ಬೆಂಗಳೂರು: "ಕನ್ನಡ ರಾಜ್ಯೋತ್ಸವ"ದ ಪ್ರಯುಕ್ತ ಸಾವಿರ ಮೀಟರ್‌ನ ಹಾಗೂ ಒಂದು ಕಿಲೋ ಮೀಟರ್ ಉದ್ದದ "ಕನ್ನಡ ಧ್ವಜ"ದ ಮೆರವಣಿಗೆ ಮಾಡುವ ಮೂಲಕ ಉದ್ಭವ ಗಣಪತಿ ಗೆಳೆಯರ ಬಳಗ ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ನೇತೃವದಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸಲಾಯಿತು.
ಭಾನುವಾರ ಪಟ್ಟೇಗಾರಪಾಳ್ಯ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಯುವಕರು "ಕನ್ನಡ ಧ್ವಜ"ವನ್ನು ಹೊತ್ತು ಪ್ರಶಾಂರ ನಗರದ ವರೆಗೆ ಕನ್ನಡ ಘೋಷವಾಕ್ಯಗಳನ್ನು ಮೊಳಗಿಸುತ್ತಾ ಸಾಗಿದರು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ಇದೇ ವೇಳೆ, ಕನ್ನಡೇತರರಿಗೆ ಕನ್ನಡ ಕಲಿಕೆಗೆ ಪ್ರೋತ್ಸಾಯಿಸಿ, ಬಿತ್ತಿಪತ್ರವನ್ನು ವಿತರಿಸಿದರು. ಈ ಭಾಗದಲ್ಲಿ ಅಂಗಡಿ ಹೊಂದಿ ರುವ ಕನ್ನಡೇತರರಿಗೂ ಸಹ ಕನ್ನಡ ಕಲಿಕೆಯ ಮಹತ್ವ ಸಾರುತ್ತಾ ತೆರಳಿದರು.
ಶಾಸಕ ಪ್ರಿಯಕೃಷ್ಣ ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋವಣ ನೆರವೇರಿಸಿ, ಕನ್ನಡ ಧ್ವಜದ ಮೆರವಣಿಗೆಗೆ ಚಾಲನೆ ನೀಡಿದರು. ಉದ್ಭವ ಗಣಪತಿ ಗೆಳೆಯರ ಬಳಗ ಅಧ್ಯಕ್ಷ ಆರ್. ಮಂಜು ಇದರ ನೇತೃತ್ವ ವಹಿಸಿದರು. ಹಾಗೂ ಪಟ್ಟೇಗಾರ ಪಾಳ್ಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಬಿ.ಪ್ಯಾಕ್ ಸಂಸ್ಥೆ ಕಾರ್ಯಕ್ರಮದ ಅಧ್ಯಕ್ಷರಾದ ರಾಘವೇಂದ್ರ ಪೂಜಾರಿ, ಉದ್ಭವ ಗಣಪತಿ ಗೆಳೆಯರ ಬಳಗದ ಸದಸ್ಯರಾದ ಪಾಪಣ್ಣ, ಮಹೇಶ್, ಜಮೀರ್‌ಖಾನ್ ಸೇರಿದಂತೆ ಹಲವು ಯುವ ನಾಯಕರು ಉಪಸ್ಥಿತರಿದ್ದರು.