ಬೆಂಗಳೂರು: ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನಿಗದಿಪಡಿಸಿರುವ ಕಡ್ಡಾಯ ಸ್ನಾತಕೋತ್ತರ ಪದವಿ (ಎಂಇ, ಎಂಟೆಕ್) ಅರ್ಹತೆ ಹೊಂದಿಲ್ಲದ ಉಪನ್ಯಾಸಕರನ್ನು ಸೇವೆಯಿಂದ ಮುಕ್ತಗೊಳಿಸಿರುವುದು ಕಾನೂನು ಬದ್ಧವಾಗಿದೆ ಎಂದು ಹೈಕೋರ್ಟ್(High Court) ಸ್ಪಷ್ಟಪಡಿಸಿದೆ.
ಹಾಸನದ ರಾಜೀವ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ರಾಜೀವ್ ಎಜುಕೇಷನಲ್ ಟ್ರಸ್ಟ್) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಅಲ್ಲದೆ, ಉಪನ್ಯಾಸಕ ಎಂ.ವಿ. ರಮೇಶ್ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಮೇಲ್ಮನವಿ ಪ್ರಾಧಿಕಾರ ಮತ್ತು ಏಕಸದಸ್ಯ ಪೀಠ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ನೌಕರನ ದುರ್ನಡತೆಯ ವಿರುದ್ಧ ಕ್ರಮ ಕೈಗೊಳ್ಳುವಾಗ ಇಲಾಖಾ ವಿಚಾರಣೆ ಅತ್ಯಗತ್ಯ. ಆದರೆ, ಶಾಸನಬದ್ಧ ಶೈಕ್ಷಣಿಕ ಅರ್ಹತೆಯೇ ಇಲ್ಲದಿರುವುದು ದುರ್ನಡತೆಯಲ್ಲ, ಅದು ಹುದ್ದೆಗೆ ಅನರ್ಹತೆ ಯಾಗಿದೆ. ಇಂತಹ ಸಂದರ್ಭದಲ್ಲಿ ತನಿಖೆಯ ಅಗತ್ಯವಿರುವುದಿಲ್ಲ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ 92(1) ರಕ್ಷಣಾತ್ಮಕ ನಿಯಮಗಳನ್ನು ಹೊಂದಿದ್ದರೂ, ಅದು ಕೇಂದ್ರದ ಎಐಸಿಟಿಇ ಕಡ್ಡಾಯ ಅರ್ಹತಾ ನಿಯಮಗಳನ್ನು ಮೀರಿ ಉಪನ್ಯಾಸಕನನ್ನು ಹುದ್ದೆಯಲ್ಲಿ ಮುಂದುವರೆಸಲು ಅನುಮತಿ ನೀಡುವುದಿಲ್ಲ ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: Karnataka High Court: ಸ್ನಾತಕೋತ್ತರ ಪದವೀಧರೆ ಎಂದು ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್
12 ಲಕ್ಷ ಪರಿಹಾರ ನೀಡಲು ನಿರ್ದೇಶನ: ತಾಂತ್ರಿಕ ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳಲು ತಜ್ಞರ ಸಮಿತಿ ರೂಪಿಸುವ ನಿಯಮಗಳನ್ನು ಸಡಿಲಗೊಳಿಸಲು ನ್ಯಾಯಾಲಯಗಳಿಗೆ ಅಧಿಕಾರವಿಲ್ಲ. ಆದರೆ, ಉಪನ್ಯಾ ಸಕನಿಗೆ ಅಗತ್ಯ ಅರ್ಹತೆ ಇಲ್ಲದಿದ್ದರೂ ಕಾಲೇಜು ಆಡಳಿತ ಮಂಡಳಿಯು ಅವರನ್ನು 4 ವರ್ಷಗಳ ಕಾಲ ಕೆಲಸದಲ್ಲಿ ಮುಂದುವರಿಸಿತ್ತು. ತಮಗೂ ಅರ್ಹತೆ ಇದೆ ಎಂದು ನಂಬು ವಂತೆ ಮಾಡಿದ್ದ ಜವಾಬ್ದಾರಿಯಿಂದ ಕಾಲೇ ಜು ಸಂಪೂರ್ಣ ನುಣುಚಿಕೊಳ್ಳಲು ಸಾಧ್ಯವಿ ಲ್ಲ. ಆದ್ದರಿಂದ ಉಪನ್ಯಾಸಕನಿಗೆ 4 ವಾರಗಳ ಒಳಗೆ 12 ಲಕ್ಷ ರು. ಪರಿಹಾರ ನೀಡಬೇಕು ಎಂದು ಪೀಠ ನಿರ್ದೇಶನ ನೀಡಿದೆ
ಪ್ರಕರಣದ ಹಿನ್ನೆಲೆ: 2008ರಲ್ಲಿ ಸ್ಥಾಪನೆಯಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಪಡೆದಿರುವ ಹಾಸನದ ರಾಜೀವ್ ತಾಂತ್ರಿಕ ಮಹಾವಿದ್ಯಾಯದಲ್ಲಿ ಪ್ರತಿವಾದಿಯಾಗಿರುವ ಎಂ.ವಿ.ರಮೇಶ್ ಅವರು 2011ರ ಫೆಬ್ರುವರಿ 7ರಿಂದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾಗಿ ಸೇರ್ಪಡೆಗೊಂಡಿದ್ದರು. ಆದರೆ, 2010ರ ಪರಿಷ್ಕೃತ ಎಐಸಿಟಿಇ ನಿಯಮಾವಳಿಗಳ ಪ್ರಕಾರ ಎಂಜಿನಿ ಯರಿಂಗ್ ವಿದ್ಯಾರ್ಥಿಗಳಿಗೆ ಬೋಧಿಸಲು ಎಂಇ ಇಲ್ಲವೇ ಎಂಟೆಕ್ ಪದವಿ ಕಡ್ಡಾಯಗೊ ಳಿಸಲಾಗಿತ್ತಾದರೂ, ರಾಜ್ಯದಲ್ಲಿ ಜಾರಿಯಾಗದ ಹಿನ್ನೆಲೆಯಲ್ಲಿ ಬಿಇ ಪದವಿ ಪಡೆದಿದ್ದರೆ ಸಾಕು ಎಂಬುದಾಗಿತ್ತು.