Bengaluru Power Cut: ಡಿ.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮತ್ತಿಕೆರೆ ಸಬ್‌ಸ್ಟೇಷನ್ ಹಾಗೂ ಬ್ಯಾಟರಾಯನಪುರ ಸಬ್‌ಸ್ಟೇಷನ್‌ನಲ್ಲಿ ತುರ್ತು ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಕೂಡ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ “66/11ಕೆ.ವಿ ರೆಮಕೊ ಸ್ಟೇಷನ್” ನಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ. 30ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು: “66/11ಕೆ.ವಿ ರೆಮಕೊ ಸ್ಟೇಷನ್” ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಡಿ. 30ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
ಮೈಸೂರ್ ರಸ್ತೆ 7ನೇ ಕ್ರಾಸ್, ಶಾಮಣ್ಣಾ ಗಾರ್ಡನ್, ಮಂಜುನಾಥನಗರ, ಪೈಪ್ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ಅನಂತ ರಾಮಯ್ಯ ಕಾಂಪೌಂಡ್, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರ, 6ನೇ ಕ್ರಾಸ್ ಮೈಸೂರಿನ ರಸ್ತೆ, 4ನೇ ಕ್ರಾಸ್ ಮೈಸೂರಿನ ರಸ್ತೆ, ಓಲ್ಡ್ ಗುಡ್ಡದಹಳ್ಳಿ, ಮೈಸೂರಿನ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಾಳೆಯೂ ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು, ಡಿ.28: 66/11 kV ಮತ್ತಿಕೆರೆ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ-6 ಉಪ ವಿಭಾಗದಲ್ಲಿ ಹಲವು ಪ್ರದೇಶಗಳಲ್ಲಿ ಡಿ.29ರಂದು ಬೆಳಗ್ಗೆ 10ರಿ೦ದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್.ಕೆ. ಉದ್ಯಾನ, ಸಂಜೀವಪ್ಪ ಕಾಲೋನಿ, ಎಂಎಲ್ಎ ಲೇಔಟ್, ನೇತಾಜಿ ನಗರ, ಪೈಪ್ ಲೈನ್ ರಸ್ತೆ, ಮತ್ತಿಕೆರೆ, ಮೋಹನ್ ಕುಮಾರ್ ನಗರ, ಜೆಪಿ ಪಾರ್ಕ್, ಅಕ್ಕಿಯಪ್ಪ ಉದ್ಯಾನ, ಬಿಕೆ ನಗರ, ಎಲ್ಐಸಿ ಕಾಲೋನಿ, ಪಂಪ ನಗರ, ಮತ್ತಿಕೆರೆ, 1ನೇ ಮುಖ್ಯ ರಸ್ತೆ ಯಶವಂತಪುರ, ಎಚ್ಎಂಟಿ ಲೇಔಟ್, ಎಲ್ಸಿಆರ್ ಶಾಲಾ ರಸ್ತೆ, ಗೋಕುಲ 1ನೇ ಹಂತ, ಗುರುಮೂರ್ತಿ ರೆಡ್ಡಿ ಕಾಲೋನಿ, ಕೆಎನ್ ವಿಸ್ತರಣೆ, ಮತ್ತಿಕೆರೆ, ಎಸ್ಬಿಎಂ ಕಾಲೋನಿ, ಬೃಂದಾವನ ನಗರ, ಎಚ್ಎಂಟಿ ಮುಖ್ಯ ರಸ್ತೆ, ಎಂಆರ್ಜೆ ಕಾಲೋನಿ, ಸಂಜೀವಪ್ಪ ಕಾಲೋನಿ, 3ನೇ ಮುಖ್ಯ ರಸ್ತೆ, ಮತ್ತಿಕೆರೆ 2ನೇ ಮುಖ್ಯ ರಸ್ತೆಯಿಂದ 10ನೇ ಮುಖ್ಯ ರಸ್ತೆ, ವಿಆರ್ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಜೆಪಿ ಪಾರ್ಕ್, ಎಸ್ಬಿಎಂ ಕಾಲೋನಿ, ಬೃಂದಾವನ ನಗರ, ಎಚ್ಎಂಟಿ ಲೇಔಟ್, ಮತ್ತಿಕೆರೆ”. ಮತ್ತು ಮೇಲಿನ ಸೈದ್ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವಿದ್ಯುತ್ ವ್ಯತ್ಯಯ ಉಂಟಾಗಿಲಿದೆ.
ಬ್ಯಾಟರಾಯನಪುರ ಸೇರಿ ವಿವಿಧೆಡೆ ಸೋಮವಾರ ಕರೆಂಟ್ ಇರಲ್ಲ
ಬೆಂಗಳೂರು: 66/11 kV ಬ್ಯಾಟರಾಯನಪುರ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-8 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 29.12.2025 ರಂದು ಬೆಳಗ್ಗೆ 11ರಿ೦ದ ಮಧ್ಯಾಹ್ನ 4ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್; ಪ್ರವೇಶಕ್ಕೆ ಜಿಬಿಎ ನಿರ್ಬಂಧ
L&T ಅಪಾರ್ಟ್‌ಮೆಂಟ್, ಯಶೋಧನಗರ, ಜಕ್ಕೂರು ಪ್ಲಾಂಟೇಶನ್, L&T ಅಪಾರ್ಟ್‌ಮೆಂಟ್, ಸೆಂಚುರಿ ಅಪಾರ್ಟ್‌ಮೆಂಟ್ ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂವಿ ಲೇಔಟ್, ತಿ೦ಡ್ಲು ವಿಲೇಜ್, ಸಪ್ತಗಿರಿ ಲೇಔಟ್, ಜ್ಞಾನೇಶ್ವರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ವೃತ್ತ, ಎಲ್ & ಜೆ ಎನ್ಕ್ಲೇವ್, ಬಸವ ಸಮಿತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.