ಬೆಂಗಳೂರು: ಕನ್ನಡಿಗ ಸಮಸ್ಯೆಗೆ ಸ್ಪಂದಿಸಲು ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಎನ್‌ಆರ್‌ಐ ಸಚಿವಾಲಯವನ್ನು (NRI Ministry) ತಕ್ಷಣ ಜಾರಿಗೆ ತರಬೇಕು ಹಾಗೂ ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಧ್ವನಿಯನ್ನು ಸರ್ಕಾರದ ಗಮನಕ್ಕೆ ತಲುಪಿಸುವಂತೆ ಒಕ್ಕೂಟ ಮನವಿ ಮಾಡಿದೆ.
ಈ ಅಭಿಯಾನವು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭವಾಗಲಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಮತ್ತು ಕನ್ನಡಾಭಿಮಾನಿಗಳು ಒಂದೇ ವೇದಿಕೆಯಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ. ಒಕ್ಕೂಟದ ಪ್ರಕಾರ, ರಾಜ್ಯ ಸರ್ಕಾರದಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು, ಕಲ್ಯಾಣ, ಹೂಡಿಕೆ, ಶಿಕ್ಷಣ ಹಾಗೂ ಇತರೆ ವಿಚಾರಗಳಿಗೆ ಪ್ರತ್ಯೇಕ ಸಚಿವಾಲಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಮುಖ ಆಗ್ರಹವಾಗಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ವಿವಿಧ ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದರೆ, ಅವರಿಗೆ ಎಲ್ಲಾ ಅಗತ್ಯ ನೆರವು ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪ್ರತ್ಯೇಕ ಸಚಿವಾಲಯದ ಅಗತ್ಯತೆ ಇದೆ ಎಂದು ಅನಿವಾಸಿ ಕನ್ನಡಿಗರ ಅನಿಸಿಕೆ. ಪ್ರತಿಯೊಂದು ಹಂತದಲ್ಲೂ ತಾಯ್ನಾಡಿನ ಪರವಾಗಿ ನಿಂತಿರುವ ಅನಿವಾಸಿ ಕನ್ನಡಿಗರು, ಈಗ ತಮ್ಮೊಂದಿಗೆ ಕನ್ನಡಿಗರು ನಿಲ್ಲುವಂತೆ ಮನವಿ ಮಾಡಿಕೊಂಡಿದ್ದು, ತಮ್ಮ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯ ಸ್ಥಾಪನೆ ಬೇಡಿಕೆಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಟ್ವಿಟ್ಟರ್ ಅಭಿಯಾನದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು.
ನಾಡಿನ ಹಲವು ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ; ಈ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?
ಅನಿವಾಸಿ ಕನ್ನಡಿಗರ ಸಚಿವಾಲಯದ ಸಚಿವ ಜವಾಬ್ದಾರಿಯನ್ನು ಡಾ. ಆರತಿ ಕೃಷ್ಣ ಅವರಿಗೆ ನೀಡಬೇಕು ಎಂದು ಕರ್ನಾಟಕ ಸಂಘ ದುಬೈ ಒತ್ತಾಯಿಸಿದೆ. ಅನಿವಾಸಿ ಕನ್ನಡಿಗರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಡಾ. ಆರತಿ ಕೃಷ್ಣ ಅವರು ನಿರ್ವಹಿಸುತ್ತಿರುವ ಪಾತ್ರವನ್ನು ಪರಿಗಣಿಸಿ, ಅವರಿಗೆ ಈ ಸಚಿವಾಲಯದ ಜವಾಬ್ದಾರಿ ನೀಡಬೇಕು ಎಂದು ಅದು ಕೋರಿದೆ. ರಾಜ್ಯ ಸರ್ಕಾರದಲ್ಲಿ ಪ್ರತ್ಯೇಕ ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಗೆ ಆಗ್ರಹಿಸಿ ಆರಂಭಿಸಿರುವ ಟ್ವಿಟ್ಟರ್ ಅಭಿಯಾನಕ್ಕೆ ಜಗತ್ತಿನ ವಿವಿಧ ದೇಶಗಳಲ್ಲಿರುವ ಎಲ್ಲಾ ಪ್ರಮುಖ ಕನ್ನಡ ಸಂಘಟನೆಗಳು ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.
![]()
ಅನೇಕ ವರ್ಷಗಳಿಂದ ಅನಿವಾಸಿ ಕನ್ನಡಿಗರು ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯಕ್ಕಾಗಿ ಬೇಡಿಕೆಯನ್ನಿಡುತ್ತಲೇ ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಈ ಕುರಿತು ಭರವಸೆ ನೀಡಿತ್ತು. ಇದೀಗ ಸರ್ಕಾರ ರಚನೆಯಾಗಿ ಮೂರು ವರ್ಷಗಳ ನಂತರ ಸಚಿವಾಲಯ ಘೋಷಣೆಯಾದರೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಎನ್‌ಆರ್‌ಐ ಸಚಿವಾಲಯಕ್ಕೆ ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿ ಇಂದು ಟ್ವಿಟ್ ಅಭಿಯಾನವನ್ನು ಹಮ್ಮಿಕೊಂಡಿದ್ದೆವು. ಇದು ಗ್ಲೋಬಲ್ ಟ್ರೆಂಡಿಂಗ್ ಆಗಿ ಇತಿಹಾಸವನ್ನು ಸೃಷ್ಟಿಸಿದೆ.
ಡಾ. ಅಬ್ದುಲ್ ಶಕೀಲ್ ಕೆಪಿಸಿಸಿ ಮಾಜಿ ಉಪಾಧ್ಯಕ್ಷ