ಆಫ್ಲೈನ್ ರೀಟೇಲ್ ವ್ಯಾಪಾರಿಗಳ ಫೋನ್ಪೇನ ಪಿನ್ಕೋಡ್ ಸಬಲೀಕರಣ
ಸೀಮಿತ ವ್ಯಾಪ್ತಿ, ಡೆಲಿವರಿ ಅಸಮರ್ಥತೆ ಮತ್ತು ಬೆಲೆ ಒತ್ತಡದಂತಹ ಪ್ರಮುಖ ಸವಾಲುಗಳನ್ನು ಪರಿಹರಿಸಲು ಪಿನ್ಕೋಡ್ ಆಫ್ಲೈನ್ ರೀಟೇಲ್ ವ್ಯಾಪಾರಿಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸು ತ್ತದೆ. ಪಿನ್ಕೋಡ್ ಡೇಟಾ-ಆಧರಿತ ಒಳನೋಟಗಳನ್ನು ಬಳಸಿಕೊಂಡು ಚಿಲ್ಲರೆ ವ್ಯಾಪಾರಿಗಳು ನಿಜವಾದ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ


ಬೆಂಗಳೂರು: ಫೋನ್ಪೇನ ಹೈಪರ್ಲೋಕಲ್ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್, ಪಿನ್ಕೋಡ್, ಬೆಂಗಳೂರು, ಪುಣೆ, ದೆಹಲಿ NCR, ಹೈದರಾಬಾದ್, ಮುಂಬೈ ಮತ್ತು ವಾರಣಾಸಿಯಾದ್ಯಂತ 1,000 ಕ್ಕೂ ಹೆಚ್ಚು ಸ್ಥಳೀಯ ಆಫ್ಲೈನ್ ಸ್ಟೋರ್ಗಳನ್ನು ಡಿಜಿಟಲ್ಗೆ ಬದಲಾಯಿಸಿ ಸಬಲೀಕರಣಗೊಳಿಸಿದೆ. ಪಿನ್ಕೋಡ್ ತಂತ್ರಜ್ಞಾನ, ಕಾರ್ಯಾಚರಣೆಯ ಪರಿಣತಿ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಅನ್ನು ಸಂಯೋಜಿಸುವ ಮೂಲಕ ಆಫ್ಲೈನ್ ಚಿಲ್ಲರೆ ವ್ಯಾಪಾರಿಗಳು ಭಾರತದ ಬಿರುಸಿನಿಂದ ಬದಲಾಗು ತ್ತಿರುವ ರೀಟೇಲ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯಲು ಮತ್ತು ಪರಿಣಾಮಕಾರಿ ಯಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ. ಅಲ್ಲದೇ ಅವರ ಸ್ಥಳೀಯ ಗುರುತನ್ನು ಉಳಿಸುತ್ತದೆ.
ಸೀಮಿತ ವ್ಯಾಪ್ತಿ, ಡೆಲಿವರಿ ಅಸಮರ್ಥತೆ ಮತ್ತು ಬೆಲೆ ಒತ್ತಡದಂತಹ ಪ್ರಮುಖ ಸವಾಲುಗಳನ್ನು ಪರಿಹರಿಸಲು ಪಿನ್ಕೋಡ್ ಆಫ್ಲೈನ್ ರೀಟೇಲ್ ವ್ಯಾಪಾರಿಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತದೆ. ಪಿನ್ಕೋಡ್ ಡೇಟಾ-ಆಧರಿತ ಒಳನೋಟಗಳನ್ನು ಬಳಸಿಕೊಂಡು ಚಿಲ್ಲರೆ ವ್ಯಾಪಾರಿಗಳು ನಿಜವಾದ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಸ್ತುತತೆ, ವೇಗದ ಚಲನೆ ಮತ್ತು ಉತ್ತಮ ಲಾಭವನ್ನು ಖಚಿತಪಡಿಸುತ್ತದೆ. ಈ ವಿಧಾನದಿಂದ ಸ್ಥಳೀಯ ಸ್ಟೋರ್ಗಳು ಆನ್ಲೈನ್ ಉಪಸ್ಥಿತಿ ಯನ್ನು ನಿರ್ಮಿಸಬಹುದು.
ಇದನ್ನೂ ಓದಿ: Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !
ಅಲ್ಲದೇ, ಅವುಗಳ ಪ್ರಮುಖ ಆಫ್ಲೈನ್ ಕಾರ್ಯಾಚರಣೆಗಳನ್ನು ಬಲಪಡಿಸಲು, ಸುಸ್ಥಿರ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ದೊಡ್ಡ ಆನ್ಲೈನ್ ಬ್ರ್ಯಾಂಡ್ಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ. "ಪಿನ್ಕೋಡ್ ಕೇವಲ ಸ್ಟೋರ್ಗಳನ್ನು ಡಿಜಿಟಲೀಕರಣಗೊಳಿಸುವುದಲ್ಲ - ನಾವು ಭವಿಷ್ಯಕ್ಕೆ ಸಿದ್ಧವಾದ ವ್ಯವಹಾರಗಳನ್ನು ನಿರ್ಮಿಸುತ್ತಿದ್ದೇವೆ" ಎಂದು ಪಿನ್ಕೋಡ್ನ ಸಿಇಒ ವಿವೇಕ್ ಲೋಹ್ಚೆಬ್ ಹೇಳಿದರು.
“ಪ್ರತಿಯೊಬ್ಬ ಆಫ್ಲೈನ್ ಮಾರಾಟಗಾರನ ಬೆಳವಣಿಗೆಗೆ ಸಹಾಯ ಮಾಡುವ ಒಡನಾಡಿಯಾಗುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಆನ್ಲೈನ್ನಲ್ಲಿ ಸ್ಟೋರ್ಗಳನ್ನು ಪಟ್ಟಿ ಮಾಡುವುದಷ್ಟೇ ಅಲ್ಲದೇ, ಅದಕ್ಕೂ ಮೀರಿ ಅವರು ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ನಿರ್ಮಿಸಿಕೊಡುತ್ತೇವೆ. ಈ ಭರವಸೆಯನ್ನು ಈಡೇರಿಸಲು, ನಾವು ನಮ್ಮ ಸ್ಮಾರ್ಟ್ ಸ್ಟೋರ್ ಪ್ರೋಗ್ರಾಂ ಅನ್ನು ಅಭಿವೃದ್ಧಿಪಡಿಸಿದ್ದೇವೆ.
ಇದು ನಮ್ಮ ಆಫ್ಲೈನ್ ರೀಟೇಲ್ ಪಾಲುದಾರರನ್ನು ಅವರು ಅಭಿವೃದ್ಧಿ ಹೊಂದಲು ಅಗತ್ಯವಿರುವ ತಂತ್ರಜ್ಞಾನ, ಕಾರ್ಯಾಚರಣೆಯ ಜ್ಞಾನ, ಗ್ರಾಹಕರ ಆ್ಯಕ್ಸೆಸ್ ಮತ್ತು ಲಾಜಿಸ್ಟಿಕ್ಸ್ನೊಂದಿಗೆ ಸಜ್ಜುಗೊಳಿಸುತ್ತದೆ. ನಾವು ಆಫ್ಲೈನ್ ರೀಟೇಲ್ ವ್ಯಾಪಾರಿಗಳಿಗೆ ಸಂಪೂರ್ಣ ಸ್ಥಳೀಯ ಮಾರುಕಟ್ಟೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಹಾಯ ಮಾಡುತ್ತೇವೆ. ದಶಕಗಳಿಂದ ಅವರು ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೇ, ಅವರು ನಿರೀಕ್ಷಿಸುವ ವೇಗ ಮತ್ತು ಆಯ್ಕೆಯನ್ನು ಹೊಂದಿಸುತ್ತಿದ್ಧೇವೆ” ಎಂದು ಹೇಳಿದರು.
ಪಿನ್ಕೋಡ್ನ ಸ್ಮಾರ್ಟ್ ಸ್ಟೋರ್ ಪ್ರೋಗ್ರಾಂ ಆಫ್ಲೈನ್ ರೀಟೇಲ್ ವ್ಯಾಪಾರಿಗಳಿಗೆ ಈ ಕೆಳಗಿನ ಸೌಕರ್ಯಗಳನ್ನು ಒದಗಿಸುತ್ತದೆ: ● ERP ಮತ್ತು POS ವ್ಯವಸ್ಥೆಯ ಸಂಯೋಜನೆಯೊಂದಿಗೆ ಇಂಟೆಲಿಜೆಂಟ್ ಸ್ಟಾಕ್ ಮ್ಯಾನೇಜ್ಮೆಂಟ್ ಪರಿಕರಗಳು. ● ಸ್ಟೋರ್ ವಿನ್ಯಾಸವನ್ನು ಸುಧಾರಿಸಲು ಮತ್ತು ಆರ್ಡರ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬೆಂಬಲ. ● 99% ಕ್ಕಿಂತ ಹೆಚ್ಚಿನ ಆರ್ಡರ್ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವ ಮೀಸಲು ಡೆಲಿವರಿ ಮೂಲಸೌಕರ್ಯ. ● ಆನ್ಲೈನ್ ಮತ್ತು ಆಫ್ಲೈನ್ ಮಾರಾಟ ಎರಡನ್ನೂ ಬೆಳೆಸಲು ಮಾರ್ಕೆಟಿಂಗ್ ಮತ್ತು ಬೇಡಿಕೆ ಉತ್ಪಾದನೆಯನ್ನು ಬೆಂಬಲಿಸುತ್ತದೆ. ● ಉತ್ಪನ್ನ ಪಟ್ಟಿಗಳ ತ್ವರಿತ ಮತ್ತು ಸರಳೀಕೃತ ಡಿಜಿಟಲೀಕರಣಕ್ಕಾಗಿ AI-ಚಾಲಿತ ಕೆಟಲಾಗ್. ಪಿನ್ಕೋಡ್ನೊಂದಿಗಿನ ಡಿಜಿಟಲೀಕರಣದ ಪ್ರಯಾಣದ ಬಗ್ಗೆ ನಮ್ಮ ಕೆಲವು ವ್ಯಾಪಾರಿ ಪಾಲುದಾರರ ಪ್ರತಿಕ್ರಿಯೆ ಇಲ್ಲಿದೆ. "ಪಿನ್ಕೋಡ್ಗೆ ಸೇರಿದ ನಂತರ, ನನ್ನ ವ್ಯವಹಾರದ 75% ಈಗ ಆನ್ಲೈನ್ ಆರ್ಡರ್ಗಳ ಮೂಲಕ ಬರುತ್ತದೆ.
ಸಮಯಕ್ಕೆ ಸರಿಯಾಗಿ ಡೆಲಿವರಿ ಆಗುತ್ತದೆ. ಇದರಿಂದ ಗ್ರಾಹಕರು ಸಂತೋಷವಾಗಿದ್ದಾರೆ ಮತ್ತು ಮರುದಿನವೇ ಸೆಟಲ್ಮೆಂಟ್ ಆಗುವುದರಿಂದ ಕ್ಯಾಶ್ ಫ್ಲೋ ನಿರ್ವಹಿಸುವುದು ಸುಲಭವಾಗಿದೆ. ಇದು ನನ್ನ ಸ್ಟೋರ್ಗೆ ಒಂದು ಪ್ರಮುಖ ಬದಲಾವಣೆಯಾಗಿದೆ. ” — ಶೇರ್ ಖಾನ್, ಮಾಲೀಕರು, ಗ್ರೀನ್ ಗಾರ್ಡನ್ ಶಾಪ್, ಗ್ರೇಟರ್ ನೋಯ್ಡಾ "ಸಣ್ಣ ಹಳ್ಳಿಯಿಂದ ಬಂದ ನನಗೆ ಆನ್ಲೈನ್ ಪ್ಲಾಟ್ಫಾರ್ಮ್ಗ ಳಲ್ಲಿ ಯಾವುದೇ ಅನುಭವವಿರಲಿಲ್ಲ, ಆದರೆ ಪಿನ್ಕೋಡ್ ಎಲ್ಲವನ್ನೂ ಸುಲಭಗೊಳಿಸಿತು.
ಸೇರಿದಾಗಿನಿಂದ, ನನ್ನ ವಾರದ ದಿನಗಳ ಮಾರಾಟವು 30–35% ರಷ್ಟು ಮತ್ತು ವಾರಾಂತ್ಯದ ಮಾರಾಟವು 50% ಕ್ಕಿಂತ ಹೆಚ್ಚಾಗಿದೆ. ಆನ್ಬೋರ್ಡಿಂಗ್ ಸುಗಮವಾಗಿತ್ತು, ನಿರಂತರ ಬೆಂಬಲ ದೊರೆಯುತ್ತದೆ ಮತ್ತು ದೊರೆತ ಫಲಿತಾಂಶಗಳೇ ಎಲ್ಲ ಯಶಸ್ಸನ್ನು ಹೇಳುತ್ತವೆ ” — ಮಾಹಿ ಮೆಹ್ವಾಡಾ, ಮಾಲೀಕರು, ಬಾಲಾಜಿ ಮಾರ್ಟ್, ಪುಣೆ. “ಗ್ರಾಹಕರ ನಂಬಿಕೆಯ ಮೇಲೆ ನಿರ್ಮಿಸಲಾದ ವ್ಯವಹಾರವಾಗಿ, ಆನ್ಲೈನ್ನಲ್ಲಿ ವ್ಯಾಪಾರ ಮಾಡುವುದು ಸುಗಮವಾಗಿರಬೇಕು - ಮತ್ತು ಪಿನ್ಕೋಡ್ ಅದನ್ನು ಸಾಧ್ಯವಾಗಿಸಿತು.
ಈ ಪ್ಲಾಟ್ಫಾರ್ಮ್ನ ವೇಗದ ಡೆಲಿವರಿ ವ್ಯವಸ್ಥೆ ಮತ್ತು ಸ್ಥಳೀಯ ಆರ್ಡರ್ ರೂಟಿಂಗ್ ಸಹಾಯದಿಂದ ಸಾಕುಪ್ರಾಣಿಗಳನ್ನು ಪೋಷಿಸುವ ಹೆಚ್ಚಿನವರಿಗೆ ವೇಗವಾಗಿ ಸೇವೆ ಸಲ್ಲಿಸಲು ನಮಗೆ ಸಾಧ್ಯವಾಯಿತು. ಆನ್ಬೋರ್ಡ್ ಆದಾಗಿನಿಂದ, ನಮ್ಮ ಗ್ರಾಹಕರ ನೆಲೆ ಸಾಕಷ್ಟು ಬೆಳೆದಿದೆ ಮತ್ತು ಈಗ ಆನ್ಲೈನ್ ಆರ್ಡರ್ಗಳು ನಮ್ಮ ಮಾಸಿಕ ಮಾರಾಟದ ಬಹುಪಾಲನ್ನು ಹೊಂದಿವೆ. ” — ಮಂಜುನಾಥ್, ಮ್ಯಾನೇಜರ್, ಓ ಮೈ ಡಾಗ್, ಬೆಂಗಳೂರು ಪಿನ್ಕೋಡ್ ಬೆಂಗಳೂರಿನ ದಿನಸಿ, ಸ್ಟೇಷನರಿ, ಮಾಂಸ ಮತ್ತು ಮೀನು, ಔಷಧ, ಸಾಕುಪ್ರಾಣಿ ಆಹಾರ ಮತ್ತು ಸರಬರಾಜುಗಳು ಮತ್ತು ಇನ್ನೂ ಹೆಚ್ಚಿನ ಕೆಟಗರಿಗಳ ಆಫ್ಲೈನ್ ರೀಟೇಲ್ ವ್ಯಾಪಾರಿಗಳನ್ನು ತನ್ನ ಬೆಳೆಯುತ್ತಿರುವ ನೆಟ್ವರ್ಕ್ಗೆ ಸೇರಲು ಆಹ್ವಾನಿಸುತ್ತದೆ. ಪಿನ್ಕೋಡ್ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ರೀಟೇಲ್ ವ್ಯಾಪಾರಿಗಳು ಡಿಜಿಟಲ್ ಸ್ಟೋರ್ಫ್ರಂಟ್ಗಳು, ಸ್ಮಾರ್ಟ್ ಇನ್ವೆಂಟರಿ ಸೊಲ್ಯೂಶನ್ ಮತ್ತು ಗ್ರಾಹಕರ ಮನೆ ಬಾಗಿಲಿಗೆ ವಿಶ್ವಾಸಾರ್ಹ ಡೆಲಿವರಿಗಾಗಿ ಆ್ಯಕ್ಸೆಸ್ ಪಡೆಯುತ್ತಾರೆ.
ಇದು ಅವರ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ವಾಣಿಜ್ಯ ರಚನೆಯಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ಆಸಕ್ತ ಸ್ಟೋರ್ ಮಾಲೀಕರು ಪಿನ್ಕೋಡ್ ನೆಟ್ವರ್ಕ್ಗೆ ಸೇರಲು sell@pincode.com ಗೆ ಇಮೇಲ್ ಮಾಡಬಹುದು. ಪಿನ್ಕೋಡ್ ಆ್ಯಪ್ ಬಗ್ಗೆ ಫೋನ್ಪೇನ ಹೈಪರ್ಲೋಕಲ್ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಆದ ಪಿನ್ಕೋಡ್ ಆ್ಯಪ್, ಕ್ವಿಕ್ ಕಾಮರ್ಸ್ಗೆ ಕ್ರಾಂತಿಕಾರಿ ಹೊಸ ವಿಧಾನವನ್ನು ನೀಡುತ್ತದೆ. ಪಿನ್ಕೋಡ್ ಆ್ಯಪ್ ಗ್ರಾಹಕರಿಗೆ ವೇಗ, ವಿಶ್ವಾಸಾರ್ಹತೆ ಮತ್ತು ಆಯ್ಕೆಯನ್ನು ನೀಡುವು ದರ ಮೇಲೆ ಕೇಂದ್ರೀಕರಿಸುತ್ತದೆ.
ಸ್ಥಳೀಯ ಮಾರಾಟಗಾರರನ್ನು ಡಿಜಿಟಲ್ ಕಾಮರ್ಸ್ ಬೆಳವಣಿಗೆಯ ಕೇಂದ್ರಭಾಗವಾಗಿಸುತ್ತದೆ. ಪಿನ್ಕೋಡ್ ಆ್ಯಪ್ನೊಂದಿಗೆ, ಪ್ರತಿಯೊಬ್ಬ ಭಾರತೀಯ ಶಾಪ್ಕೀಪರ್, ಅವರು ಯಾವುದೇ ಸ್ಥಳದಲ್ಲಿ ದ್ದರೂ, ಕ್ವಿಕ್ ಕಾಮರ್ಸ್ನ ಹೆಚ್ಚಿನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಡಿಜಿಟಲ್ ರೂಪದಲ್ಲಿ ಸಬಲರಾಗುತ್ತಾರೆ. ಬೆಳವಣಿಗೆಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುವುದಲ್ಲದೇ ದೊಡ್ಡ ಪ್ರಮಾಣದಲ್ಲಿ ಹೊಸತನಕ್ಕೆ ಚಾಲನೆ ನೀಡುತ್ತಾರೆ.