ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರು ಮೂಲದ ಮಹಿಳಾ ಉದ್ಯಮಿಗೆ ಕ್ವಿಕ್‌ ಕಾಮರ್ಸ್‌ನಿಂದ ಬೆಂಬಲ: ಎರಡನೇ ನಿರಾಗ್‌ ಫುಡ್ಸ್‌ ಘಟಕ ತೆರೆಯಲು ಬೆಂಬಲ

ನಿರಾಗ್‌ ಫುಡ್ಸ್‌ ಅಡಿಯಲ್ಲಿ, ಮಲ್ಲಿಗೆ ಇಡ್ಲಿ, ಪೆಸರಟ್ಟು ಮತ್ತು ಅದೈ ದೋಸೆಯಂತಹ ದಕ್ಷಿಣ ಭಾರತೀ ಯ ಶ್ರೇಷ್ಠ ಉತ್ಪನ್ನಗಳನ್ನು ನೀಡಲಾಗುತ್ತದೆ. ಬೆಂಗಳೂರು ಮೂಲದ ನಿರಾಗ್ ಫುಡ್ಸ್, ಮದ್ದೂರು ವಡ ಸೇರುದಂತೆ ಹಲವು ಖಾಧ್ಯಗಳಿಗೆ ಕ್ವಿಕ್‌ ಕಾಮರ್ಸ್‌ನಲ್ಲಿಯೂ ಉತ್ತಮ ಬೇಡಿಕೆ ಕಂಡುಬರುತ್ತಿದೆ.

ಬೆಂಗಳೂರು: ಮಹಿಳಾ ಸಬಲೀಕರಣಕ್ಕೆ ಆಧ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿಯೇ ಬೆಂಗಳೂರು ಮೂಲದ ಮಹಿಳಾ ಆಹಾರ ಉದ್ಯಮಿ ಸಾಹಿನಿರ್ಮಲ ಎಂಬುವವರು “ನಿರಾಗ್‌ ಫುಡ್ಸ್‌” ಶಾಖೆ ತೆರೆಯುವ ಮಲಕ ಕ್ವಿಕ್‌ ಕಾಮನ್ಸ್‌ ಕ್ಷೇತ್ರದಲ್ಲಿಯೂ ಯಶಸ್ಸು ಕಂಡಿದ್ದಾರೆ.

ಈ ಕುರಿತು ಮಾತನಾಡಿದ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಮಹಿಳೆಯರು ಸ್ವಂತ ಉದ್ಯೋಗ ನಿರ್ಮಿಸಿ ಯಶಸ್ಸು ಕಾಣುವುದು ಅತ್ಯಂತ ಕಷ್ಟಕರ, ಆದಾಗ್ಯೂ, ಎಲ್ಲರ ಬೆಂಬಲ ದೊಂದಿಗೆ ಇಂದು ನಿರಾಗ್‌ ಫುಡ್ಸ್‌ ತೆರೆಯುವ ಮೂಲಕ ಮಹಿಳೆಯರು ಸಹ ಸ್ವಂತ ಉದ್ಯೋಗದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬುದು ನಿರೂಪಿಸಲಾಗಿದೆ.

H 2

ನಿರಾಗ್‌ ಫುಡ್ಸ್‌ ಅಡಿಯಲ್ಲಿ, ಮಲ್ಲಿಗೆ ಇಡ್ಲಿ, ಪೆಸರಟ್ಟು ಮತ್ತು ಅದೈ ದೋಸೆಯಂತಹ ದಕ್ಷಿಣ ಭಾರತೀಯ ಶ್ರೇಷ್ಠ ಉತ್ಪನ್ನಗಳನ್ನು ನೀಡಲಾಗುತ್ತದೆ. ಬೆಂಗಳೂರು ಮೂಲದ ನಿರಾಗ್ ಫುಡ್ಸ್, ಮದ್ದೂರು ವಡ ಸೇರುದಂತೆ ಹಲವು ಖಾಧ್ಯಗಳಿಗೆ ಕ್ವಿಕ್‌ ಕಾಮರ್ಸ್‌ನಲ್ಲಿಯೂ ಉತ್ತಮ ಬೇಡಿಕೆ ಕಂಡು ಬರುತ್ತಿದೆ. ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಇದೀಗ ಎರಡು ಪೂರ್ಣ ಪ್ರಮಾಣದ ಅಡುಗೆ ಮನೆಯ ಘಟಕಗಳನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Rangaswamy Mookanahally Column: ವೇಳೆ ಬರೋವರೆಗೂ ತಾಳ್ಮೆಯಿಂದ ಕೆಲಸ ಮಾಡುತ್ತಿರಬೇಕು !

ಕಾರ್ಪೋರೇಟ್‌ ವೃತ್ತಿ ತ್ಯಜಿಸಿ, ಆಹಾರ ಉದ್ಯಮಕ್ಕೆ ಕಾಲಿಟ್ಟ ಬಳಿಕ ಸಾಕಷ್ಟು ಕಲಿಸಿದೆ. ಮಹಿಳೆ ಯರು ಸಹ ಸ್ವಂತ ಶಕ್ತಿಯ ಮೇಲೆ ಯಾವುದೇ ಉದ್ಯಮದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂಬು ದನ್ನು ಸಾಬೀತುಪಡಿಸಿದೆ.

ಕಳೆದ ನಾಲ್ಕು ವರ್ಷದಲ್ಲಿ ಕಂಪನಿಯು, ಕ್ವಿಕ್‌ ಕಾಮರ್ಸ್‌ ಗೆ ಪಾದಾರ್ಪಣೆ ಮಾಡಿದ್ದು, ಇನ್‌ ಸ್ಟಾಮಾರ್ಟ್‌ನಲ್ಲಿ ನಾಯ್ಸ್‌ನ ಉಪಸ್ಥಿತಿಯ ಮೂಲಕ, ಮಲ್ಲಿಗೆ ಇಡ್ಲಿ ಮತ್ತು ಪೆಸರಟ್ಟುಗಳಿಂದ ಹಿಡಿದು ಅಧಿಕೃತ ಸ್ಥಳೀಯ ಹಾಟ್ ಚಿಪ್ಸ್‌ಗಳವರೆಗೆ, ಬೆಂಗಳೂರಿನ ಆಚೆಗಿನ ಮನೆಗಳನ್ನು ತ್ವರಿತ ವಾಗಿ ತಲುಪಿದೆ.

ತನ್ನಂತಹ ಸಣ್ಣ ತಯಾರಕರು ಸಾಂಪ್ರದಾಯಿಕ ಪ್ರಕ್ರಿಯೆಗಳನ್ನು ಉಳಿಸಿಕೊಳ್ಳಲು ಮತ್ತು ಆಧುನಿಕ ಪ್ಯಾಕೇಜಿಂಗ್, ವ್ಯಾಪಕ ವಿತರಣೆ ಮತ್ತು ರಾಷ್ಟ್ರೀಯ ಗೋಚರತೆಯನ್ನು ಪಡೆಯಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ನಾಯ್ಸ್‌ಗೆ ಉದ್ಯಮಿ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಹೇಳಿದರು.

ಕುಮಾರಸ್ವಾಮಿ ಲೇಔಟ್‌ನ ಬಿಕಾಸಿಪುರ ಮುಖ್ಯ ರಸ್ತೆಯ 2ನೇ ಕ್ರಾಸ್‌ನಲ್ಲಿರುವ ಹೊಸ ಘಟಕವು, ಹೈಪರ್‌ಲೋಕಲ್ ಕಾರ್ಯಾಚರಣೆಯಿಂದ ವೇಗವಾಗಿ ವಿಸ್ತರಿಸುತ್ತಿರುವ, ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕ್ಲೀನ್-ಲೇಬಲ್ ಆಹಾರ ತಯಾರಕಕ್ಕೆ ಬ್ರ್ಯಾಂಡ್‌ನ ಪರಿವರ್ತನೆಯನ್ನು ಗುರುತಿಸು ತ್ತದೆ.