ಬೆಂಗಳೂರು: ರಾಜ್ಯದ 101 ತಾಲೂಕಿನಲ್ಲಿ ಬರಪರಿಸ್ಥಿತಿ ಇದ್ದು, ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ ವಿಬಿಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗ ನೀಡಬೇಕು. 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿಬಿಜಿ ರಾಮ್ ಜಿ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ನಂತರ ಮಾತನಾಡಿ, ಬೆಂಗಳೂರು ಸುತ್ತಮುತ್ತ 382 ರು. ಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ಸರಿಯಲ್ಲ. ಅವರ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಆಗುತ್ತದೆ, ಕೆರೆಯ ಹೂಳು ತೆಗೆದರೆ ನೀರಿನ ಸಂಗ್ರಹ ಹೆಚ್ಚುತ್ತದೆ, ಉತ್ತಮ ರಸ್ತೆ ಆಗುತ್ತದೆ, ಕೊಳವೆ ಬಾವಿಗಳ ಮರುಪೂರಣ ಆಗುತ್ತದೆ, ಅಂತರ್ಜಲ ಹೆಚ್ಚುತ್ತದೆ ಎಂದು ಮನವೊಲಿಸಿದರೆ ಜನರು ಕೆಲಸಕ್ಕೆ ಬರುತ್ತಾರೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ವರ್ಷ ನರೇಗಾದಡಿ ನೀಡಲಾಗಿದ್ದ ಉದ್ಯೋಗಕ್ಕೆ ಹೋಲಿಸಿ ದರೆ ವಿಬಿಜಿ ರಾಮ್ ಜಿಯಲ್ಲಿ ಶೇ.80ರಷ್ಟು ಕಡಿಮೆಯಾಗಿದೆ. ಜಿಲ್ಲೆಯ 120 ಗ್ರಾಮ ಪಂಚಾಯತಿ ಇದ್ದು, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ನಿತ್ಯ ಕನಿಷ್ಠ 50 ಜನರಿಗೆ ಕೆಲಸ ಕೊಟ್ಟರೂ, 6000 ಜನರಿಗೆ ಉದ್ಯೋಗ ಕಲ್ಪಿಸಬಹುದು.
ಹಲವು ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿ ರಾಮ್ ಜಿ ಕೂಲಿ ಹಣ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನ ಉಳಿದಿದೆ. ಈ ರೀತಿ ವಿಳಂಬ ಮಾಡಿದರೆ ದಂಡ ಹಾಕಲೂ ಅವಕಾಶವಿದೆ ಎಂದರು. ಪ್ರತಿ ಪಿಡಿಒಗಳು ವೇತನ ಪಾವತಿಗೆ ತಕ್ಷಣ ಕ್ರಮ ವಹಿಸಬೇಕು. ವಾರದಲ್ಲಿ 2 ದಿನ ಖಜಾನೆಗೆ ಹೋಗಿ ಹಣ ಪಾವತಿ ಮಾಡಿಸಲು ಆಸಕ್ತಿ ವಹಿಸಬೇಕು. ಸಕಾಲದಲ್ಲಿ ವೇತನ ಬಂದರೆ ಜನರೂ ಕೆಲಸಕ್ಕೆ ಬರುತ್ತಾರೆ ಎಂದರು.
ಅರಣ್ಯ ಅನುಮತಿಗೆ ಪ್ರಯತ್ನ: ಖಂಡ್ರೆ ರಾಜ್ಯದ ವಿವಿಧ ಜಿಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಕೆರೆ, ಸರೋವರ, ನದಿಗಳಿಂದ ನೀರು ತರಲು ಕೊಳವೆ ಅಳವಡಿಕೆಗೆ ಅರಣ್ಯ ಅನುಮತಿ ದೊರಕದೆ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿವೇಶ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಕೇಂದ್ರ ಸರಕಾರಕ್ಕೆ ಕಳಿಸಿ ನಿಯಮಾನುಸಾರ ಶೀಘ್ರ ಅನುಮತಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
![]()
ಕೋಟಿ ರು.ಹಣ ಬಿಡುಗಡೆ ಮಾಡಲಾಗಿದೆ. 1 ಕೋಟಿ 86 ಲಕ್ಷ ರು. ವೇತನ ಪಾವತಿ ಆಗಬೇಕಿದ್ದರೂ, ಈವರೆಗೆ 40 ಲಕ್ಷ ರು. ಮಾತ್ರ ಪಾವತಿ ಆಗಿದೆ. 1.46 ಕೋಟಿ ರು. ಕೂಲಿ ಪಾವತಿ ಆಗಿಲ್ಲ. ಈ ರೀತಿ ವಿಳಂಬ ಆಗದಂತೆ ಜಿಲ್ಲಾ ಪಂಚಾಯತಿ ಸಿಇಓಗಳು ಕ್ರಮ ವಹಿಸಬೇಕು.
-ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಸಚಿವ