯ ಕಣ್ಣುʼ ಎಂಬ ಶೀರ್ಷಿಕೆಯಡಿ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.

National Girl Child Day: ರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ರಾಜ್ಯ ಸರ್ಕಾರದಿಂದ ʼಹೆಣ್ಣು – ಪ್ರಗತಿಯ ಕಣ್ಣುʼ ಅಭಿಯಾನ

ರಾಷ್ಟ್ರೀಯ ಹೆಣ್ಣುಮಕ್ಕಳ ದಿನ

Profile Siddalinga Swamy Jan 24, 2025 10:19 PM

ಬೆಂಗಳೂರು, ಜ.24, 2025: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ (National Girl Child Day) ಅಂಗವಾಗಿ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಸ್ತ್ರೀಸಬಲೀಕರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ʼಹೆಣ್ಣು – ಪ್ರಗತಿಯ ಕಣ್ಣುʼ ಎಂಬ ಶೀರ್ಷಿಕೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ.

ಶಕ್ತಿ ಯೋಜನೆ (ಸ್ವಾಭಿಮಾನಿ ಬದುಕಿನೆಡೆಗೆ ಶಕ್ತಿಯ ಪಯಣ), ಗೃಹಲಕ್ಷ್ಮಿ ಯೋಜನೆ (ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಗೃಹಲಕ್ಷ್ಮಿ ನೆರವು), ಹೆಣ್ಣು ಮಕ್ಕಳ ಅಪೌಷ್ಟಿಕತೆ ನೀಗಿಸಲು ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ, ಶುಚಿ - ಮುಟ್ಟಿನ ನೈರ್ಮಲ್ಯ ಯೋಜನೆ, ಹೆಣ್ಣು ಭ್ರೂಣ ಹತ್ಯೆ ತಡೆಯಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರಗಳ ಅಧಿನಿಯಮದ ಜಾರಿ, ಅಕ್ಕ ಕೆಫೆ (ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಭದ್ರ ಬುನಾದಿ), ಮಾತೃತ್ವ ಸುರಕ್ಷತಾ ಅಭಿಯಾನ, ಕೂಸಿನ ಮನೆ (ರಾಜ್ಯದಲ್ಲಿ 3,867 ಕೂಸಿನ ಮನೆಗಳು ಆರಂಭ) ಮುಂತಾದ ಕಾರ್ಯಕ್ರಮಗಳ ಬಗೆಗಿನ ಮಾಹಿತಿಯನ್ನು ಈ ಅಭಿಯಾನವು ಒಳಗೊಂಡಿದೆ. ಇದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ರಾಜ್ಯದಲ್ಲಿ ಈ ಒಂದು ದಿನಕ್ಕೆ ಸೀಮಿತವಾಗಿಸದೇ ವರ್ಷವಿಡೀ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Film Shooting: ಇನ್ಮುಂದೆ ಅರಣ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ!