ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಳೆ ಬೆಂಗಳೂರಿನಿಂದ ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ

ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ.ಜಿ ಅವರ ನೇತೃತ್ವದಲ್ಲಿ ಸುಮಾರು 800 ವಕೀಲರು ಸುಮಾರು 220 ಕಾರುಗಳಲ್ಲಿ ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಜಾಥಾ ಹೊರಡಲಿದ್ದಾರೆ.

ನಾಳೆ ಬೆಂಗಳೂರಿನಿಂದ ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ

Prabhakara R Prabhakara R Aug 22, 2025 6:22 PM

ಬೆಂಗಳೂರು: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ನಾಳೆ (ಆ.23ರಂದು ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ.ಜಿ ಅವರ ನೇತೃತ್ವದಲ್ಲಿ ಸುಮಾರು 800 ವಕೀಲರು ಸುಮಾರು 220 ಕಾರುಗಳಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಜಾಥಾ ಹೊರಡಲಿದ್ದಾರೆ.

ಬೆಂಗಳೂರು-ತುಮಕೂರು ಮುಖ್ಯರಸ್ತೆಯ ಮಾದಾವರದ ಬಿ.ಐ.ಇ.ಸಿ ಮುಂಭಾಗದಿಂದ(ನೈಸ್‌ ರೋಡ್‌ ಜಂಕ್ಷನ್) ಶನಿವಾರ ಬೆಳಗ್ಗೆ ಜಾಥಾ ಹೊರಡಲಿದ್ದು, ಮಧ್ಯಾಹ್ನ 3:30 ಗಂಟೆಗೆ ಉಜಿರೆಗೆ ತೆರಳಲಿದೆ. ಅಲ್ಲಿಂದ ವಕೀಲರ ನಿಯೋಗ ಬೆಳ್ತಂಗಡಿಯ SIT ಕಚೇರಿಗೆ 3.45 ಗಂಟೆಗೆ ಹೋಗಿ, ಧರ್ಮಸ್ಥಳದ ವಿರುದ್ಧ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಾ ಒಳಸಂಚು ರೂಪಿಸುತ್ತಿರುವವರ ವಿರುದ್ಧ ದೂರು ನೀಡಲಾಗುತ್ತದೆ. ನಂತರ ಎಲ್ಲಾ ವಕೀಲರೊಂದಿಗೆ ಸೇರಿಕೊಂಡು ಧರ್ಮಸ್ಥಳಕ್ಕೆ 4.30 ಗಂಟೆಗೆ ಹೋಗಿ ಮಂಜುನಾಥನ ದರ್ಶನ ಮಾಡಿ, ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಡೆಯವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗುವುದು ಎಂದು ವಕೀಲರು ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ಜಯ ಕರ್ನಾಟಕ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ.ಜಿ ಮಾಹಿತಿ ನೀಡಿದ್ದಾರೆ.

Dharmasthala Chalo

ಜಾಥಾ ಹೊರಡುವ ಸ್ಥಳ :

  • ಬೆಂಗಳೂರು-ತುಮಕೂರು ಮುಖ್ಯರಸ್ತೆಯ ಮಾದಾವರದ ಬಿ.ಐ.ಇ.ಸಿ ಮುಂಭಾಗದಿಂದ ಶನಿವಾರ ಬೆಳಗ್ಗೆ 6.30ಕ್ಕೆ ಜಾಥಾ ಆರಂಭ
  • ಬೆಳಗ್ಗೆ 8:30: ಮಿರಾಕಲ್ ಗಾರ್ಡನ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ರೋಡ್.
  • ಬೆಳಗ್ಗೆ 11 ಗಂಟೆಗೆ ಹಾಸನ ಡೈರಿ ಸರ್ಕಲ್
  • ಮಧ್ಯಾಹ್ನ 12:30ಕ್ಕೆ ಸುದನ್ವ ಗೌಡ ಒಕ್ಕಲಿಗರ ಕಲ್ಯಾಣ ಮಂಟಪ, ಬೇಲೂರು.
  • 3.40 ಗಂಟೆಗೆ ಉಜಿರೆ ಮಾರ್ಗವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ 4 ಗಂಟೆಗೆ ತಲುಪುವುದು.