Indian Railway Department: ಪ್ರಯಾಣಿಕರಿಗೆ ಗುಡ್‌ನ್ಯೂಸ್! ಬೆಂಗಳೂರು ಸೇರಿ 7 ರೈಲ್ವೇ ಸ್ಟೇಷನ್‌ಗಳಲ್ಲಿ AI ತಂತ್ರಜ್ಞಾನ ಅಳವಡಿಕೆ
AI-based facial identification: ಭಾರತೀಯ ರೈಲ್ವೆ ಇಲಾಖೆಯು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ರೈಲು ನಿಲ್ದಾಣಗಳಲ್ಲಿ ಅಪರಾಧ ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ. ಬೆಂಗಳೂರು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ನವದೆಹಲಿ, ಚೆನ್ನೈ, ಹೌರಾ, ಅಹಮದಾಬಾದ್, ಮತ್ತು ಪುಣೆ ಸೇರಿ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ AI-ಚಾಲಿತ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು (Indian Railway Department) ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ರೈಲು ನಿಲ್ದಾಣಗಳಲ್ಲಿ (Railway station) ಅಪರಾಧ ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ. ಬೆಂಗಳೂರು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT), ನವದೆಹಲಿ, ಚೆನ್ನೈ, ಹೌರಾ, ಅಹಮದಾಬಾದ್, ಮತ್ತು ಪುಣೆ ಸೇರಿ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ AI-ಚಾಲಿತ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ತಿಳಿಸಿರುವಂತೆ, ಈ ತಂತ್ರಜ್ಞಾನವನ್ನು 2 ಮಿಲಿಯನ್‌ಗೂ ಹೆಚ್ಚು ಪ್ರೊಫೈಲ್‌ಗಳನ್ನು ಒಳಗೊಂಡ ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಸಂಯೋಜನೆ ಮಾಡಲಾಗುವುದು. ಇದರಿಂದ ಅಪರಾಧ ಪತ್ತೆಯಲ್ಲಿ ಹೆಚ್ಚಿನ ದಕ್ಷತೆ ಸಾಧ್ಯವಾಗಲಿದೆ. ದೆಹಲಿ, ಬೆಂಗಳೂರು, ಮತ್ತು ಹೈದರಾಬಾದ್‌ನಂತಹ ಮಹಾನಗರಗಳಲ್ಲಿ AI ಅನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಡ್ರೋನ್ ಕಣ್ಗಾವಲು, ಸ್ಮಾರ್ಟ್ ಬೆಳಕಿನ ವ್ಯವಸ್ಥೆಗಳು ಮತ್ತು ಸುಧಾರಿತ AI ಮೂಲಕ ರೈಲು ನಿಲ್ದಾಣಗಳಲ್ಲಿ ಸುರಕ್ಷತೆ ನೀಡಲಾಗುತ್ತದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ದಿನಕ್ಕೆ 3 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ನವದೆಹಲಿ ನಿಲ್ದಾಣವು ದಿನಕ್ಕೆ 5 ಲಕ್ಷ ಜನರ ಸಂಚಾರಕ್ಕೆ ಸಾಕ್ಷಿಯಾಗಿದೆ. ಇಂತಹ ಕೇಂದ್ರಗಳಲ್ಲಿ ಸುರಕ್ಷತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.
ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ, ಇವು ಲೈವ್ ಚಿತ್ರಗಳನ್ನು ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಕ್ರಾಸ್-ರೆಫರೆನ್ಸ್ ಮಾಡಿ, ಲೈಂಗಿಕ ಅಪರಾಧಿಗಳನ್ನು ಗುರುತಿಸಬಹುದು. ಸ್ಪಷ್ಟ ಮುಖ ಗುರುತಿಸುವಿಕೆಗಾಗಿ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗಲಿದೆ. ಕಾಣೆಯಾದವರ ಪತ್ತೆ ಸೇರಿದಂತೆ, ಕೊಲೆ, ದರೋಡೆ, ಮತ್ತು ಇತರ ಅಪರಾಧಗಳನ್ನು ತಡೆಯಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕ್ರಮವು ರೈಲ್ವೆ ಪ್ರಯಾಣಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲಿದೆ.
ಈ ಸುದ್ದಿಯನ್ನು ಓದಿ; Viral Video: ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ.. ನಟಿ ತನುಶ್ರೀ ದತ್ತಾ ಅಳಲು
ಈಗಾಗಲೇ ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ತಂತ್ರಜ್ಞಾನದಲ್ಲಿ ಶಂಕಿತರ ಮುಖಚಹರೆಗಳು ಲಭ್ಯವಿವೆ. ಈ ತಂತ್ರಜ್ಞಾನದ ಜತೆ ‘ಫೇಸ್ ರೆಕಗ್ನಿಷನ್ ಸಿಸ್ಟಂ’ಅನ್ನು ಸಂಯೋಜಿಸುವುದು ರೈಲ್ವೆಯಲ್ಲಿನ ಭದ್ರತೆ ನೋಡಿಕೊಳ್ಳುವ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಉದ್ದೇಶವಾಗಿದೆ. ಇದರಿಂದ ಕ್ರಿಮಿನಲ್‌ಗಳೇನಾದರೂ ತಲೆಮರೆಸಿಕೊಂಡು ರೈಲ್ವೆ ನಿಲ್ದಾಣಗಳಲ್ಲಿ ಓಡಾಡುತ್ತಿದ್ದರೆ, ಆ ಕ್ಷಣದಲ್ಲೇ ಅವರ ಗುರುತನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಕಾರದೊಂದಿಗೆ ‘ಫೇಸ್ ರಿಕಗ್ನಿಷನ್ ಸಿಸ್ಟಂ’ ಗುರುತಿಸಿ ಪೊಲೀಸರಿಗೆ ಸಂದೇಶ ರವಾನಿಸುತ್ತದೆ. ಆಗ ಇಂಥವರನ್ನು ಸ್ಥಳದಲ್ಲೇ ಬಂಧಿಸಲು ಸಾಧ್ಯವಾಗುತ್ತದೆ. ಇಲ್ಲಿ ಈ ವ್ಯವಸ್ಥೆಯು ಯಶಸ್ವಿಯಾಗಿ ಕೆಲಸ ಮಾಡಿದರೆ ದೇಶದ ಇತರ ರೈಲು ನಿಲ್ದಾಣಗಳಲ್ಲೂ ಅಳವಡಿಸುವ ಆಲೋಚನೆಯನ್ನು ರೈಲ್ವೆ ಇಲಾಖೆ ಹೊಂದಿದೆ.