ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪದೇಪದೆ ಬಿಸಿ ಮಾಡಿದ ಅಡುಗೆ ಎಣ್ಣೆ ನಿರ್ಬಂಧಕ್ಕೆ ಹೊಸ ನಿಯಮ: ಅಡುಗೆ ಎಣ್ಣೆ ಬಳಕೆಗೂ ಮಾರ್ಗಸೂಚಿ ಪ್ರಕಟ

ಪದೇಪದೆ ಬಿಸಿ ಮಾಡಿ ಬಳಸುವ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಹಲವು ಬಾರಿ ಬಳಸುವ ಪದ್ಧತಿಗೆ ನಿಯಂತ್ರಣ ಹೇರುವುದು ಇದರ ಪ್ರಮುಖ ಉದ್ದೇಶವಾಗಿದೆ.

ಬೆಂಗಳೂರು: ಪದೇಪದೆ ಬಿಸಿ ಮಾಡಿ ಬಳಸುವ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಹಲವು ಬಾರಿ ಬಳಸುವ ಪದ್ಧತಿಗೆ ನಿಯಂತ್ರಣ ಹೇರುವುದು ಇದರ ಪ್ರಮುಖ ಉದ್ದೇಶವಾಗಿದೆ. ‌ಮನೆಗಳಲ್ಲಿಯೂ ಬಳಸಿದ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಮೂರು ಬಾರಿ ಮೀರದಂತೆ ಎಣ್ಣೆ ಮರುಬಳಕೆ: ಪ್ರಸ್ತಾವಿತ ಮಾರ್ಗಸೂಚಿಯ ಪ್ರಕಾರ ಅಡುಗೆ ಎಣ್ಣೆಯನ್ನು ಮೂರು ಬಾರಿ ಮೀರಿಸಿ ಬಿಸಿ ಮಾಡಿ ಬಳಸುವುದನ್ನು ತಪ್ಪಿಸುವಂತೆ ಸೂಚಿಸುವ ಸಾಧ್ಯತೆಯಿದೆ. ಎಣ್ಣೆಯನ್ನು ನಿರಂತರವಾಗಿ ಹೆಚ್ಚಿನ ತಾಪಮಾನದಲ್ಲಿ ಕಾಯಿಸುವುದರಿಂದ ಅದರ ಗುಣಮಟ್ಟದಲ್ಲಿ ಬದಲಾವಣೆ ಯಾಗುವು ದರ ಜತೆಗೆ ಟೋಟಲ್ ಪೋಲಾರ್ ಕಾಂಪೌಂಡ್ಸ್ (ಟಿಪಿಸಿ) ಪ್ರಮಾಣವೂ ಹೆಚ್ಚಾಗುತ್ತದೆ. ‌

ಇದನ್ನೂ ಓದಿ: Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

ಟಿಪಿಸಿ ಪ್ರಮಾಣ ಶೇಕಡಾ 25ಕ್ಕಿಂತ ಹೆಚ್ಚಾದ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸಬಾ ರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಇಲಾಖೆ ಗಮನಹರಿಸುತ್ತಿದೆ. ಇಂತಹ ಎಣ್ಣೆಯ ನಿರಂತರ ಬಳಕೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಸುರಕ್ಷಿತ ಬಳಕೆಗೆ ಒತ್ತು ನೀಡಲಾಗುತ್ತಿದೆ. ಎಣ್ಣೆಯ ಬಣ್ಣ, ಹೊಗೆಯಲ್ಲೂ ಬದಲಾವಣೆ ಕಂಡುಬಂದರೆ ಎಚ್ಚರ: ಬಳಸಿದ ಎಣ್ಣೆಯ ಗುಣ ಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದರೆ ಅದನ್ನು ಮರುಬಳಕೆ ಮಾಡದಂತೆ ಸೂಚಿ ಸಲಾಗುತ್ತಿದೆ.

ಎಣ್ಣೆಯಿಂದ ನೀಲಿ ಅಥವಾ ಬೂದು ಬಣ್ಣದ ಹೊಗೆ ಬರುವುದು, ಅತಿಯಾದ ನೊರೆ ಕಾಣಿಸಿಕೊಳ್ಳು ವುದು, ಎಣ್ಣೆ ಹೆಚ್ಚು ಕಪ್ಪಾಗುವುದು ಅಥವಾ ಅದರ ದಪ್ಪದಲ್ಲಿ ಬದಲಾವಣೆ ಕಾಣುವುದು ಇಂತಹ ಲಕ್ಷಣ ಗಳಾಗಿವೆ. ಒಮ್ಮೆ ಬಳಕೆಯಾದ ಎಣ್ಣೆಯನ್ನು ದೀರ್ಘಕಾಲ ಸಂಗ್ರಹಿಸಿಡುವ ಬದಲು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ವಿಲೇವಾರಿ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸುವ ಸಾಧ್ಯತೆಯಿದೆ.

ಹೊಸ ವ್ಯವಸ್ಥೆಯಡಿ ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿಗಳಲ್ಲಿ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಬಳಸಲಾಗಿದೆ ಎಂಬುದರ ದಾಖಲೆ ಇಡುವ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಬಳಸಿದ ಎಣ್ಣೆಯನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಮತ್ತು ಅಂತಿಮವಾಗಿ ಯಾವ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನೂ ದಾಖಲಿಸುವ ವ್ಯವಸ್ಥೆ ರೂಪಿಸುವ ಚಿಂತನೆ ಇದೆ. ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ

32.68 ಲಕ್ಷ ಲೀಟರ್ ಬಳಸಿದ ಎಣ್ಣೆ ಸಂಗ್ರಹ ರಾಜ್ಯದಲ್ಲಿ ಬಳಸಿದ ಅಡುಗೆ ಎಣ್ಣೆಯ ಸಂಗ್ರಹ ಮತ್ತು ಪುನರ್ ಬಳಕೆ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. 2024-25 ಮತ್ತು 2025-26ನೇ ಸಾಲಿನಲ್ಲಿ ಒಟ್ಟು 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ ಬಳಕೆಗೆ ನೀಡಲಾಗಿದೆ ಎಂದು ಇಲಾಖೆಯ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಹಳೆಯ ಎಣ್ಣೆಯ ಬಳಕೆಯಿಂದ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡುವುದು ಹಾಗೂ ಬಳಸಿದ ಎಣ್ಣೆಯಿಂದ ಪರಿಸರ ಮಾಲಿನ್ಯ ತಡೆಯುವುದು ಹೊಸ ಮಾರ್ಗಸೂಚಿಯ ಪ್ರಮುಖ ಉದ್ದೇಶವಾಗಿದೆ.