ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Relocate 305 Bus Stops: 305 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಚಿಂತನೆ: ಸಂಚಾರ ದಟ್ಟಣೆ ನಿಯಂತ್ರಿಸಲು ಬಿಎಂಟಿ, ಜಿಬಿಎ, ಸಂಚಾರಿ ಪೊಲೀಸರಿಂದ ಮಹತ್ವದ ಕ್ರಮ

ನಗರದ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸುವ ಉದ್ದೇಶದಿಂದ ಬಿಎಂಟಿಸಿ, ಜಿಬಿಎ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲು ಮುಂದಾಗಿವೆ. ವಿಶೇಷವಾಗಿ ಸಿಗ್ನಲ್‌ಗಳ ಸಮೀಪ ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮತ್ತೊಂದು ಮಹತ್ವದ ಕ್ರಮಕ್ಕೆ ಸಿದ್ಧತೆ ನಡೆದಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳು, ಸಿಗ್ನಲ್ ಗಳು ಹಾಗೂ ಪ್ರಮುಖ ಜಂಕ್ಷನ್‌ಗಳ ಬಳಿಯಿರುವ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಸ್ತುತ ನಗರದಲ್ಲಿ 305 ಬಸ್ ನಿಲ್ದಾಣ ಗಳನ್ನು ಸುಮಾರು 50 ಮೀಟರ್ ದೂರಕ್ಕೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಟ್ರಾಫಿಕ್ ಪೊಲೀಸರು ಸಮಸ್ಯೆ ಉಂಟುಮಾಡುತ್ತಿರುವ ಬಸ್ ನಿಲ್ದಾಣಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ.

ಬಿಎಂಟಿ, ಜಿಬಿಎ ಹಾಗೂ ಸಂಚಾರಿ ಪೊಲೀಸರ ಜಂಟಿ ಕ್ರಮ: ನಗರದ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸುವ ಉದ್ದೇಶದಿಂದ ಬಿಎಂಟಿಸಿ, ಜಿಬಿಎ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲು ಮುಂದಾಗಿವೆ. ವಿಶೇಷವಾಗಿ ಸಿಗ್ನಲ್‌ಗಳ ಸಮೀಪ ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಬಸ್ಗಳು ನಿಲ್ಲುವ ಸಂದರ್ಭದಲ್ಲಿ ಹಿಂದೆ ಮತ್ತು ಮುಂದೆ ವಾಹನಗಳ ಸಾಲು ಉಂಟಾಗಿ ಸಂಚಾರದ ವೇಗ ಕುಂಠಿತವಾಗುತ್ತಿದೆ. ಇದರಿಂದ ಕೆಲವೆಡೆ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚುತ್ತಿದೆ ಎಂಬುದು ಸ್ಥಳಾಂತರದ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: BMTC reality check: ಬಿಎಂಟಿಸಿಯಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಬಸ್‌ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು

ವಯೋವೃದ್ಧರು, ಮಕ್ಕಳು, ಅಂಗವಿಕಲರಿಗೆ ಅನುಕೂಲವಾಗಬೇಕು: ಹೊಸ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ಸುಲಭ ವಾಗಿ ತಲುಪುವಂತಿರಬೇಕು. ವಿಶೇಷವಾಗಿ ವೃದ್ಧರು, ಮಕ್ಕಳು ಹಾಗೂ ಅಂಗವಿಕಲ ಪ್ರಯಾ ಣಿಕರಿಗೆ ನಿಲ್ದಾಣದ ಪ್ರವೇಶ ಸುಲಭವಾಗುವಂತೆ ವ್ಯವಸ್ಥೆ ಕಲ್ಪಿಸ ಬೇಕಾಗಿದೆ. ಬಸ್ ನಿಲ್ದಾಣ ಸ್ಥಳಾಂತರದಿಂದ ಪ್ರಯಾಣಿಕರು ಹೆಚ್ಚುವರಿ ದೂರ ನಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳಿಗೆ ಪ್ರಮುಖ ಸವಾಲಾಗಿದೆ.

50 ಮೀಟರ್ ದೂರ ಸ್ಥಳಾಂತರ ಈಗಿರುವ ಬಸ್ ನಿಲ್ದಾಣದಿಂದ ಸುಮಾರು 50 ಮೀಟರ್ ಅಂತರ ದಲ್ಲಿ ಹೊಸ ನಿಲ್ದಾಣ ನಿರ್ಮಿಸಿ ಬಸ್‌ಗಳನ್ನು ಅಲ್ಲಿ ನಿಲ್ಲಿಸುವ ಯೋಜನೆ ಇದೆ. ಇದರಿಂದ ಸಿಗ್ನಲ್ ಅಥವಾ ಜಂಕ್ಷನ್‌ನಲ್ಲಿನ ವಾಹನಗಳ ಸುಗಮ ಸಂಚಾ ರಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿದೆ. ಆದರೆ ಬಸ್ ನಿಲ್ದಾಣ ಸ್ಥಳಾಂತ ರಿಸುವ ಸಂದರ್ಭದಲ್ಲಿ ಕೇವಲ ವಾಹನ ಸಂಚಾರಕ್ಕೆ ಮಾತ್ರ ಆದ್ಯತೆ ನೀಡದೆ, ಪ್ರಯಾ ಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನೂ ಪರಿಗಣಿಸುವ ಅಗತ್ಯವಿದೆ.

ಪಾದಚಾರಿ, ರಸ್ತೆ ದಾಟುವ ವ್ಯವಸ್ಥೆ ಅಗತ್ಯ: ಪಾದಚಾರಿ, ರಸ್ತೆ ದಾಟುವ ವ್ಯವಸ್ಥೆ ಅಗತ್ಯ ಸ್ಥಳಾಂತರಗೊಳ್ಳುವ ಬಸ್ ನಿಲ್ದಾಣಗಳಲ್ಲಿ ಸಮರ್ಪಕ ಪಾದಚಾರಿ, ರಸ್ತೆ ದಾಟುವ ವ್ಯವಸ್ಥೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವ ಅಗತ್ಯವಿದೆ. ಪ್ರಯಾಣಿಕರು ರಸ್ತೆಬದಿಯಲ್ಲಿ ಅಪಾಯಕಾರಿ ಯಾಗಿ ನಿಲ್ಲದಂತೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಮುಂದಾಗಿರುವುದರಿಂದ, ಹೊಸ ನಿಲ್ದಾಣಗಳ ಆಯ್ಕೆ ಮಾಡುವಾಗ ವಾಹನ ಸಂಚಾರದ ಜೊತೆಗೆ ಸಾರ್ವಜನಿಕ ಸಾರಿಗೆ ಬಳಸುವ ಪ್ರಯಾಣಿಕರ ಅನುಕೂಲಕ್ಕೂ ಸಮಾನ ಆದ್ಯತೆ ನೀಡಬೇಕಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬಸ್ ನಿಲ್ದಾಣಗಳ ಮರುಸ್ಥಳಾಂತರಕ್ಕೆ ರೂಪಿಸಿರುವ ಯೋಜನೆ ಜಾರಿಗೆ ಬಂದರೆ, ಪ್ರಮುಖ ಜಂಕ್ಷನ್ ಗಳು ಮತ್ತು ಸಿಗ್ನಲ್‌ಗಳ ಬಳಿ ವಾಹನ ಸಂಚಾರ ಮತ್ತಷ್ಟು ಸುಗಮ ವಾಗುವ ನಿರೀಕ್ಷೆಯಿದೆ.