ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'Param Vihar' :ಸೆ.26ಕ್ಕೆ 'ಪರಮ್ ವಿಹಾರ'ದ ವೀಣಾ ನಾದ, ಒಡಿಸ್ಸಿ ನೃತ್ಯ ವೈಭವ: ಬನಶಂಕರಿಯ ಸುಚಿತ್ರಾ ಸಭಾಂಗಣದಲ್ಲಿ ಆಯೋಜನೆ

ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಕಲೆ-ಸಂಸ್ಕೃತಿಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ 'ಪರಮ್ ಕಲ್ಚರ್' ಸಂಸ್ಥೆಯು ಆಯೋಜಿಸುತ್ತಿರುವ ಮಾಸಿಕ ಸಾಂಸ್ಕೃತಿಕ ಸರಣಿ 'ಪರಮ್ ವಿಹಾರ'ದ 16ನೇ ಆವೃತ್ತಿಯು ಸೆ.26ರಂದು ಸಂಜೆ 6ರಿಂದ 8ರವರೆಗೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: ಕಾರ್ಯಕ್ರಮ ಪರಮ್‌ ವಿಹಾರದ 16ನೇ ಆವೃತ್ತಿ ಕಾರ್ಯಕ್ರಮ

ಸುಚಿತ್ರಾ ಅಕಾಡೆಮಿಯಲ್ಲಿ ಸಾಂಸ್ಕೃತಿಕ ಸಂಜೆ: ವೀಣಾ ಜುಗಲ್ಬಂದಿ, ಒಡಿಸ್ಸಿ ನೃತ್ಯ

ಬೆಂಗಳೂರು: ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಕಲೆ-ಸಂಸ್ಕೃತಿಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ 'ಪರಮ್ ಕಲ್ಚರ್' ಸಂಸ್ಥೆಯು ಆಯೋಜಿಸುತ್ತಿರುವ ಮಾಸಿಕ ಸಾಂಸ್ಕೃತಿಕ ಸರಣಿ 'ಪರಮ್ ವಿಹಾರ'ದ 16ನೇ ಆವೃತ್ತಿಯು ಸೆ.26ರಂದು ಸಂಜೆ 6ರಿಂದ 8ರವರೆಗೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: Dance Karnataka Dance: ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?

ಪ್ರತಿ ತಿಂಗಳ ನಾಲ್ಕನೇ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಪ್ರೇಮಿಗಳ ಸನಿಹಕ್ಕೆ ತರುವ ಈ ಸರಣಿಯಲ್ಲಿ, ಈ ಬಾರಿ ಶಾಸ್ತ್ರೀಯ ವೀಣಾ ವಾದನ ಹಾಗೂ ಆಕರ್ಷಕ ಒಡಿಸ್ಸಿ ನೃತ್ಯ ಪ್ರದರ್ಶನಗಳು ಕಲಾ ರಸಿಕರ ಮನಸೂರೆಗೊಳ್ಳಲಿವೆ.

ವೀಣಾ ಜುಗಲ್ಬಂದಿ: ವಿದ್ವಾನ್ ಗೋಪಾಲ್ ವೆಂಕಟರಮಣ(Vidwan Gopal Venkataramana) ಅವರ ಶಿಷ್ಯೆಯರಾದ ಕುಮಾರಿ ನಿರೀಕ್ಷಾ ಜಿ. ಮತ್ತು ಕುಮಾರಿ ಸಿ.ಸಿ. ಹಾಸಿನಿ ಅವರು ಜಂಟಿಯಾಗಿ ಪ್ರಸ್ತುತಪಡಿಸುವ ವೀಣಾ ವಾದನವು ಸಂಜೆಯ ಸಂಗೀತ ಸಂಭ್ರಮಕ್ಕೆ ನಾದಮಾಧುರ್ಯವನ್ನು ತುಂಬಲಿದೆ.

image (37)

'ಜಗದೀಶ್ವರ' ಒಡಿಸ್ಸಿ ನೃತ್ಯ ವೈಭವ: ನೃತ್ಯಗುರು ಶೃಂಗಾರಮಣಿ ದೇಬಾಶಿಶ್ ಪಟ್ನಾಯಕ್ ಅವರ ಶಿಷ್ಯೆ ಕುಮಾರಿ ಅನಯಾ ಪತಿ(Kumari Anaya Pati) ಅವರು 'ಜಗದೀಶ್ವರ: ದ ಡ್ಯಾನ್ಸ್ ಆಫ್ ದ ಡಿವೈನ್' ಎಂಬ ಪರಿಕಲ್ಪನೆಯಾಧಾರಿತ ವಿಶೇಷ ಒಡಿಸ್ಸಿ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ.

ಶಾಸ್ತ್ರೀಯ ಕಲೆಗಳನ್ನು ಸಮುದಾಯದ ನಡುವೆ ಜೀವಂತವಾಗಿಡುವ ಹಾಗೂ ಯುವ ಪ್ರತಿಭೆ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಸಾಂಸ್ಕೃತಿಕ ಸಂಜೆಗೆ ಸಂಗೀತ ಮತ್ತು ನೃತ್ಯಾಸಕ್ತರಿಗೆ ಮುಕ್ತ ಸ್ವಾಗತವಿದೆ.