ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ

ಬೆಂಗಳೂರು ಮತ್ತು ಮುಂಬೈ (Banglore- Mumbai) ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಆರಂಭಗೊಂಡಿದ್ದು, ಇದಕ್ಕೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಮೇ 23 ರಿಂದ ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಲಿದೆ.

ಸಂಗ್ರಹ ಚಿತ್ರ

ಬೆಂಗಳೂರು ಮತ್ತು ಮುಂಬೈ (Banglore- Mumbai) ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಆರಂಭಗೊಂಡಿದ್ದು, ಇದಕ್ಕೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರಿನ ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್‌ ಟರ್ಮಿನಲ್‌ಗೆ ವಾರಕ್ಕೆರಡು ಬಾರಿ ಸಂಚರಿಸುವ ಈ ನೂತನ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರಾಜ್ಯ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು. ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಎಸ್‌ಎಂವಿಟಿ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ನಿಲುಗಡೆ ಹೊಂದಲಿದೆ.

ಸಂಚಾರ ಯಾವಾಗ?

ಮೇ 23 ರಿಂದ ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಲಿದೆ. ಪ್ರತಿ ಮಂಗಳವಾರ, ಶನಿವಾರ ವಾರಕ್ಕೆ ಎರಡು ಬಾರಿ ಸಂಚರಿಸುತ್ತದೆ. ಮೇ 24 ರಿಂದ ರೈಲು ಸಂಖ್ಯೆ 16554 ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ – ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು ಪ್ರಾರಂಭವಾಗಲಿದೆ. ಪ್ರತಿ ಭಾನುವಾರ, ಬುಧವಾರ ಸಂಚಾರ ಮಾಡಲಿದೆ.

ಟರ್ಮಿನಸ್ ನಡುವಿನ ಸ್ಲೀಪರ್ ಕ್ಲಾಸ್ ಪ್ರಯಾಣದ ಟಿಕೆಟ್ ದರ 750 ರೂ., AC 3 ಟೈಯರ್‌ಗೆ 1880 ರೂ. ಮತ್ತು AC 2 ಟೈಯರ್‌ಗೆ 2575 ರೂ. ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮುಂಬೈಗೆ ರೈಲು ಟಿಕೆಟ್ ಬೆಲೆಗಳು ಪ್ರಯಾಣದ ವರ್ಗವನ್ನು ಅವಲಂಬಿಸಿ 550 ರೂ. ರಿಂದ 3,520 ರೂ. ವರೆಗೆ ಇರುತ್ತದೆ. ಬೆಂಗಳೂರಿನಿಂದ ಮುಂಬೈ ಸುಮಾರು 850 ಕಿ.ಮೀ ದೂರದಲ್ಲಿದೆ.

ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಸ್ಫೋಟ; ಸರಕು ರೈಲು ಹಳಿಗೆ ಹಾನಿ

ವಿಶೇಷ ರೈಲು SMVT ಬೆಂಗಳೂರಿನಿಂದ ಬೆಳಿಗ್ಗೆ 10:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10:30 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ. ರೈಲು ಸಂಖ್ಯೆ 16553 SMVT ಬೆಂಗಳೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಪ್ರತಿ ಶನಿವಾರ ಮತ್ತು ಮಂಗಳವಾರ ರಾತ್ರಿ 20:35 ಕ್ಕೆ SMVT ಬೆಂಗಳೂರಿನಿಂದ ಹೊರಟು ಭಾನುವಾರ ಮತ್ತು ಬುಧವಾರ ರಾತ್ರಿ 20:40 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪುತ್ತದೆ.

Vishakha Bhat Heggar

View all posts by this author