ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಚಿವ ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷ ಪಟ್ಟು: ಭ್ರಷ್ಟ ಸಚಿವರಿಂದ ಉತ್ತರ ಪಡೆಯುವ ಅಗತ್ಯವಿಲ್ಲ

ಸದನ ನಡೆಯುತ್ತಿರುವಾಗಲೇ ನಾಗೇಂದ್ರ ಅವರ ರಾಜೀನಾಮೆಯನ್ನು ಈ ಹಿಂದೆ ಪಡೆಯಲಾಗಿತ್ತು. ಈಗ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿ ಕೊಂಡಿದ್ದೀರಿ. ಇದು ಸರಿಯಲ್ಲ. ಇದು ಸದನಕ್ಕೆ ಮಾಡಿದ ಅವಮಾನ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲದಿದ್ದರೆ ಸದನದ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ ಎಂದು ಜೆಡಿಎಸ್-ಬಿಜೆಪಿ ನಾಯಕರು ಒಂದಾಗಿ ಉಭಯ ಸದನಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದರು

ವಿಧಾನಪರಿಷತ್: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಸಚಿವ ನಾಗೇಂದ್ರ ರಾಜೀನಾಮೆಗೆ ಉಭಯ ಸದನದಲ್ಲಿ ಪ್ರತಿಪಕ್ಷ ಪಟ್ಟು ಹಿಡಿದಿದ್ದು, ಸೋಮವಾರ ಈ ಗದ್ದಲದ ನಡುವೆಯೇ ಕಲಾಪವನ್ನು ನಡೆಸ ಲಾಯಿತು. ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೈಗೆತ್ತಿಕೊಳ್ಳುತ್ತಿದ್ದಂತೆ ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ, ಸದನದಲ್ಲಿ ಗದ್ದಲ ನಡೆದು ಕಾವೇರಿದ ವಾತಾವರಣ ನಿರ್ಮಾಣವಾದ ಕಾರಣ ಸದನವನ್ನು ಮುಂದೂಡಲಾಯಿತು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಿ.ನಾಗೇಂದ್ರ ಅವರು ಭ್ರಷ್ಟಾ ಚಾರ ನಡೆಸಿದ ಕಾರಣ ಅವರನ್ನು ಸಂಪುಟದಿಂದ ಈ ಹಿಂದೆ ತೆಗೆದು ಹಾಕಲಾಗಿತ್ತು. ನಿಗಮದಲ್ಲಿ 89 ಕೋಟಿ ದುರುಪಯೋಗವಾಗಿದೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಸದನದಲ್ಲಿ ಹೇಳಿದ್ದರು.

ಸದನ ನಡೆಯುತ್ತಿರುವಾಗಲೇ ನಾಗೇಂದ್ರ ಅವರ ರಾಜೀನಾಮೆಯನ್ನು ಈ ಹಿಂದೆ ಪಡೆಯಲಾಗಿತ್ತು. ಈಗ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿ ಕೊಂಡಿದ್ದೀರಿ. ಇದು ಸರಿಯಲ್ಲ. ಇದು ಸದನಕ್ಕೆ ಮಾಡಿದ ಅವಮಾನ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲದಿದ್ದರೆ ಸದನದ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ ಎಂದು ಜೆಡಿಎಸ್-ಬಿಜೆಪಿ ನಾಯಕರು ಒಂದಾಗಿ ಉಭಯ ಸದನಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ, ವಾಗ್ಯುದ್ಧ ನಡೆದು ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು. ಆಗ ಸದನವನ್ನು ಮುಂದೂಡಲಾಯಿತು.

ಇದನ್ನೂ ಓದಿ: Bangalore News: ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ವಿಧಾನಸಭೆಯಲ್ಲಿ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಅವರು ಹನೂರು ಚರ್ಚೆಯ ಬಳಿಕ ಪ್ರಶ್ನೋತ್ತರ ಕೈಗೆತ್ತಿಕೊಂಡಾಗ ಶಾಸಕ ಸುನೀಲ್ ಕುಮಾರ್ ಅಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಕಳಂಕಿತ ಸಚಿವರಿzರೆ. ಅವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯಲು ನಾವು ಬಯಸಲ್ಲ. ಸಚಿವ ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ಭ್ರಷ್ಟಾಚಾರ ನಡೆಸಿದ್ದಾರೆ.

ಆಗ ಅವರ ರಾಜೀನಾಮೆ ಪಡೆದು ಈಗ ಮತ್ತೆ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಹಿಂದೆ ಸದನ ನಡೆಯುತ್ತಿರುವಾಗಲೇ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಸಂಬಂಧ ನಾಗೇಂದ್ರ ರಾಜೀನಾಮೆ ಪಡೆಯಲಾಗಿತ್ತು. ಹಣ ದುರ್ಬಳಕೆಯಾಗಿ ರುವುದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಹೇಳಿದ್ದರು. ಹೀಗಿರುವಾಗ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಿರುವುದು ಸರಿಯಲ್ಲ. ಕೂಡಲೇ ನಾಗೇಂದ್ರ ರಾಜೀ ನಾಮೆ ನೀಡಬೇಕು ಇಲ್ಲವೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಸದಸ್ಯರು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಗಳನ್ನು ಕೂಗತೊಡಗಿದರು. ಆಗ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ನೋಟಿಸ್ ನೀಡದೆ ಈ ರೀತಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರೂ ಅದಕ್ಕೆ ಪ್ರತಿಪಕ್ಷಗಳು ಒಪ್ಪಲಿಲ್ಲ.

ಸಚಿವ ಕೃಷ್ಣಬೈರೇಗೌಡ ಅವರು ಎದ್ದು ನಿಂತು, ವಿಪಕ್ಷಗಳ ನಡವಳಿಕೆ ಸರಿಯಲ್ಲ ಗೂಂಡಾಗಿರಿ ಮಾಡುತ್ತಿದ್ದಾರೆ. ನೋಟಿಸ್ ನೀಡದೆ ವಿಷಯ ಪ್ರಸ್ತಾಪಿಸಿ ಸದನದ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರಾದರೂ ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಸಭಾಧ್ಯಕ್ಷ ಪಾಟೀಲ್ ಅವರು ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಿದರು.

ಮೇಲ್ಮನೆಯಲ್ಲಿ ಬಿಜೆಪಿ ಪ್ರತಿಭಟನೆ: ಕಲಾಪಕ್ಕೆ ಅಡಿ

ಇದೇ ವಿಷಯವಾಗಿ ವಿಧಾನಪರಿಷತ್ ನಲ್ಲಿಯೂ ಬಿಜೆಪಿಗರು ಪ್ರತಿಭಟನೆ ನಡೆಸಿದ್ದರಿಂದ ಪ್ರಶ್ನೋ ತ್ತರ ಇನ್ನಿತರ ಕಲಾಪಗಳನ್ನು ನಡೆಸಿ ಬಳಿಕ ಸದನವನ್ನು ಮುಂದೂಡಲಾಯಿತು. ಸದನದ ಕಲಾಪ ಆರಂಭಗೊಂಡಾಗ ಸಭಾಪತಿ ಸಲೀಂ ಅಹ್ಮದ್ ಪ್ರಶ್ನೋತ್ತರ ಅವಧಿಯನ್ನು ಕೈಗೊಳ್ಳಲು ಮುಂದಾ ದರು.

ಹನೂರು ಪ್ರಕರಣದ ಬಗ್ಗೆ ಉತ್ತರಿಸಬೇಕೆಂದು ಬಿಜೆಪಿಗರು ಪಟ್ಟು ಹಿಡಿದರು. 10 ನಿಮಿಷ ಮುಂದೂಡಿದ ಬಳಿಕ ಆರಂಭಗೊಂಡ ಕಲಾಪದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ನಾಗೇಂದ್ರ ವಿರುದ್ಧ ತನಿಖೆ ನಡೆದು ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹೀಗಿದ್ದೂ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ? ಸರಕಾರದ ಮೇಲೆ ಅಂತಹ ಒತ್ತಡ ಏನಿತ್ತು. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ಇದಕ್ಕೆ ಸಭಾ ನಾಯಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹನೂರು ಪ್ರಕರಣದ ಉತ್ತರ ಚರ್ಚೆ ನಡೆಯಲು ಬಿಡಿ. ಎಲ್ಲದರ ಚರ್ಚೆಗೆ ಸರಕಾರ ಸಿದ್ಧವಿದೆ ಎಂದರು.

ಸಭಾಪತಿ ಸಲೀಂ ಅಹ್ಮದ್ ಅವರು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದ ಶೂಟೌಟ್ ಘಟನೆ ಸಂಬಂಧಿಸಿ ಪ್ರಶ್ನೋತ್ತರ ಕಲಾಪ ನಡೆಸಲು ಒಪ್ಪಿದ್ದ ವಿಪಕ್ಷ ನಾಯಕರು ಈಗ ಬೇರೆ ವಿಚಾರ ಎತ್ತಿಕೊಂಡು ಕೂರುವುದು ಸರಿಯಲ್ಲ ಎಂದರು. ಇಷ್ಟಾದರೂ ಪ್ರತಿಪಕ್ಷ ಸದಸ್ಯರು ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು.

ಈ ಹಂತದಲ್ಲಿ ಸಭಾಪತಿ ಸಲೀಂ ಅಹ್ಮದ್ ಅವರು, ಗದ್ದಲದಲ್ಲಿಯೇ ಪ್ರಶ್ನೋತ್ತರ ಪ್ರಕ್ರಿಯೆ ಕೈಗೆತ್ತಿ ಕೊಂಡರು. ಪ್ರಶ್ನೋತ್ತರದ ಅವಧಿ ಬಳಿಕ ನಡೆದ ಕಲಾಪದ ವೇಳೆಯೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರ ಘೋಷಣೆ ಪ್ರತಿಭಟನೆ ಮುಂದುವರಿದಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

image

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸಚಿವ ನಾಗೇಂದ್ರ ಅವರು ನಂಬರ್ ಒನ್ ಆರೋಪಿಯಾಗಿದ್ದಾರೆ. ಜತೆಗೆ ಅವರ ಮೇಲೆ ಇನ್ನೂ ಎರಡು ಆರೋಪ ಪಟ್ಟಿಗಳಿವೆ. ಹೀಗಿರುವಾಗ ಇಂತಹವರನ್ನು ಸಚಿವರನ್ನಾಗಿಸಿರು ವುದು ಸರಿಯಲ್ಲ. ಅವರ ರಾಜೀನಾಮೆ ಪಡೆಯಿರಿ, ಇಲ್ಲವೆ ವಜಾ ಮಾಡಿ.

-ಆರ್.ಅಶೋಕ್, ಪ್ರತಿಪಕ್ಷ ನಾಯಕ