ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಶಾಂತಿ ಕುಟೀರ ಕಾರ್ಯಕ್ರಮ; ಯೋಗದ ಕುರಿತು ಮಾತನಾಡುತ್ತಾ, ಡಾ. ರಾಜ್‌ಕುಮಾರ್‌ ಸ್ಮರಿಸಿದ ಮೋದಿ

Modi In Bengaluru: ಬೆಂಗಳೂರಿನ ಜಿಗಣಿಯಲ್ಲಿರುವ 'ಪ್ರಶಾಂತಿ ಕುಟೀರ'ದ (S-VYASA ವಿಶ್ವವಿದ್ಯಾಲಯ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಜಾಗತಿಕ ಪ್ರಭಾವ, ಆಧುನಿಕ ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯದ ಕುರಿತು ಮಾತನಾಡಿದ್ದಾರೆ.

ಡಾ. ರಾಜ್‌ಕುಮಾರ್‌ ಹಾಗೂ ಪ್ರಧಾನಿ ಮೋದಿ

ಬೆಂಗಳೂರು: ಜಿಗಣಿಯಲ್ಲಿರುವ 'ಪ್ರಶಾಂತಿ ಕುಟೀರ'ದ (S-VYASA ವಿಶ್ವವಿದ್ಯಾಲಯ) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಯೋಗದ ಜಾಗತಿಕ ಪ್ರಭಾವ, ಆಧುನಿಕ ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯದ ಕುರಿತು ಮಾತನಾಡಿದ್ದಾರೆ. ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿದ ಮೋದಿ, ಯೋಗವನ್ನು ಸಾಮಾಜಿಕವಾಗಿ ಪ್ರಸ್ತುತಪಡಿಸುವ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ವಿವರಿಸಿದರು.

ಕರ್ನಾಟಕದ ಈ ಪುಣ್ಯಭೂಮಿ ಯೋಗದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಹಲವಾರು ಯೋಗ ಜ್ಞಾನಿಗಳು ಜನ್ಮವೆತ್ತಿದ್ದಾರೆ. ಕಲಾ ಕ್ಷೇತ್ರದ ದಿಗ್ಗಜರು ಕೂಡ ಯೋಗವನ್ನು ಅತ್ಯಂತ ಗೌರವದಿಂದ ಆರಾಧಿಸಿದ್ದಾರೆ, ಅದಕ್ಕೆ ವರನಟ ಡಾ. ರಾಜ್‌ಕುಮಾರ್ ಅವರೇ ಜೀವಂತ ಸಾಕ್ಷಿ, ಎಂದು ಮೋದಿ ಸ್ಮರಿಸಿದರು. ಸಾಧಾರಣ ಯೋಗ ಕೇಂದ್ರವಾಗಿ ಆರಂಭವಾದ ಸಂಸ್ಥೆ ಇಂದು ಇಷ್ಟು ದೊಡ್ಡ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ನಿಮ್ಮೆಲ್ಲರ ಪ್ರೇರಣೆ ಮತ್ತು ಪರಿಶ್ರಮವೇ ಕಾರಣ ಎಂದು ಮೋದಿ ಹೇಳಿದ್ದಾರೆ.

ಹಿರಿಯ ಚಿಂತಕ ಹೆಚ್.ವಿ. ಶೇಷಾದ್ರಿ ಅವರ ಜನ್ಮದಿನಾಚರಣೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, "ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾಯಕದಲ್ಲಿ ಶೇಷಾದ್ರಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜನರನ್ನು ಒಳಗೊಳ್ಳುವುದು ಮತ್ತು ದೇಶದ ಸೇವೆ ಮಾಡುವುದೇ ಅವರ ಪರಮ ಧ್ಯೇಯವಾಗಿತ್ತು. ಅವರ ಕಾರ್ಯವೈಖರಿ ದೇಶ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದೆ, ಎಂದರು. ಮುಂದುವರಿದು ಮಾತನಾಡಿದ ಅವರು, "ಅಂದು ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಆಧ್ಯಾತ್ಮಿಕ ಹಾದಿಯಿಂದಲೇ ಇಂದು ಪ್ರಶಾಂತ ಕುಟೀರದಂತಹ ಹಲವಾರು ಶ್ರೇಷ್ಠ ಕೇಂದ್ರಗಳು ಸ್ಥಾಪನೆಯಾಗಿವೆ ಎಂದು ಮಾತನಾಡಿದರು.

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಉದ್ಘಾಟನೆ ಕರ್ನಾಟಕದ ಹೆಮ್ಮೆ; ಪ್ರಧಾನಿಗಳನ್ನು ಗೌರವಯುತವಾಗಿ ಸ್ವಾಗತಿಸುತ್ತೇವೆ ಎಂದ ಸಿಎಂ

ಸುವರ್ಣ ಮಹೋತ್ಸವದ ಅಂಗವಾಗಿ ಎಸ್-ವ್ಯಾಸ ವಿಶ್ವವಿದ್ಯಾಲಯದ ನೂತನ ಸುವರ್ಣ ಮಹೋತ್ಸವ ಆಡಳಿತ ಭವನಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದರ ಜೊತೆಗೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಎಸ್-ವ್ಯಾಸ ವಿಶ್ವವಿದ್ಯಾಲಯದ ತಿರುವನಂತಪುರಂ ಆಫ್-ಕ್ಯಾಂಪಸ್ (off-campus) ಅನ್ನು ಲೋಕಾರ್ಪಣೆಗೊಳಿಸಿದ್ದಾರೆ.

Vishakha Bhat Heggar

View all posts by this author