ಬೆಂಗಳೂರು: ಛತ್ತೀಸ್‌ಗಢದಲ್ಲಿ (Chhattisgarh) ಕೇರಳದ (Kerala) ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿರುವುದನ್ನು (Nuns Arrest Case) ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮತಾಂತರ (religious conversion) ಮತ್ತು ಮಾನವ ಕಳ್ಳ ಸಾಗಣೆ (Human trafficking) ಆರೋಪದಲ್ಲಿ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರಾದ (Nuns Arrest Case) ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಅವರನ್ನು ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಭಾನುವಾರ ಭಾರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಪ್ರತಿಭಟನೆ ನಡೆಯಿತು.
ಛತ್ತೀಸ್‌ಗಢದಲ್ಲಿ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಅವರ ಕಾನೂನುಬಾಹಿರ ಬಂಧನವನ್ನು ಖಂಡಿಸಿ ಭಾನುವಾರ ಅಪರಾಹ್ನ 3 ಗಂಟೆ ಸುಮಾರಿಗೆ ಫ್ರೀಡಂ ಪಾರ್ಕ್‌ನಲ್ಲಿ 2,500ಕ್ಕೂ ಹೆಚ್ಚು ಜನರು ಜಮಾಯಿಸಿದರು. ಶಾಂತಿಯುತ ಪ್ರತಿಭಟನೆಯಲ್ಲಿ ಘಟನೆಯ ಬಗ್ಗೆ ಕ್ರಿಶ್ಚಿಯನ್ ಸಮುದಾಯ ಸಾಮೂಹಿಕ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿತು.
ಬಂಧಿತ ಸನ್ಯಾಸಿನಿಯರೊಂದಿಗೆ ಇದ್ದೇವೆ ಎಂದು ಪ್ರತಿಭಟನಾಕಾರರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಭಯ ಅಥವಾ ಬೆದರಿಕೆಯಿಲ್ಲದೆ ತಮ್ಮ ನಂಬಿಕೆಯನ್ನು ಬೋಧಿಸಲು, ಪ್ರತಿಪಾದಿಸಲು ಮತ್ತು ಅಭ್ಯಾಸ ಮಾಡಲು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಸಾಂವಿಧಾನಿಕ ಹಕ್ಕು ನೀಡಿದೆ ಎಂದು ಹೇಳಿದರು.

ಬೆಂಗಳೂರಿನ ಆರ್ಚ್ ಬಿಷಪ್ ಸೇರಿದಂತೆ ವಿವಿಧ ಚರ್ಚ್ ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಉನ್ನತಿಯ ಕ್ಷೇತ್ರಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಆಳವಾದ ಕೊಡುಗೆಗಳನ್ನು ಉಲ್ಲೇಖಿಸಿದರು.
ಸಿಸ್ಟರ್ಸ್ ವಿರುದ್ಧದ ಸುಳ್ಳು ಮತ್ತು ಕಟ್ಟು ಕಥೆ ಆರೋಪಗಳನ್ನು ಖಂಡಿಸಿದ ಅವರು ಭಾರತ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯ, ಹೊಣೆಗಾರಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವವನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಆರ್ಚ್ ಬಿಷಪ್ ನ ಡಾ. ಪೀಟರ್ ಮಚಾದೊ ಮಾತನಾಡಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆ ಎಂದು ಕರೆಯಲ್ಪಡುವ ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ರದ್ದುಗೊಳಿಸುವ ಚುನಾವಣಾ ಪೂರ್ವದ ಭರವಸೆಯನ್ನು ಕರ್ನಾಟಕ ಸರ್ಕಾರಕ್ಕೆ ನೆನಪಿಸಿದ ಅವರು, ಮಸೂದೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಛತ್ತೀಸ್‌ಗಢದಲ್ಲಿ ನಡೆದಂತಹ ಘಟನೆಗಳು ಕರ್ನಾಟಕದಲ್ಲಿಯೂ ಮರುಕಳಿಸಬಹುದು. ಇದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆಳವಾದ ಅಶಾಂತಿ ಮತ್ತು ಅಭದ್ರತೆಗೆ ಕಾರಣವಾಗಬಹುದು ಎಂದರು.

ಇದನ್ನೂ ಓದಿ: KSRTC staff strike: ಆ.5ಕ್ಕೆ ಸಾರಿಗೆ ನೌಕರರು ಮುಷ್ಕರ ಮಾಡಲ್ಲ: ಅನಂತ ಸುಬ್ಬರಾವ್ ಸ್ಪಷ್ಟನೆ
ಈ ಸಂದರ್ಭದಲ್ಲಿ ಬೆಂಗಳೂರಿನ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ, ಮಂಡ್ಯದ ಬಿಷಪ್ ಮಾರ್ ಸೆಬಾಸ್ಟಿಯನ್ ಅದ್ಯಂತರಥ್, ಜಾಕೋಬೈಟ್ ಆರ್ಥೊಡಾಕ್ಸ್ ಚರ್ಚ್‌ನ ಬಿಷಪ್ ರೆವ್ ಐಸಾಕ್ ಮಾರ್ ಒಸ್ಥೆಥಿಯಸ್, ಬೆಂಗಳೂರಿನ ಆರ್ಚ್‌ಡಯೋಸಿಸ್‌ನ ವಿಕಾರ್ ಜನರಲ್ ರೆವ್ ಫಾದರ್ ಕ್ಸೇವಿಯರ್ ಮನವತ್, ರೆವ್ ಫಾದರ್. ರಿಜಿ ಜೋಸ್, ಅಧ್ಯಕ್ಷರು, ಸಿಆರ್ ಐ ಬೆಂಗಳೂರು, ವಿಕ್ರಮ್ ಆಂಥೋನಿ, ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ), ಪೆರಿಚೊ ಪ್ರಭು, ಕಾರ್ಯದರ್ಶಿ, ಎಕೆಯುಸಿಎಫ್‌ಎಚ್‌ಆರ್, ಸೀನಿಯರ್ ಮಾರಿಯಾ ಫ್ರಾನ್ಸಿಸ್, ಎಎಸ್‌ಎಂಐ ಪ್ರತಿನಿಧಿ, ಬೃಂದಾ ಅಡಿಗೆ, ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೇರಿದಂತೆ ಹಲವು ಮಂದಿ ಮಾತನಾಡಿದರು.