ಬೆಂಗಳೂರು: ಲೈವ್ ಆಗಿ ಪಂದ್ಯವನ್ನು ವೀಕ್ಷಿಸುವ ವೀಕ್ಷಕರಿಗೆ ಸಂಪೂರ್ಣ ಹೊಸ ಅನುಭವವನ್ನು ನೀಡಲು ಜಿಯೋಹಾಟ್‌ಸ್ಟಾರ್ ಮುಂದಾಗಿದೆ. ಡಿಜಿಟಲ್ ಸ್ಟ್ರೀಮಿಂಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಸ್ವಿಗ್ಗಿ ಜೊತೆಗೂಡಿ 'ಇನ್-ಆ್ಯಪ್ ಫುಡ್ ಆರ್ಡ ರಿಂಗ್' ವ್ಯವಸ್ಥೆಯನ್ನು ಜಿಯೋಹಾಟ್‌ಸ್ಟಾರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ.
ಇದರಿಂದ ಇನ್ಮುಂದೆ ಲೈವ್ ಮ್ಯಾಚ್ ನೋಡುತ್ತಿರುವಾಗ ಹಸಿವಾದರೆ, ವಿಡಿಯೋವನ್ನು ಕ್ಲೋಸ್ ಮಾಡಿ ಬೇರೆ ಆ್ಯಪ್‌ಗೆ ಹೋಗಬೇಕಿಲ್ಲ. ಬದಲಾಗಿ, ಜಿಯೋಹಾಟ್‌ಸ್ಟಾರ್ ಆ್ಯಪ್ ನೊಳಗೇ ರೆಸ್ಟೋರೆಂಟ್‌ಗಳನ್ನು ಹುಡುಕಿ, ಎಕ್ಸ್‌ಕ್ಲೂಸಿವ್ ಆಫರ್‌ಗಳನ್ನು ಬಳಸಿ, ಆಹಾರ ವನ್ನು ಆರ್ಡರ್ ಮಾಡಬಹುದು. ಹಾಗೂ ಟ್ರ್ಯಾಕ್ ಕೂಡ ಮಾಡಬಹುದು. ವಿಶೇಷವಾಗಿ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಫೀಚರ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
3.7 ಕೋಟಿಗೂ ಹೆಚ್ಚು ಬಳಕೆದಾರರ ಮೆಚ್ಚುಗೆ
ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ಸೀಸನ್‌ನಲ್ಲಿ ಈಗಾಗಲೇ 3.7 ಕೋಟಿ ವೀಕ್ಷಕರು ಈ ಫೀಚರ್ ಅನ್ನು ಬಳಸಿ ಆಹಾರ ತರಿಸಿಕೊಂಡಿದ್ದಾರೆ. ದೇಶದ 690ಕ್ಕೂ ಹೆಚ್ಚು ನಗರಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಕೇವಲ ಪಂದ್ಯದ ಸ್ಕೋರ್ ನೋಡುವುದಷ್ಟೇ ಅಲ್ಲದೆ, ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನೈಜ-ಸಮಯದ ವಹಿವಾಟು ನಡೆಸಲು ಇದು ಅವಕಾಶ ಮಾಡಿ ಕೊಟ್ಟಿದೆ.
ಪಂದ್ಯದ ವೇಳೆ ದಾಖಲಾಗಿವೆ ಅಚ್ಚರಿಯ ಟ್ರೆಂಡ್‌ಗಳು
ಈ ಹೊಸ ಸೌಲಭ್ಯದ ಮೂಲಕ ಆಹಾರ ಆರ್ಡರ್ ಮಾಡುವವರ ಅಂಕಿ-ಅಂಶಗಳು ಹಲವು ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿವೆ:
* ಬರ್ಗರ್ ದರ್ಬಾರ್: ಈವರೆಗೆ ಕ್ರಿಕೆಟ್ ಮ್ಯಾಚ್ ಎಂದರೆ ಬಿರಿಯಾನಿ ಎಂಬಷ್ಟರ ಮಟ್ಟಿಗೆ ಬೇಡಿಕೆ ಇತ್ತು. ಆದರೆ ಈ ಸೀಸನ್‌ನಲ್ಲಿ ಬಿರಿಯಾನಿಯನ್ನು ಹಿಂದಿಕ್ಕಿ 'ಬರ್ಗರ್' ಅತಿ ಹೆಚ್ಚು ಆರ್ಡರ್ ಆದ ಖಾದ್ಯವಾಗಿ ಹೊರಹೊಮ್ಮಿದೆ.
* ಒಂದೇ ಬಿಲ್‌ನಲ್ಲಿ 100 ಬರ್ಗರ್: ಮ್ಯಾಚ್‌ನ ನಿರ್ಣಾಯಕ ಹಂತದಲ್ಲಿ ಗುಂಪಾಗಿ ಕುಳಿತು ಪಂದ್ಯ ವೀಕ್ಷಿಸುವ ಉತ್ಸಾಹ ಎಷ್ಟಿತ್ತೆಂದರೆ, ಬಳಕೆದಾರರೊಬ್ಬರು ಒಂದೇ ಆರ್ಡರ್‌ನಲ್ಲಿ ಬರೋಬ್ಬರಿ 100 ಬರ್ಗರ್‌ಗಳನ್ನು ತರಿಸಿಕೊಂಡಿದ್ದಾರೆ!
* ಆರ್‌ಸಿಬಿ ಮ್ಯಾಚ್‌ಗೆ ಡಿಮ್ಯಾಂಡ್: ಮುಂಬೈ ಇಂಡಿಯನ್ಸ್ ಪಂದ್ಯಗಳ ವೇಳೆ ಒಟ್ಟಾರೆ ಅತಿ ಹೆಚ್ಚು ಆರ್ಡರ್‌ಗಳು ಬಂದಿದ್ದರೆ, 'ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್' ನಡುವಿನ ರೋಚಕ ಪಂದ್ಯದ ವೇಳೆ ಒಂದೇ ಪಂದ್ಯದಲ್ಲಿ ಗರಿಷ್ಠ ಆರ್ಡರ್ ದಾಖಲಾಗಿದೆ.
* ಹೈದರಾಬಾದ್, ಬೆಂಗಳೂರು ಮುಂದು: ಆಹಾರ ಆರ್ಡರ್ ಮಾಡುವಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ದೆಹಲಿ ನಗರಗಳು ಮುಂಚೂಣಿಯಲ್ಲಿದ್ದರೆ, ಪುಣೆ ಹಾಗೂ ಪಾಟ್ನಾ ದಂತಹ ಎರಡನೇ ಸ್ಥರದ ನಗರಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇವಲ 10 ನಿಮಿಷ 42 ಸೆಕೆಂಡುಗಳಲ್ಲಿ ಆಹಾರವನ್ನು ಗ್ರಾಹಕರಿಗೆ ತಲುಪಿಸಿರುವ ದಾಖಲೆ ಯೂ ನಿರ್ಮಾಣವಾಗಿದೆ. ಜೊತೆಗೆ, ಬಳಕೆದಾರರೊಬ್ಬರು ಒಂದೇ ಆರ್ಡರ್‌ನಲ್ಲಿ 6,801 ರೂ. ಪಾವತಿಸಿದ್ದರೆ, ಮತ್ತೊಬ್ಬರು ಮ್ಯಾಚ್-ಟೈಮ್ ಆಫರ್ ಬಳಸಿ ಬರೋಬ್ಬರಿ 12,947 ರೂ. ಉಳಿತಾಯ ಮಾಡಿದ್ದಾರೆ.
ಈ ವಿನೂತನ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿರುವ ಜಿಯೋಸ್ಟಾರ್‌ನ ಕ್ರೀಡಾ ವಿಭಾಗದ ಸಿಇಒ ಇಶಾನ್ ಚಟರ್ಜಿ, "ನಾವು ಕಂಟೆಂಟ್ ಮತ್ತು ಕಾಮರ್ಸ್ ನಡುವಿನ ಅಂತರವನ್ನು ಅಳಿಸುತ್ತಿದ್ದೇವೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ವೀಕ್ಷಣೆಗಷ್ಟೇ ಸೀಮಿತವಾಗದೆ, ಗ್ರಾಹಕರು ಆ ಕ್ಷಣದಲ್ಲಿ ಏನು ಬಯಸುತ್ತಾರೋ ಅದನ್ನು ಒದಗಿಸುವ ತಾಣಗಳೂ ಆಗುತ್ತಿವೆ," ಎಂದಿದ್ದಾರೆ.
"ಲೈವ್ ಪಂದ್ಯಗಳ ವೀಕ್ಷಣೆ ಇದೀಗ ಮಲ್ಟಿ-ಟಾಸ್ಕಿಂಗ್ ಆಗಿದೆ. ಮ್ಯಾಚ್ ನೋಡುತ್ತಲೇ ಊಟ ಮಾಡುವುದು ಬಹುತೇಕರ ದಿನಚರಿ. ಜಿಯೋಹಾಟ್‌ಸ್ಟಾರ್ ಜೊತೆಗಿನ ನಮ್ಮ ಪಾಲುದಾರಿಕೆಯಿಂದಾಗಿ, ಅಭಿಮಾನಿಗಳು ಪಂದ್ಯದ ಯಾವುದೇ ರೋಚಕ ಕ್ಷಣವನ್ನು ಮಿಸ್ ಮಾಡಿಕೊಳ್ಳದೆ ತಮ್ಮ ನೆಚ್ಚಿನ ಆಹಾರವನ್ನು ಸವಿಯಬಹುದು," ಎಂದು ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ತಿಳಿಸಿದ್ದಾರೆ.
'ಮ್ಯಾಚ್ ಆನ್, ಮಂಚ್ ಆನ್' ಅಭಿಯಾನ
ಈ ಹೊಸ ಸೌಲಭ್ಯವನ್ನು ಜನಪ್ರಿಯಗೊಳಿಸಲು “ಈ ಕ್ರಿಕೆಟ್ ಸೀಸನ್‌ನಲ್ಲಿ ಜಿಯೋ ಹಾಟ್ ಸ್ಟಾರ್‌ನಲ್ಲಿ 'ಸ್ವಿಗ್ಗಿ' ಮಾಡಿ. ಟ್ಯಾಪ್. ಆರ್ಡರ್. ಈಟ್. ರಿಪೀಟ್. ಮ್ಯಾಚ್ ಆನ್. ಮಂಚ್ ಆನ್” ಎಂಬ ಆಕರ್ಷಕ ಜಾಹೀರಾತು ಅಭಿಯಾನವನ್ನು ಕೂಡ ಕೈಗೊಳ್ಳಲಾಗಿದೆ. ಡಿಜಿಟಲ್ ಹಾಗೂ ಟೆಲಿವಿಷನ್ ಜಾಲದಾದ್ಯಂತ ಈ ಜಾಹೀರಾತುಗಳು ಪ್ರಸಾರವಾಗುತ್ತಿವೆ.
ಕೇವಲ ಕಂಟೆಂಟ್ ವೀಕ್ಷಣೆಗಷ್ಟೇ ಸೀಮಿತವಾಗಿದ್ದ ಜಿಯೋಹಾಟ್‌ಸ್ಟಾರ್ ಇದೀಗ ವಾಯ್ಸ್ ಡಿಸ್ಕವರಿ, ಶಾಪ್ ದ ಲುಕ್ ಮತ್ತು ಇ-ಕಾಮರ್ಸ್ ಅಳವಡಿಕೆಯ ಮೂಲಕ ವೀಕ್ಷಕರನ್ನು ಹೆಚ್ಚು ಸಂವಾದಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ.