ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ತಂತ್ರಜ್ಞಾನ ಚಾಲಿತ ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಭೂಮಿ ಹಾಗೂ ರಿಯಲ್ ಮೀ ಇದುವರೆಗೂ 80,000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಿದೆ. 2020 ರಿಂದ ಪ್ರಾರಂಭಗೊಂಡ ಈ ಕಾರ್ಯ ಕ್ರಮವು 21 ಶಾಲೆಗಳನ್ನು ತೊಡಗಿಸಿಕೊಂಡಿದ್ದು, 5,352 ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಪ್ರಸ್ತುತ 75 ಶಾಲೆಗಳೊಂದಿಗೆ ಸಂಪರ್ಕಹೊಂದಿದ್ದು, ಈ ಮೂಲಕ 13,017 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ನೆರವು ದೊರೆಯಲಿದೆ. ಇದರಿಂದ ಶಿಕ್ಷಣ ಕ್ಷೇತ್ರ ದಾದ್ಯಂತ ಬದಲಾವಣೆಯನ್ನು ತರುವ ಜೊತೆಗೆ, ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಸುಧಾರಿಸಲಾಗುತ್ತದೆ.
ಇಂದಿನ ಮಕ್ಕಳಿಗೆ ಖಾಸಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವ ಅವಶ್ಯಕತೆ ಇದ್ದು, ಅದಕ್ಕಾಗಿ ಶಿಕ್ಷಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಅಗತ್ಯವಿದೆ. ಇದಕ್ಕಾಗಿ ಭೂಮಿ ಹಾಗೂ ರಿಯಲ್‌ಮೀ ಸಹಕಾರದೊಂದಿಗೆ ಈ ನೆರವು ನೀಡಲಾಗುತ್ತಿದೆ.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಭೂಮಿ ತನ್ನ ಪ್ರಮುಖ ಉಪಕ್ರಮಗಳಾದ “ಭೂಮಿ ಫೆಲೋಶಿಪ್, ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆ” (SEL) ಕಾರ್ಯಕ್ರಮ, ಸ್ಕೂಲ್ಸ್ ಆಫ್ ಎಕ್ಸಲೆನ್ಸ್, ಇಗ್ನೈಟ್ ಶೆಲ್ಟರ್ಸ್ ಮತ್ತು ಭೂಮಿ ಕ್ಲಬ್ ಗಳನ್ನು ಬಲಪಡಿಸುತ್ತದೆ. ಈ ಕಾರ್ಯಕ್ರಮಗಳು ಶಿಕ್ಷಣ, ನಾಯಕತ್ವ ಮತ್ತು ನಾಗರಿಕ ತೊಡಗಿಸಿ ಕೊಳ್ಳುವಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತವೆ, ದುರ್ಬಲ ಯುವಕರಿಗೆ ಸಮಗ್ರ ಅಭಿವೃದ್ಧಿ ಯನ್ನು ಖಚಿತಪಡಿಸುತ್ತವೆ. ಸರಿಯಾದ ಸಾಧನಗಳು, ಸಂಪನ್ಮೂಲಗಳು ಮತ್ತು ಜ್ಞಾನದೊಂದಿಗೆ ಯುವ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮೂಲಕ, ರಿಯಲ್ ಮಿ ಪ್ರಕಾಶಮಾನವಾದ, ಹೆಚ್ಚು ಅಂತರ್ಗತ ಭವಿಷ್ಯವನ್ನು ನಿರ್ಮಿಸುವತ್ತ ಕೆಲಸ ಮಾಡುತ್ತಿದೆ ಎಂದು ಭೂಮಿ ಕಾರ್ಯನಿರ್ವಾಹಕ ನಿರ್ದೇಶಕಿ ವೈಷ್ಣವಿ ಶ್ರೀನಿವಾಸನ್ಹೇಳಿದರು.
ರಿಯಲ್ ಮಿ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಟಾವೊ ಜಾಂಗ್ ಮಾತನಾಡಿ, "ರಿಯಲ್ ಮಿ ಕೇವಲ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ ಯುವ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ.ಯುವ ಕೇಂದ್ರಿತ ಟೆಕ್ ಬ್ರಾಂಡ್ ಆಗಿ, ನಾವೀನ್ಯತೆಯನ್ನು ಮೀರಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ ಭೂಮಿಯೊಂದಿಗಿನ ನಮ್ಮ ಪಾಲುದಾರಿಕೆಯು ಈ ದೃಷ್ಟಿಕೋನ ವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.