Graphic Stripes Fashion: ಯಂಗ್ ಲುಕ್‌ಗೆ ಸಾಥ್ ನೀಡುವ ಗ್ರಾಫಿಕ್ ಸ್ಟ್ರೈಪ್ಸ್ ಡಿಸೈನರ್ ವೇರ್ಸ್
Graphic Stripes Fashion: ಗ್ರಾಫಿಕ್ ಸ್ಟ್ರೈಪ್ಸ್ ಡಿಸೈನರ್ ವೇರ್ಸ್ ಇಂದು ಯಂಗ್ ಲುಕ್ ಬಯಸುವ ಮಾನಿನಿಯರನ್ನು ಸೆಳೆದಿವೆ. ಏನಿದು ಗ್ರಾಫಿಕ್ ಸ್ಟ್ರೈಪ್ಸ್ ವಿನ್ಯಾಸ. ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರಾಫಿಕ್ ಸ್ಟ್ರೈಪ್ಸ್ ಡಿಸೈನರ್ ವೇರ್ಸ್ (Graphic Stripes Fashion) ಇಂದು ಯಂಗ್ ಲುಕ್ ಬಯಸುವ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಅಂದ ಹಾಗೆ, ಇವು ಸಾಮಾನ್ಯವಾದ ಸ್ಟ್ರೈಪ್ಸ್ ಪ್ರಿಂಟ್ ಡಿಸೈನ್ ಅಲ್ಲ, ಇವಕ್ಕೆ ಪರ್ಟಿಕ್ಯುಲರ್ ಡಿಸೈನ್ ಇಲ್ಲ. ಕೆಲವೊಮ್ಮೆ ಕ್ವಿರ್ಕಿ, ಪಾಪ್ ಪ್ರಿಂಟ್ಸ್ ಮಿಕ್ಸ್ ಮ್ಯಾಚ್‌ನಲ್ಲೂ ಕಾಣಬಹುದು. ಇಲ್ಲವೇ ಕನ್ಪ್ಯೂಸ್ ಮಾಡುವಂತಹ ಪ್ರಿಂಟ್ಸ್ ಡಿಸೈನ್‌ಗಳಲ್ಲೂ ನೋಡಬಹುದು.
ವೆರೈಟಿ ಗ್ರಾಫಿಕ್ ಸ್ಟ್ರೈಪ್ಸ್
ವರ್ಟಿಕಲ್, ಹಾರಿಝಾಂಟಲ್, ಕ್ರಿಸ್ ಕ್ರಾಸ್, ಬಿಗ್ ಸ್ಟ್ರೈಫ್ಸ್, ಪೊಲ್ಕಾ ಮಿಕ್ಸ್ ಸ್ಟ್ರೈಫ್ಸ್, ಕಲರ್ಡ್ ಪ್ರಿಂಟ್ ಸ್ಟ್ರೈಫ್ಸ್ ಹೀಗೆ ಲೆಕ್ಕವಿಲ್ಲದಷ್ಟು ಶೈಲಿಯಲ್ಲಿಗ್ರಾಫಿಕ್ ಸ್ಟ್ರೈಪ್ಸ್ ಡಿಸೈನರ್‌ವೇರ್‌ಗಳಲ್ಲಿ ವ್ಯಾಪಿಸಿ ಜಾದೂ ಮೂಡಿಸಿವೆ.

ಊಹೆಗೂ ಮೀರಿದ ಗಾಫಿಕ್ ಸ್ಟ್ರೈಪ್ಸ್ ವಿನ್ಯಾಸ
ಅಳತೆಗೆ ತಕ್ಕ ಗ್ರಾಫಿಕ್ ಡಿಸೈನ್ಸ್, ಸ್ಲೀವ್‌ಗೊಂದು ತರಹದ್ದಾದರೇ, ವೇಸ್ಟ್ ಲೈನ್‌ನಿಂದ ಇನ್ನೊಂದು ಬಗೆಯಲ್ಲಿರುತ್ತದೆ. ಇನ್ನು ಕೆಲವು ಡಿಸೈನರ್‌ವೇರ್‌ನಲ್ಲಿ ಸ್ಟ್ರೈಫ್ಸ್ ಇದೆಯೋ ಇಲ್ಲವೋ ಎಂದು ಹುಡುಕುವಷ್ಟರ ಮಟ್ಟಿಗೆ ಡಬ್ಬಲ್ ಶೇಡ್ ಬಿಗ್ ಸ್ಟ್ರೈಪ್ಸ್ ಕಾಣುತ್ತವೆ. ನೋಡುತ್ತಲೇ ಇದ್ದಲ್ಲಿ, ಲೈನ್‌ಗಳು ಹೆಚ್ಚಾದಂತೆ, ಅಲೆಯಂತೆ ಇಲ್ಲವೇ ಸ್ವಿಂಗ್ ಟಾಪ್‌ನಂತೆ ಕಾಣುತ್ತವೆ. ಇನ್ನು ಕನ್ಫ್ಯೂಸ್ ಮಾಡುವ ಜಿಯೊಮೆಟ್ರಿಕಲ್ ಸ್ಟ್ರೈಪ್ಸ್ ಹೀಗೆ ಊಹೆಗೂ ಮೀರಿದ ಗ್ರಾಫಿಕ್ ಸ್ಟ್ರೈಪ್ಸ್ ವಿನ್ಯಾಸದ ಡ್ರೆಸ್‌ಗಳು ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸಿವೆ.
ಮ್ಯಾಜಿಕ್ ಸ್ಟ್ರೈಪ್ಸ್ ವಿನ್ಯಾಸ
ಮೊದಲೆಲ್ಲಾ ಸ್ಟ್ರೈಪ್ಸ್ ಡ್ರೆಸ್ ಎಂದರೆ ಉದ್ದುದ್ದ, ಅಡ್ಡಡ್ಡ ಪಟ್ಟೆ ಪಟ್ಟೆ ಪ್ರಿಂಟ್ಸ್ ಇರುತ್ತಿದ್ದವು. ಇದೀಗ ಡಿಸೈನರ್‌ಗಳ ಈ ಕಲ್ಪನೆ ಬದಲಾಗಿದೆ. ಫ್ಯಾಷನ್ ಪ್ರಿಯರು ಕೂಡ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಾಮನ್ ಸ್ಟ್ರೈಪ್ಸ್ ಬದಲು ಕಲರ್‌ಫುಲ್ ಹಾಗೂ ಮ್ಯಾಜಿಕಲ್ ಗ್ರಾಫಿಕ್ ಸ್ಟ್ರೈಪ್ಸ್‌ನ ಡಿಸೈನವೇರ್‌ಗಳನ್ನು ಚೂಸ್ ಮಾಡಲಾರಂಭಿಸಿದ್ದಾರೆ.

ಪ್ರಿಂಟ್ಸ್ ಜತೆ ಗ್ರಾಫಿಕ್ ಮಿಕ್ಸ್
ಫ್ಲೋರಲ್, ಪೊಲ್ಕಾ, ಕ್ರಿಸ್ ಕ್ರಾಸ್ ಹೀಗೆ ನಾನಾ ಬಗೆಯ ಪ್ರಿಂಟ್ಸ್ ಜತೆಗೆ ಸೀದಾ ಸಾದಾ ಲೈನ್ಸ್, ಅಡ್ಡಡ್ಡ ಉದ್ದುದ್ದ, ಸೊಟ್ಟ ಹಾಗೂ ವಕ್ರ ಕೆಲವೊಂದು ಜಿಯಾಮೆಟ್ರಿಕಲ್ ಸ್ಟ್ರೆಪ್ಸ್ ಕೂಡ ಮಿಕ್ಸ್ ಆಗಿರುತ್ತವೆ. ಕೆಲವು ಡ್ರೆಸ್‌ಗಳಲ್ಲಂತೂ ಇದು ಸ್ಟ್ರೈಪ್ ಡ್ರೆಸ್ಸಾ ಎನ್ನುವಷ್ಟರ ಮಟ್ಟಿಗೆ ವಿನ್ಯಾಸ ಸಮ್ಮಿಲನಗೊಂಡಿರುತ್ತವೆ ಎನ್ನುತ್ತಾರೆ ಮಾಡೆಲ್ ಹರ್ಷ್ ರಾಣಾ.
ಈ ಸುದ್ದಿಯನ್ನೂ ಓದಿ | Model Winter Fashion 2025: ಮಾಡೆಲ್ ಶಾರ್ವರಿಯ ಆಕರ್ಷಕ ವಿಂಟರ್ ಫ್ಯಾಷನ್
ಗ್ರಾಫಿಕ್ ಸ್ಟ್ರೈಪ್ಸ್ ಡ್ರೆಸ್ ಪ್ರಿಯರಿಗೆ ಸಿಂಪಲ್ ಐಡಿಯಾ
* ಸ್ಟ್ರೈಪ್ಸ್ ಎಲ್ಲರಿಗೂ ಹೊಂದುವುದಿಲ್ಲ. ಹಾಗಾಗಿ ಮೊದಲು ಧರಿಸಿ, ಟ್ರಯಲ್ ನೋಡಿ ನಂತರ ಕೊಳ್ಳಬೇಕು.
* ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಶೇಡ್ಸ್ ಚೂಸ್ ಮಾಡಿ.
* ಹೇರ್ ಸ್ಟೈಲ್ ಈ ಡಿಸೈನರ್‌ವೇರ್ ಜತೆ ಮಿಕ್ಸ್ ಆಗುವಂತಿರಲಿ.
* ಲಿಪ್ ಶೇಡ್ಸ್ ಹೆಚ್ಚು ಡಾರ್ಕ್ ಶೇಡ್ ಬೇಡ. ಬದಲಿಗೆ ಲೈಟಾಗಿರಲಿ.
* ನೇಲ್ ಆರ್ಟ್ ಕೂಡ ಸ್ಟ್ರೈಪ್ಸ್ ಡಿಸೈನ್‌ನದ್ದು ಮಾಡಬಹುದು.
* ಸಾದಾ ಶೇಡ್ಸ್‌ಗೆ ಮಾತ್ರ ಸ್ಟ್ರೈಪ್ಸ್ ಆಕ್ಸೆಸರೀಸ್ ಧರಿಸಿ.
* ಅತಿ ಹೆಚ್ಚು ಆಕ್ಸೆಸರೀಸ್ ಧರಿಸಿದಲ್ಲಿ ಮೆಸ್ಸಿಯಾಗಿ ಕಾಣಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)