ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cybersecurity: ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಸೈಬರ್ ಭದ್ರತೆಗೆ ಹೊಸ ಸವಾಲು: ಡಾ.ಕೆ.ಆರ್.ವೇಣುಗೋಪಾಲ್

ಐಇಇಇ, ಡಬ್ಲ್ಯೂ ಐಇ ಬೆಂಗಳೂರು ಸೆಕ್ಷನ್‌ ಮತ್ತು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ʼಕ್ವಾಂಟಂʼ (ನಾವಿನ್ಯತೆ, ಬುದ್ಧಿವಂತಿಕೆ, ಪರಿಣಾಮ) ಕುರಿತು ವಿಚಾರಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಾಂಪ್ರದಾಯಿಕ ಕಂಪ್ಯೂಟರ್‌ ಗಳು 0 ಮತ್ತು 1 ಎಂಬ ನಿರ್ದಿಷ್ಟ ಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಒಂದೇ ಸಮಯದಲ್ಲಿ ಹಲವು ಸಾಧ್ಯತೆಗಳಿರುವ ಕ್ವಾಂಟಮ್ ಸ್ಥಿತಿಗಳನ್ನು ಬಳಸಿಕೊಳ್ಳಲಾಗುತ್ತದೆ

ಐಇಇಇ, ಡಬ್ಲ್ಯೂ ಐಇ ಬೆಂಗಳೂರು ಸೆಕ್ಷನ್‌ ಮತ್ತು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ನಡೆದ ʼಕ್ವಾಂಟಂʼ ಕುರಿತು ವಿಚಾರಗೋಷ್ಠಿಯಲ್ಲಿ ಬೆಂಗಳೂರು ವಿವಿ ನಿಕಟಪೂರ್ವ ಕುಲಪತಿ ಡಾ.ಕೆ.ಆರ್‌. ವೇಣುಗೋಪಾಲ್‌ ಅವರನ್ನು ಅಭಿನಂದಿಸಲಾಯಿತು.

ಬೆಂಗಳೂರು: ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನದ ಬೆಳವಣಿಗೆಯಿಂದ ಸಾಂಪ್ರದಾಯಿಕ ಕಂಪ್ಯೂಟಿಂಗ್ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಸೈಬರ್ ಭದ್ರತಾ ವ್ಯವಸ್ಥೆಗಳಿಗೆ ಹೊಸ ಸವಾಲುಗಳು ಎದುರಾಗಲಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯ(Bangalore University)ದ ನಿಕಟಪೂರ್ವ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಹೇಳಿದರು.

ಐಇಇಇ, ಡಬ್ಲ್ಯೂ ಐಇ ಬೆಂಗಳೂರು ಸೆಕ್ಷನ್‌ ಮತ್ತು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ʼಕ್ವಾಂಟಂʼ (ನಾವಿನ್ಯತೆ, ಬುದ್ಧಿವಂತಿಕೆ, ಪರಿಣಾಮ) ಕುರಿತು ವಿಚಾರಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಾಂಪ್ರದಾಯಿಕ ಕಂಪ್ಯೂಟರ್‌ ಗಳು 0 ಮತ್ತು 1 ಎಂಬ ನಿರ್ದಿಷ್ಟ ಸ್ಥಿತಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದರೆ, ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಒಂದೇ ಸಮಯದಲ್ಲಿ ಹಲವು ಸಾಧ್ಯತೆಗಳಿರುವ ಕ್ವಾಂಟಮ್ ಸ್ಥಿತಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಇದನ್ನೂ ಓದಿ: Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

ವಿಜ್ಞಾನಿ ಶ್ರೋಡಿಂಗರ್ ಅವರ ‘ಬೆಕ್ಕಿನ ಪ್ರಯೋಗ’, ನಾಣ್ಯವನ್ನು ಗಾಳಿಯಲ್ಲಿ ತಿರುಗಿಸುವ ಉದಾ ಹರಣೆ ಹಾಗೂ ಟನಲ್ ಡಯೋಡ್‌ನಲ್ಲಿನ ಎಲೆಕ್ಟ್ರಾನ್‌ಗಳ ಚಲನೆಯ ಮೂಲಕ ಸೂಪರ್‌ ಪೊಸಿಷನ್, ಕ್ವಾಂಟಮ್ ಟನಲಿಂಗ್ ಮತ್ತು ಎಂಟ್ಯಾಂಗಲ್‌ಮೆಂಟ್ ಪರಿಕಲ್ಪನೆಗಳನ್ನು ವಿವರಿಸಿ, ಕ್ವಾಂಟಮ್ ಸ್ಥಿತಿಯನ್ನು ಅಳೆಯುವ ಸಂದರ್ಭದಲ್ಲಿ ಅದು ನಿರ್ದಿಷ್ಟ ಸ್ಥಿತಿಗೆ ಬದಲಾಗುತ್ತದೆ. ಇದೇ ಕ್ವಾಂಟಮ್ ಕಂಪ್ಯೂಟಿಂಗ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಎಂದರು.

ವಸ್ತುಗಳು ಕಣ ಹಾಗೂ ಅಲೆ ಎಂಬ ದ್ವೈತ ಸ್ವರೂಪ ಹೊಂದಿವೆ ಎಂಬ ಡಿ ಬ್ರೊಗ್ಲಿ ಸಿದ್ಧಾಂತವನ್ನು ವಿವರಿಸಿದ ಅವರು, ಕ್ವಾಂಟಮ್ ಭೌತಶಾಸ್ತ್ರದ ಮೂಲಭೂತ ಪರಿಕಲ್ಪನೆಗಳೇ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನದ ಆಧಾರವಾಗಿವೆ. ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್ ಕುರಿತು ಮಾತನಾಡಿದ ಅವರು, ಎರಡು ಕ್ವಾಂಟಮ್ ಸ್ಥಿತಿಗಳು ಪರಸ್ಪರ ಸಂಬಂಧ ಹೊಂದಿರುವ ಸಂದರ್ಭ ದಲ್ಲಿ, ಒಂದು ಸ್ಥಿತಿಯ ಮಾಹಿತಿಯಿಂದ ಮತ್ತೊಂದು ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆ ಇದೆ. ಇಂತಹ ತಂತ್ರಜ್ಞಾನವು ಭವಿಷ್ಯದ ಗಣಕ ವ್ಯವಸ್ಥೆಗಳಲ್ಲಿ ವೇಗವಾದ ಸಂಸ್ಕರಣೆಗೆ ನೆರವಾಗಲಿದೆ ಎಂದರು.

ಬ್ಯಾಂಕಿಂಗ್, ಪಾಸ್‌ವರ್ಡ್‌ಗಳಿಗೆ ಸವಾಲು: ಕ್ವಾಂಟಮ್ ಕಂಪ್ಯೂಟಿಂಗ್ ಅಭಿವೃದ್ಧಿಯಾದಂತೆ ಪ್ರಸ್ತುತ ಬಳಕೆಯಲ್ಲಿರುವ ಕೆಲವು ಕ್ರಿಪ್ಟೋಗ್ರಾಫಿಕ್ ವ್ಯವಸ್ಥೆಗಳಿಗೆ ಸವಾಲು ಎದುರಾಗಬಹುದು. ವಿಶೇಷವಾಗಿ ಅರ್ ಎಸ್ ಎ ಸೇರಿದಂತೆ ಸಾರ್ವಜನಿಕ ಕೀ ಆಧಾರಿತ ಎನ್‌ಕ್ರಿಪ್ಶನ್ ವ್ಯವಸ್ಥೆಗಳನ್ನು ಕ್ವಾಂಟಮ್ ಅಲ್ಗಾರಿದಮ್‌ಗಳು ಭವಿಷ್ಯದಲ್ಲಿ ದುರ್ಬಲಗೊಳಿಸುವ ಸಾಧ್ಯತೆ ಇರುವುದರಿಂದ, ಕ್ವಾಂಟಮ್-ಪ್ರತಿರೋಧಕ ಕ್ರಿಪ್ಟೋಗ್ರಫಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಶೋರ್ಸ್ ಆಲ್ಗರಿದಮ್ ಹಾಗೂ ಗ್ರೂವರ್ಸ್ ಆಲ್ಗರಿದಮ್ ಮುಂತಾದ ಕ್ವಾಂಟಮ್ ಅಲ್ಗಾರಿದಮ್‌ ಗಳು ನಿರ್ದಿಷ್ಟ ಸಮಸ್ಯೆಗಳನ್ನು ವೇಗವಾಗಿ ಪರಿಹರಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಆನ್‌ಲೈನ್ ಬ್ಯಾಂಕಿಂಗ್, ಪಾಸ್‌ವರ್ಡ್‌, ಒಟಿಪಿ, ಡಿಜಿಟಲ್ ವಹಿವಾಟು, ಕ್ರಿಪ್ಟೋಕರೆನ್ಸಿ ಸೇರಿದಂತೆ ಹಲವು ಕ್ಷೇತ್ರಗಳ ಭದ್ರತೆಯನ್ನು ಭವಿಷ್ಯದ ಕ್ವಾಂಟಮ್ ಯುಗಕ್ಕೆ ಸಿದ್ಧಪಡಿಸಬೇಕಿದೆ ಎಂದು ಹೇಳಿದರು.
ಎಐ ಜತೆ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಮುಖ ಪಾತ್ರ

ಕೃತಕ ಬುದ್ಧಿಮತ್ತೆ ಹಾಗೂ ಜನರೇಟಿವ್ ಎಐ ಕ್ಷೇತ್ರಗಳ ಬೆಳವಣಿಗೆಯಲ್ಲಿಯೂ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಜನರೇಟಿವ್ ಎಐಗೆ ಅಪಾರ ಪ್ರಮಾಣದ ಡೇಟಾ, ಗಣಕ ಸಾಮರ್ಥ್ಯ ಹಾಗೂ ವಿದ್ಯುತ್ ಅಗತ್ಯವಿದ್ದು, ಕ್ವಾಂಟಮ್ ಕಂಪ್ಯೂಟಿಂಗ್ ಈ ಕ್ಷೇತ್ರದ ಗಣಕ ಸಾಮರ್ಥ್ಯದ ಸವಾಲುಗಳನ್ನು ಎದುರಿಸಲು ನೆರವಾಗಬಹುದು.

ತಮ್ಮ ಸಂಶೋಧನಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ, ಜನರೇಟಿವ್ ಎಐ, ಕಾಪಿರೈಟ್ ಉಲ್ಲಂಘನೆ ಮತ್ತು ಸೈಬರ್ ಅಪರಾಧಗಳು ಸೇರಿವೆ. ಪ್ರಸ್ತುತ ಎಐ ಮತ್ತು ಕಾನೂನು ವಿಷಯಗಳನ್ನೂ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದಾಗಿ ಮಾಜಿ ಕುಲಪತಿ ಡಾ.ಕೆ..ಅರ್.ವೇಣುಗೋಪಾಲ್ ತಿಳಿದರು.

image

ಯು.ವಿ.ಸಿ.ಯ ಶೈಕ್ಷಣಿಕ ವಾತಾವರಣವು ತಮ್ಮ ವೃತ್ತಿ ಮತ್ತು ಸಂಶೋಧನಾ ಬದುಕಿಗೆ ದೊಡ್ಡ ಪ್ರೇರಣೆಯಾಗಿದೆ. ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರಿಂದ ಕಲಿತೆ. ಶಿಕ್ಷಕನಾದ ಬಳಿಕ ವಿದ್ಯಾರ್ಥಿಗಳಿಂದ ಕಲಿಯುತ್ತಿದ್ದೇನೆ. ಶಿಕ್ಷಕನಿಗೆ ಕಲಿಕೆ ನಿರಂತರ ಪ್ರಕ್ರಿಯೆಯಾಗಿರಬೇಕು.

-ಡಾ.ಕೆ.ಆರ್.ವೇಣುಗೋಪಾಲ್, ಮಾಜಿ ಕುಲಪತಿ, ಬೆಂಗಳೂರು ವಿವಿ