ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

#Paaru Parvathy Movie: ಬಿಗ್‌ ಬಾಸ್‌ ಖ್ಯಾತಿಯ ದೀಪಿಕಾದಾಸ್ ಅಭಿನಯದ ‘#ಪಾರು ಪಾರ್ವತಿʼ ಚಿತ್ರದ ಟ್ರೈಲರ್‌ಗೆ ಅಭಿಮಾನಿಗಳು ಫಿದಾ

ಬಿಗ್‌ ಬಾಸ್‌ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ಅಡ್ವೆಂಚರ್‌ ಕಾಮಿಡಿ ಜಾನರ್‌ನ ʼ#ಪಾರು ಪಾರ್ವತಿʼ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಇದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣಗೊಳಿಸಿದರು. ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಈಗಾಗಲೇ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಯಾಗಿದೆ.

ದೀಪಿಕಾದಾಸ್ ಅಭಿನಯದ ‘#ಪಾರು ಪಾರ್ವತಿʼ ಚಿತ್ರದ ಟ್ರೈಲರ್‌ಗೆ ಅಭಿಮಾನಿಗಳು ಫಿದಾ

ದೀಪಿಕಾ ದಾಸ್ ಅಭಿನಯದ ʼ#ಪಾರು ಪಾರ್ವತಿʼ ಚಿತ್ರ

Profile Siddalinga Swamy Jan 25, 2025 4:55 PM

ಬೆಂಗಳೂರು: EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ ʼಬಿಗ್ ಬಾಸ್ʼ ಖ್ಯಾತಿಯ ದೀಪಿಕಾ ದಾಸ್ (Deepika Das), ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼ#ಪಾರು ಪಾರ್ವತಿʼ ಚಿತ್ರ (#Paaru Parvathy Movie) ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೈಲರ್‌ ಅನ್ನು ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಅನಾವರಣಗೊಳಿಸಿದ್ದಾರೆ. ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಈಗಾಗಲೇ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಹು ನಿರೀಕ್ಷಿತ ಈ ಚಿತ್ರ ಜನವರಿ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಟ್ರೈಲರ್‌ ಬಿಡುಗಡೆ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ʼʼಅಡ್ವೆಂಚರ್‌ ಕಾಮಿಡಿ ಜಾನರ್‌ನ ಈ ಚಿತ್ರದ ಟ್ರೈಲರ್‌ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರ ಯಶಸ್ವಿಯಾಗಲಿʼʼ ಎಂದು ಹಾರೈಸಿದರು. ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ ಎಂದೇ‌ ಹೇಳಲಾಗುತ್ತಿರುವ ಕಾರ್ ಅನ್ನು ಸಹ ಸುದೀಪ್ ಸ್ವತಃ ವೀಕ್ಷಿಸಿದರು. ನಟಿ ದೀಪಿಕಾ ದಾಸ್, ನಿರ್ಮಾಪಕ ಪ್ರೇಂನಾಥ್, ನಿರ್ದೇಶಕ ರೋಹಿತ್ ಕೀರ್ತಿ ಉಪಸ್ಥಿತರಿದ್ದರು.



ಈ ಪ್ರವಾಸ ಕಥನಕ್ಕೆ ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡ್‌ನಲ್ಲಿ ಚಿತ್ರೀಕರಣ ನಡೆದಿದೆ. ಅಬಿನ್ ರಾಜೇಶ್ ಛಾಯಾಗ್ರಹಣ, ಆರ್ ಹರಿ ಸಂಗೀತ ನಿರ್ದೇಶನ ಹಾಗೂ ಸಿ.ಕೆ. ಕುಮಾರ ಅವರ ಸಂಕಲನ ʼ#ಪಾರು ಪಾರ್ವತಿʼ ಚಿತ್ರಕ್ಕಿದೆ.

ಈ ಸುದ್ದಿಯನ್ನೂ ಓದಿ | Graphic Stripes Fashion: ಯಂಗ್ ಲುಕ್‌ಗೆ ಸಾಥ್ ನೀಡುವ ಗ್ರಾಫಿಕ್ ಸ್ಟ್ರೈಪ್ಸ್ ಡಿಸೈನರ್ ವೇರ್ಸ್