ಬೆಂಗಳೂರು: ದಪ್ಪ ದಪ್ಪ ಕಣ್ಣುಗಳು, ಹಣೆಗೆ ದೊಡ್ಡ ಕುಂಕುಮ ಬಿಂದಿ ಇಟ್ಟ ಮಹಿಳೆಯ ಫೋಟೊವನ್ನು (Big-Eyed Woman) ನಿರ್ಮಾಣ ಹಂತದ ಕಟ್ಟಡಗಳು, ತೋಟ, ಅಂಗಡಿಗಳ ಬಳಿ ದೃಷ್ಟಿಗೊಂಬೆಯಂತೆ ಬಳಸಿರುವುದನ್ನು ನೋಡಿರುತ್ತೀರಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿರುವ ಈ ಮಹಿಳೆ ಯಾರೆಂದು ಇದೀಗ ನೆಟ್ಟಿಗರು ಪತ್ತೆಹಚ್ಚಿದ್ದಾರೆ.
ಹೌದು, ಈ ಮಹಿಳೆ ಯಾರು ಎನ್ನುವುದನ್ನು ನೆಟ್ಟಿಗರು, ಎಐ ಸಹಾಯದಿಂದ ಪತ್ತೆ ಹಚ್ಚಿದ್ದಾರೆ. ಕರ್ನಾಟಕದ ಬೆಂಗಳೂರು ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಕಟ್ಟಡಗಳು, ತೋಟಗಳು, ಅಂಗಡಿಗಳಲ್ಲಿ ಈ ಮಹಿಳೆಯ ಚಿತ್ರವನ್ನು ದೃಷ್ಟಿಗೊಂಬೆಯಂತೆ ಬಳಸಲಾಗಿದೆ.
ವೈರಲ್ ಆದ ಮಹಿಳೆ ಯಾರು?
ದಪ್ಪ ದಪ್ಪ ಕಣ್ಣುಗಳಿಂದ ಹೆದರಿಸುವಂತೆ ನೋಡುವ ಈ ಮಹಿಳೆ ಹೆಸರು ನಿಹಾರಿಕಾ ರಾವ್. ಇವರು ಕರ್ನಾಟಕದ ಒಬ್ಬ ಯೂಟ್ಯೂಬರ್. 2023ರಲ್ಲಿ ಅವರ ಒಂದು ವಿಡಿಯೋದಲ್ಲಿನ ಮುಖಭಾವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದಾಗಿ ಕೆಲವೆ ದಿನಕ್ಕೆ ಅವರ ಫೋಟೋ ಎಲ್ಲ ಕಡೆ ಸಂಚಲನ ಸೃಷ್ಟಿಸಿದೆ ಎಂದು ಶಾಂತನು ಗೋಯೆಲ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು AI ತಂತ್ರಜ್ಞಾನ ಸಹಾಯದಿಂದ ಈ ಮಹಿಳೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ.
ಇವರ ಬಗ್ಗೆ ಮಾಹಿತಿ ಹುಡುಕಿದ್ದು ಹೇಗೆ?
ನೆಟ್ಟಿಗರೊಬ್ಬರು ಎಲ್ಲೆಡೆ ಈ ಮಹಿಳೆ ಪೋಸ್ಟರ್ ಇರುವುದನ್ನು ಕಂಡು, ಅದರ ಫೋಟೋ ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಂತಿಮವಾಗಿ ಅವರು 2026 ಜನವರಿ 5, ರಂದು ಎಕ್ಸ್ ನಲ್ಲಿ ಮಹಿಳೆಯ ಫೋಟೋ ಹಂಚಿಕೊಂಡು, ಈಕೆ ಯಾರು? ಎಂದು ಕೇಳಿದ್ದಾರೆ.
ದುಬಾರಿ ಕಾರಿನ ಮೇಲೆಲ್ಲ ಗೀಚಿ ಕಿಡಿಗೇಡಿಗಳ ಅಟ್ಟಹಾಸ; ವೈರಲ್ ವಿಡಿಯೊ
ಇದಕ್ಕೆ ಎಕ್ಸ್‌ನಲ್ಲಿ ಗಣೇಶ್ ಎನ್ನುವವರು ಕಮೆಂಟ್ ಮಾಡಿದ್ದು, ಇವರು ನಿಹಾರಿಕಾ, ಕರ್ನಾಟಕದ ಯೂಟ್ಯೂಬರ್ ಇವರನ್ನು ತರಕಾರಿ ಅಂಗಡಿ, ಕಟ್ಟಡ ನಿರ್ಮಾಣ ಜಾಗದಲ್ಲಿ ಕೆಟ್ಟ ದೃಷ್ಟಿ ಬೀಳದಂತೆ ತಡೆಯಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.