ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದುಬಾರಿ ಕಾರಿನ ಮೇಲೆಲ್ಲ ಗೀಚಿ ಕಿಡಿಗೇಡಿಗಳ ಅಟ್ಟಹಾಸ; ವೈರಲ್ ವಿಡಿಯೊ ಕಂಡು ನೆಟ್ಟಿಗರ ಆಕ್ರೋಶ

Viral Video: ಮನುಷ್ಯನ ಅಸೂಯೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಅಂದರೆ ತಾನು ಬೆಳೆಯಬಾರದು, ಬೇರೆಯವರನ್ನು ಬೆಳೆಸಬಾರದು ಎನ್ನುವ ಮಟ್ಟಕ್ಕೆ ತಲುಪಿದೆ‌. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊ ಇದಕ್ಕೆ ಉತ್ತಮ ಉದಾಹರಣೆ. ವ್ಯಕ್ತಿಯೊಬ್ಬರ ಕಾರನ್ನು ಕಿಡಿಗೇಡಿಗಳು ಅತಿ ಕ್ರೂರವಾಗಿ ಧ್ವಂಸಗೊಳಿಸಿದ ಘಟನೆ ನಡೆದಿದೆ. ಸದ್ಯ ಈ ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ದುಬಾರಿ ಕಾರನ್ನು ದ್ವಂಸಗೊಳಿಸಿದ ದುಷ್ಕರ್ಮಿ: ವಿಡಿಯೊ ವೈರಲ್

ದುಬಾರಿ ಕಾರಿನ ಮೇಲೆ ಕಿಡಿಗೇಡಿಗಳ ಅಟ್ಟಹಾಸ -

Profile
Pushpa Kumari Jan 5, 2026 10:37 PM

ಬೆಂಗಳೂರು, ಜ. 5: ಇತ್ತೀಚೆಗೆ ಮಾನವೀಯತೆ ಮರೆಯಾಗಿ ಮನುಷ್ಯನ ದುರಹಂಕಾರದ ವರ್ತನೆಗಳು ಹೆಚ್ಚಾಗುತ್ತಿವೆ. ಮನುಷ್ಯನ ಅಸೂಯೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ ತಾನು ಬೆಳೆಯಬಾರದು, ಬೇರೆಯವರನ್ನು ಬೆಳೆಸಬಾರದು ಎನ್ನುವ ಮಟ್ಟಕ್ಕೆ ತಲುಪಿದೆ‌. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿರುವ ಈ ವಿಡಿಯೊ ಇದಕ್ಕೆ ಉತ್ತಮ ಉದಾಹರಣೆ. ವ್ಯಕ್ತಿಯೊಬ್ಬರ ಕಾರಿನ ಮೇಲೆಲ್ಲ ಗೀಚಿ ಕಿಡಿಗೇಡಿಗಳು ವಿರೂಪಗೊಳಿಸಿದ ಘಟನೆ ನಡೆದಿದೆ. ಸದ್ಯ ಈ ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವ್ಯಕ್ತಿಯೊಬ್ಬ ತನ್ನ ಕಾರನ್ನು ಎಲ್ಲ ಕಡೆಯಿಂದ ಆಕ್ರಮಣಕಾರಿಯಾಗಿ ಧ್ವಂಸಗೊಳಿಸಿದ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ದುಬಾರಿ ಬೆಲೆಯ ಕಾರೊಂದನ್ನು ಪೂರ್ತಿಯಾಗಿ ಹಾಳು ಮಾಡಲಾಗಿದ್ದು, ಎಲ್ಲ ಭಾಗಗಳನ್ನು ಹರಿತವಾದ ವಸ್ತುವಿನಿಂದ ಗೀಚಲಾಗಿದೆ.‌ ಕಾರಿನ ಮುಂಭಾಗದಿಂದ ಹಿಡಿದು ಡೋರ್, ಬಾನೆಟ್ ಮೇಲೆ ಗೆರೆಗಳನ್ನು ಎಳೆಯಲಾಗಿದೆ. ಕಾರು ಗುರುತಿಸಲಾಗದಷ್ಟು ಧ್ವಂಸಗೊಳಿಸಲ್ಪಟ್ಟಿರುವುದನ್ನು ವಿಡಿಯೊ ತೋರಿಸುತ್ತದೆ.

ವಿಡಿಯೊ ನೋಡಿ:

ಕಾರು ಗುರುತು ಸಿಗದಷ್ಟು ಹಾನಿಯಾಗಿದ್ದು, ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಅಸೂಯೆಯಿಂದಲೇ ಮಾಡಲಾಗಿದೆ. ಕಾರಿನ ಮಾಲೀಕರೆ ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು "ಅಸೂಯೆ ಹೆಚ್ಚದಾಗ ಹೀಗಾಗುತ್ತದೆ" ಎಂದು ದುಃಖದಿಂದ ಬರೆದುಕೊಂಡಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. ಹಲವು ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿ, ಇದನ್ನು ಕುಸಿಯುತ್ತಿರುವ ನಾಗರಿಕ ಪ್ರಜ್ಞೆಯ ಉದಾಹರಣೆ ಎಂದು ಕರೆದಿದ್ದಾರೆ.

ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ!

ಸಾರ್ವಜನಿಕರು ಈ ಕೃತ್ಯಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು"ಇದು ಕೇವಲ ಅಸೂಯೆಯಲ್ಲ, ಮನುಷ್ಯನಲ್ಲಿ ನಾಗರಿಕ ಪ್ರಜ್ಞೆ ಕಾಣಿಯಾಗಿದೆ ಎಂಬುದಕ್ಕೆ ಸಾಕ್ಷಿ. ಬೇರೆಯವರನ್ನು ಗೌರವಿಸುವುದನ್ನು ಕಲಿಯದ ಹೊರತು ನಾವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ" ಎಂದು ಒಬ್ಬರು ಕಿಡಿಕಾರಿದ್ದಾರೆ. ಅಸೂಯೆ ಪಟ್ಟ ಜನರು ಹಾನಿ ಮಾಡಲು ಏನು ಬೇಕಾದರೂ ಮಾಡಬಹುದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.