Navaratri Fashion 2025: ನವರಾತ್ರಿ ಡಿಸೈನರ್‌ವೇರ್ಸ್ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ
Navaratri Fashion 2025: ನವರಾತ್ರಿ ಸಂಭ್ರಮಿಸಲು ಮಹಿಳೆ ಹಾಗೂ ಪುರುಷರಿಗೆ ನಾನಾ ಶೈಲಿಯ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ. ಅವುಗಳನ್ನು ಸೆಲೆಕ್ಷನ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಡಿಸೈನರ್‌ಗಳು ಒಂದಿಷ್ಟು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.
ನವರಾತ್ರಿ ಸಂಭ್ರಮಿಸಲು ಮಹಿಳೆ ಹಾಗೂ ಪುರುಷರಿಗೆ ನಾನಾ ಶೈಲಿಯ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಬಿಡುಗಡೆಯಾಗಿದ್ದು, ಅವುಗಳನ್ನು ಖರೀದಿಸುವಾಗ ಹಾಗೂ ಸೆಲೆಕ್ಷನ್ ಒಂದಿಷ್ಟು ಅಂಶಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ಡಿಸೈನರ್‌ಗಳು. ಅವರ ಪ್ರಕಾರ, ಸೆಲೆಕ್ಷನ್ ಸಮಯದಲ್ಲಿ ಹೆಚ್ಚು ಕನ್ಫ್ಯೂಸ್ ಆಗದೇ ಟೆಂಡ್‌ಗೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ.
ಟ್ರೆಂಡ್‌ಗೆ ತಕ್ಕಂತೆ ಆಯ್ಕೆ ಮಾಡಿ
ಫೆಸ್ಟೀವ್ ಸೀಸನ್‌ಗೆ ನಾನಾ ಶೈಲಿಯ ಎಥ್ನಿಕ್‌ವೇರ್ ಬಿಡುಗಡೆಗೊಳ್ಳುತ್ತವೆ. ಹಾಗೆಂದು ಕಂಡ ಕಂಡದ್ದನ್ನೆಲ್ಲಾ ಕೊಳ್ಳುವುದು ಬೇಡ. ಮ್ಯಾಗಝೀನ್ ಹಾಗೂ ಜಾಹೀರಾತಿನಲ್ಲಿ ಬರುವ ಡಿಸೈನರ್‌ವೇರ್‌ಗಳ ಕಡೆ ಗಮನವಹಿಸಿ. ಸೋಷಿಯಲ್ ಮೀಡಿಯಾದಲ್ಲಿನ ಟ್ರೆಂಡ್‌ಗಳ ಬಗ್ಗೆ ಗಮನಿಸಿ. ಆಗಷ್ಟೇ ನೀವು ಟ್ರೆಂಡಿ ಉಡುಪನ್ನು ಖರೀದಿಸಬಹುದು.
ಹಬ್ಬಗಳ ಸಂಭ್ರಮಕ್ಕೆ ಸೂಟ್ ಆಗಲಿ
ನವರಾತ್ರಿಯಂದು ಆಚರಿಸುವ ಹಬ್ಬಗಳ ದಿನದ ವಿಶೇಷತೆಗೆ ತಕ್ಕಂತೆ ಉಡುಪುಗಳ ಸೆಲೆಕ್ಷನ್ ನಿಮ್ಮದಾಗಲಿ. ಅದರಲ್ಲೂಈ ಹಬ್ಬದಲ್ಲಿ ಬಣ್ಣಗಳ ವಿಶೇಷತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅದಕ್ಕೆ ಸೂಟ್ ಆಗುವಂತೆ ಕಲರ್ಸ್ ಚೂಸ್ ಮಾಡಿ.
ದಾಂಡಿಯಾ ಕಾರ್ಯಕ್ರಮಕ್ಕಾದಲ್ಲಿ ಹೀಗೆ ಮಾಡಿ
ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಾದರೇ ನಿಮ್ಮ ಆಯ್ಕೆ ಹೀಗಿರಬೇಕು. ಹುಡುಗಿಯರಿಗೆ ಗಾಗ್ರ, ಪುರುಷರಿಗೆ ಧೋತಿ, ಪೈಜಾಮ ದೊರೆಯುತ್ತವೆ. ಇವು ಡಾನ್ಸ್ ಆಡಲು ಆರಾಮ ಎನಿಸುತ್ತದೆ. ಇವನ್ನು ಆಯ್ಕೆ ಮಾಡಿಕೊಳ್ಳಬಹುದು. ನೋಡಲು ಟ್ರಡಿಷನಲ್ ಲುಕ್ ನೀಡುತ್ತದೆ.
ದೇಸಿ ಔಟ್‌ಫಿಟ್ಸ್ ಚೂಸ್ ಮಾಡಿ
ವೆಸ್ಟರ್ನ್ ಸ್ಟೈಲ್ ಸ್ಟೇಟ್‌ಮೆಂಟ್ ಬದಲಿಸಲಾಗದವರು ಜತೆ ಜತೆಗೆ ದೇಸಿ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್ ಆಗಲು ಈ ಕೆಲವು ಅಂಶಗಳನ್ನು ಪಾಲಿಸಬೇಕು. ದೇಸಿ ಲುಕ್‌ನಲ್ಲೆ ವೆಸ್ಟರ್ನ್ ಕಾನ್ಸೆಪ್ಟ್ ವೇರ್‌ನಂತಿರುವುದನ್ನು ಆಯ್ಕೆ ಮಾಡುವುದು ಬೆಸ್ಟ್. ಟೈಟ್ ಟೀ ಶರ್ಟ್ಸ್‌ಗೆ ಲೆಹೆಂಗಾ ಹಾಗೂ ಮ್ಯಾಚಿಂಗ್ ದುಪಟ್ಟಾ ದಂತವನ್ನು ಚೂಸ್ ಮಾಡಬಹುದು. ಇದು ಹೊಸ ಲುಕ್ ಕೊಡುತ್ತದೆ. ಚೂಡಿದಾರ್ ಬೇಡವಾದಲ್ಲಿ ಅದರ ಬದಲು ಲೆಗ್ಗಿಂಗ್ಸ್ ಜಾಗಕ್ಕೆ ಟೈಟ್ ಪ್ಯಾಂಟ್ ಅದಕ್ಕೆ ಪರ್ಫೆಕ್ಟ್ ಸೂಟ್ ಆಗುವ ಕುರ್ತಾ ಖರೀದಿಸಬಹುದು.
ಗ್ರ್ಯಾಂಡ್ ಡ್ರೆಸ್ ಟ್ರಯಲ್ ಅಗತ್ಯ
ಹುಡುಗಿಯರಾಗಲಿ ಹಾಗೂ ಹುಡುಗರಾಗಲಿ ಹಬ್ಬಕ್ಕೆಂದು ಗ್ರ್ಯಾಂಡ್ ಉಡುಪು ಕೊಳ್ಳುವಾಗ ಆದಷ್ಟೂ ಟ್ರಯಲ್ ನೋಡಿ. ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಿ. ಕಂಫರ್ಟಬಲ್ ಆಗಿದೆಯೇ ಎಂಬುದನ್ನು ಗಮನಿಸಿ. ಮಿರರ್‌ನಲ್ಲಿ ಎರಡೆರೆಡು ಬಾರಿ ನೋಡಿ ಫೈನಲ್ ಡಿಸೈಡ್ ಮಾಡಿ.