ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore Flat Rent: ಬೆಂಗಳೂರಿನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್‌ ಕೇಳಿದ ಮಾಲೀಕ!

Security Deposit For Bangalore Flat : ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ವೊಂದಕ್ಕೆ ನೀಡಿರುವ ಜಾಹೀರಾತು ವೈರಲ್‌ ಆಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ ಹಾಗೂ 30 ಲಕ್ಷ ಅಡ್ವಾನ್ಸ್‌ ನಿಗದಿಪಡಿಸಿರುವುದನ್ನು ರೆಡಿಟ್‌ನಲ್ಲಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಹಲವರು ಕಿಡಿಕಾರಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ನ.4: ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದರ (Bangalore Flat Rent) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಬಡ, ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಹೊರೆಯಾಗುತ್ತಿದೆ. ಈ ನಡುವೆ 2 ಬಿಎಚ್‌ಕೆ ಫ್ಲ್ಯಾಟ್‌ಗೆ ಮನೆ ಮಾಲೀಕರೊಬ್ಬರು 20 ಸಾವಿರ ಬಾಡಿಗೆ ಹಾಗೂ 30 ಲಕ್ಷ ಅಡ್ವಾನ್ಸ್‌ ಕೇಳಿರುವುದು ಬೆಳಕಿಗೆ ಬಂದಿದ್ದು, ಮಾಲೀಕನ ಡಿಮ್ಯಾಂಡ್‌ ಕೇಳಿ ಬಾಡಿಗೆದಾರರು ಬೆಚ್ಚಿಬಿದ್ದಿದ್ದಾರೆ. ಈ ಮನೆ ಬಾಡಿಗೆ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ನಗರದ ಫ್ರೇಜರ್‌ ಟೌನ್‌ನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ವೊಂದಕ್ಕೆ ನೀಡಿರುವ ಜಾಹೀರಾತು ವೈರಲ್‌ ಆಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ ಹಾಗೂ 30 ಲಕ್ಷ ಅಡ್ವಾನ್ಸ್‌ ನಿಗದಿಪಡಿಸಿರುವುದನ್ನು ರೆಡಿಟ್‌ನಲ್ಲಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಸದ್ಯ ಪೋಸ್ಟ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಫ್ಲ್ಯಾಟ್‌ನ ಭದ್ರತಾ ಠೇವಣಿ ಮೊತ್ತ ನೋಡಿ ಬೆಂಗಳೂರಿನ ನಿವಾಸಿಗಳು ಶಾಕ್‌ ಆಗಿದ್ದಾರೆ.

ಸುಸಜ್ಜಿತ ಹೊಸ 2 ಬಿಎಚ್‌ಕೆ ಫ್ಲ್ಯಾಟ್‌ ಬಾಡಿಗೆಗೆ ಇದ್ದು, 20,000 ಬಾಡಿಗೆ ಮತ್ತು 30 ಲಕ್ಷ ಭದ್ರತಾ ಠೇವಣಿ ನೀಡಬೇಕು. ಅತ್ಯುತ್ತಮ ಒಳಾಂಗಣ ವಿನ್ಯಾಸ, ಮಾಡ್ಯುಲರ್‌ ಲಿವಿಂಗ್‌ ರೂಮ್‌ ಜತೆ ಫರ್ನಿಚರ್‌, ಬೆಡ್‌ಗಳು, ವಾರ್ಡ್‌ ರೋಬ್‌ಗಳು, ಮಾಡ್ಯುಲರ್‌ ಕಿಚನ್‌, ಫ್ರಿಡ್ಜ್‌, ಮೈಕ್ರೋವೇವ್‌ ಓವನ್‌, ಗ್ಯಾಸ್‌ ಸ್ಟವ್‌, ವಾಟರ್‌, ಫಿಲ್ಟರ್‌, ಕಾರ್‌ ಪಾರ್ಕಿಂಗ್‌ ಸೌಲಭ್ಯ ಇದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

Bengaluru Flat Rent (1)

ಈ ಸುದ್ದಿಯನ್ನೂ ಓದಿ | Bengaluru Clean-up drive: ಬೆಂಗಳೂರು: ಸ್ವಚ್ಛತಾ ಅಭಿಯಾನದಲ್ಲಿ ಗೆದ್ದವರಿಗೆ ಸಿಗಲಿದೆ 1 ಲಕ್ಷ ರೂ. ಬಹುಮಾನ

ಈ ಮನೆ ಬಾಡಿಗೆ ಜಾಹೀರಾತಿನ ಬಗ್ಗೆ ಹಲವು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದು ಅಸಮಂಜಸ ದರ ಆಗಿದ್ದು, 20 ಸಾವಿರ ರೂ. ಬಾಡಿಗೆ ಮನೆಗೆ 30 ಲಕ್ಷ ಅಡ್ವಾನ್ಸ್‌ ಯಾರು ನೀಡುತ್ತಾರೆ? ಇದು ಮೋಸ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಈ ಮನೆ ಮಾಲೀಕನಿಗೆ 30 ಲಕ್ಷ ಅಡ್ವಾನ್ಸ್‌ ಕೊಡುವ ಬದಲು ಹೊಸ ಮನೆಯನ್ನೇ ಖರೀದಿಸಬಹುದು, ಇಷ್ಟು ಮೊತ್ತ ಬಾಡಿಗೆ ನೀಡುವ ಬದಲು ಇಎಂಐನಲ್ಲಿ ಮನೆ ಖರೀದಿಸಬಹುದು ಎಂದು ಹೇಳಿದ್ದಾರೆ.

ಮತ್ತೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಮನೆ ಮಾಲೀಕನಿಗೆ ಅಷ್ಟು ದೊಡ್ಡ ಮೊತ್ತದ ಹಣ ಬೇಕಿದ್ದರೆ ಆ ಮನೆಯನ್ನು ಲೀಸ್‌ಗೆ ಕೊಡಬಹುದಿತ್ತು. ನನಗೆ ಗೊತ್ತಿಲ್ಲ ಇಂತಹ ಮನೆಗೆ ಯಾರು ಹೋಗುತ್ತಾರೋ ಎಂದು ತಿಳಿಸಿದ್ದಾರೆ. ಇನ್ನು ಹಲವರು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬ್ಯಾಚಲರ್‌ ಆಗಿದ್ದರೆ ಪಿಜಿಗಳಲ್ಲಿ ಇರುವುದು ಒಳ್ಳೆಯದು. ನಗರದ ವೈಟ್‌ಫೀಲ್ಡ್‌ ಮತ್ತಿತರ ಭಾಗಗಳಲ್ಲಿ ಬಾಡಿಗೆ ದರ ಗಗನಕ್ಕೆ ಏರಿದೆ. ಕೆಲವು ಕಡೆ ದಂಧೆ ನಡೆಯುತ್ತಿದೆ. ಬಾಡಿಗೆ ಮನೆ ಮಾಲೀಕರು ಲೂಟಿ ಮಾಡುತ್ತಿದ್ದಾರೆ ಅಸಮಾಧಾನ ಹೊರಹಾಕಿದ್ದಾರೆ.