ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಲೆ ಏರಿಕೆ: ಡಬಲ್‌ ಶಾಕ್:‌ ಹಾಲಿನ ದರ 8 ರು. ಹೆಚ್ಛಳಕ್ಕೆ ಮನವಿ, 3 ರು. ಹೆಚ್ಚಳ?

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು, ಇದೀಗ ಮತ್ತೊಮ್ಮೆ ದರ ಏರಿಕೆಯ ಆಘಾತಕ್ಕೆ ಸಿದ್ಧರಾಗಬೇಕಿದೆ. ರಾಜ್ಯದಲ್ಲಿರುವ ವಿವಿಧ ಹಾಲು ಒಕ್ಕೂಟಗಳು ಹಾಲಿನ ಮಾರಾಟ ದರವನ್ನು 5 ರಿಂದ 10 ರು. ವರೆಗೆ ಏರಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿಟ್ಟಿವೆ. ಈಗಿರುವ ಅಂದಾಜಿನಂತೆ ಲೀಟರ್‌ಗೆ 2 ರಿಂದ 3 ರು. ಬೆಲೆಯೇರುವ ಸಾಧ್ಯತೆಯಿದೆ.

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು, ಇದೀಗ ಮತ್ತೊಮ್ಮೆ ದರ ಏರಿಕೆಯ ಆಘಾತಕ್ಕೆ ಸಿದ್ಧರಾಗಬೇಕಿದೆ. ರಾಜ್ಯದಲ್ಲಿರುವ ವಿವಿಧ ಹಾಲು ಒಕ್ಕೂಟ ಗಳು ಹಾಲಿನ ಮಾರಾಟ ದರವನ್ನು 5 ರಿಂದ 10 ರು. ವರೆಗೆ ಏರಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿಟ್ಟಿವೆ. ಈಗಿರುವ ಅಂದಾಜಿನಂತೆ ಲೀಟರ್‌ಗೆ 2 ರಿಂದ 3 ರು. ಬೆಲೆಯೇರುವ ಸಾಧ್ಯತೆಯಿದೆ.

ಇನ್ನು ರಾಜ್ಯ ಸರಕಾರ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2 ಸೆಸ್ ಹಾಕಲು ನಿರ್ಧರಿಸಿದೆ. ಇದು ಸೆ.30 ರಿಂದ ಜಾರಿಗೆ ಬರಲಿದೆ. ವಿಶೇಷ ಅಧಿವೇಶನದ ಸಂದರ್ಭದಲ್ಲಿ ಇಲ್ಲವೇ ಅನಂತರ ಹಾಲಿನ ದರ ಹೆಚ್ಚಳಕ್ಕೆ ಸರಕಾರ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: World Milk Day: 1 ಲಕ್ಷ 50 ಸಾವಿರ ಲೀಟರ್ ಹಾಲು ಉತ್ಪಾದನೆಯ ಶ್ರೇಯ ಶ್ರಮಜೀವಿ ಮಹಿಳೆಯರಿಗೆ ಸಲ್ಲಬೇಕು : ಊಲವಾಡಿ ಅಶ್ವತ್ಥನಾರಾಯಣ

ಹೆಚ್ಚಳ ಮಾಡುವ ಹಾಲಿನ ದರವನ್ನು ಉತ್ಪಾದಕರಿಗೆ ಲೀಟರ್‌ಗೆ 35 ರು.ಗೆ ರೈತರಿಂದ ಹಾಲು ಖರೀದಿಸುತ್ತಿದ್ದು, ಮಾರಾಟ ದರ 48 ರು. ಯಿದೆ. ಹಸುಗಳಿಗೆ ಸಂಬಂಧಿಸಿದ ವಸ್ತುಗಳ ಬೆಲೆಯೇರಿಕೆ ಯಾಗಿದೆ, ಹಾಲು ಉತ್ಪಾದಕರಿಗೆ ಹೆಚ್ಚು ಹಣ ಸಿಗುತ್ತಿಲ್ಲ. ಆದ್ದರಿಂದ ಬೆಲೆಯೇರಿಕೆ ಅನಿವಾರ್ಯ ಎಂದು ಉತ್ಪಾದಕ ಸಂಘಗಳು ವಾದಿಸಿವೆ.

ಸೆಸ್‌ಗೆ ವಿರೋಧ: ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ಮಾಲೀಕರು ಚಿಂತಿಸುತ್ತಿರುವಾಗಲೇ ರಾಜ್ಯ ಸರಕಾರ ಮತ್ತೊಂದು ತೆರಿಗೆ ಭಾರ ಹಾಕಿದೆ. ಪ್ರತಿ ಟಿಕೆಟ್ ದರದ ಮೇಲೆ ಶೇ.2 ಸೆಸ್ ಹಾಕಲು ನಿರ್ಧರಿಸಿದೆ. ಇದು ಚಿತ್ರಮಂದಿರ ಮಾಲೀಕರಿಗೆ ಹೊಡೆತ ನೀಡುವುದು ನಿಚ್ಚಳ. 2024ರಲ್ಲಿ ರಾಜ್ಯ ಸರಕಾರ ಮಂಡಿಸಿದ್ದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ವಿಧೇಯಕದಲ್ಲಿ ಹೇಳಿದಂತೆ ಕರ ಸಂಗ್ರಹಿಸಲು ಸರಕಾರ ತೀರ್ಮಾನಿಸಿದೆ. ನೂತನ ನಿಯಮ ಸೆ.30ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ವಿರೋಧಿಸಿದೆ.