ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೃಷ್ಟಿ ಮಣಿಪಾಲ್ ವಿದ್ಯಾರ್ಥಿಗಳಿಂದ ಭವಿಷ್ಯದ ಮರುಕಲ್ಪನೆ: ಕಲೆ ಮತ್ತು ವಿನ್ಯಾಸದ ಮೂಲಕ 'ಹೊಸ ಲೋಕ' ಅನಾವರಣಗೊಳಿಸಿದ ನಾಲ್ಕು ದಿನಗಳ ಪ್ರದರ್ಶನ

‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ - ಸಾಧ್ಯತೆಗಳ ಸಂಭ್ರಮ: ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಡಿ.20 ಮತ್ತು 21 ರಂದು ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ 11 ವಿಭಿನ್ನ ಕೋರ್ಸ್‌ಗಳ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು: ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ (SMI) ಡಿ.18 ರಿಂದ 21 ರವರೆಗೆ ಆಯೋಜಿಸಿದ್ದ ಕಲಾ ಮತ್ತು ವಿನ್ಯಾಸ ಪ್ರದರ್ಶನಗಳು ಯಶಸ್ವಿ ಯಾಗಿ ಮುಕ್ತಾಯಗೊಂಡಿವೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯ ಮೂಲಕ ಭವಿಷ್ಯವನ್ನು ಮರುರೂಪಿಸುವ ಪ್ರಯತ್ನ ಈ ಪ್ರದರ್ಶನದಲ್ಲಿ ಕಂಡುಬಂದಿತು.

ಮಣಿಪಾಲ್‌ ಅಕಾಡಿಮಿ ಆಪ್‌ ಹೈಯರ್‌ ಎಜುಕೇಶನ್‌(ಮಾಹೆ) ಬೆಂಗಳೂರು ಕ್ಯಾಂಪಸ್‌ನಲ್ಲಿ ಸೇರಿದಂತೆ ನಗರದ ಎರಡು ಪ್ರಮುಖ ಸ್ಥಳಗಳಲ್ಲಿ ನಡೆದ ಈ ನಾಲ್ಕು ದಿನಗಳ ಕಾರ್ಯಕ್ರಮವು, ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನದ ಮೂಲಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು.

ಪ್ರಾಕ್ಟೀಸಸ್ ಆಫ್ ಅಟ್ಯೂನ್‌ಮೆಂಟ್ - ಬಹುಶಿಸ್ತೀಯ ಸಮ್ಮಿಲನ : ಬೆಂಗಳೂರು ಇಂಟರ್‌ ನ್ಯಾಶ ನಲ್ ಸೆಂಟರ್‌ನಲ್ಲಿ (ಬಿಐಸಿ) ಡಿ.18 ಮತ್ತು 19 ರಂದು ನಡೆದ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರದ ರ್ಶನವು ‘ಪ್ರಾಕ್ಟೀಸಸ್ ಆಫ್ ಅಟ್ಯೂನ್‌ಮೆಂಟ್’ (Practices of Attunement) ಹೆಸರಿನಲ್ಲಿ ಗಮನ ಸೆಳೆಯಿತು. ಸುಮಾರು 70-80 ಎಂ.ಡೆಸ್ (MDes) ಮತ್ತು ಎಂ.ಎ (MA) ವಿದ್ಯಾರ್ಥಿಗಳು ಸಮು ದಾಯ, ಹವಾಮಾನ ಬದಲಾವಣೆ, ಇತಿಹಾಸ ಮತ್ತು ನಗರ ವ್ಯವಸ್ಥೆಗಳಂತಹ ಸಮಕಾಲೀನ ವಿಷಯಗಳ ಕುರಿತು ತಮ್ಮ ಸಂಶೋಧನೆ ಮತ್ತು ಕಲಾಕೃತಿಗಳನ್ನು ಪ್ರಸ್ತುತಪಡಿಸಿದರು.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಈ ಕುರಿತು ಮಾತನಾಡಿದ ಎಸ್‌ಎಂಐನ ಪ್ರಾಧ್ಯಾಪಕಿ ಡಾ.ಪ್ರಿಯಾ ಜೋಸೆಫ್, ʼನಮ್ಮ ಸ್ನಾತಕೋ ತ್ತರ ವಿದ್ಯಾರ್ಥಿಗಳ ಕೃತಿಗಳು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ, ವಿನ್ಯಾಸ, ಕಲೆ ಮತ್ತು ತಂತ್ರಜ್ಞಾನದ ಪದರಗಳನ್ನು ಒಗ್ಗೂಡಿಸಿ ಸಮಕಾಲೀನ ಜಗತ್ತಿಗೆ ಬೇಕಾದ ಪ್ರಬಲ ಸಂದೇಶಗಳನ್ನು ನೀಡಿವೆ. ಬೋಧಕರಾದ ಜತಿನ್ ಗುಲಾಟಿ ಮತ್ತು ಕಾರ್ತಿಕಾ ಶಕ್ತಿವೇಲ್ ಅವರ ನೇತೃತ್ವದಲ್ಲಿ ಮೂಡಿ ಬಂದ ಈ ಪ್ರದರ್ಶನವು ವಿವಿಧ ದನಿಗಳ ಸಂಗಮವಾಗಿತ್ತುʼ ಎಂದು ವಿವರಿಸಿದರು.

‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ - ಸಾಧ್ಯತೆಗಳ ಸಂಭ್ರಮ: ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಡಿ. 20 ಮತ್ತು 21 ರಂದು ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ 11 ವಿಭಿನ್ನ ಕೋರ್ಸ್‌ಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಕಿರುಚಿತ್ರಗಳು, ಅನಿಮೇ ಷನ್, ನೂತನ ಉತ್ಪನ್ನಗಳು ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಗ್ಯ, ಶಿಕ್ಷಣ, ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿನ ಭವಿಷ್ಯದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಅನಾವರಣ ಗೊಳಿಸಿದರು.

ಎಸ್‌ಎಂಐನ ನಿರ್ದೇಶಕರಾದ ಡಾ.ಅರಿಂದಮ್ ದಾಸ್ ಅವರು ಮಾತನಾಡಿ, ʼಸೃಜನಶೀಲತೆಯು ಇಂದು ಕೇವಲ ಸೌಂದರ್ಯವರ್ಧನೆಗೆ ಸೀಮಿತವಾಗಿಲ್ಲ. ಅದು ನಮ್ಮ ದೈನಂದಿನ ಜೀವನ, ನಗರ ಗಳು ಮತ್ತು ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ನಾವು ರೂಪಿಸುತ್ತಿರುವ ಹೊಸ ಪ್ರಪಂಚದ ಕೇಂದ್ರಬಿಂದುವಾಗಿ ಕಲೆ ಮತ್ತು ವಿನ್ಯಾಸಗಳು ಕೆಲಸ ಮಾಡುತ್ತಿವೆʼ ಎಂದು ಅಭಿಪ್ರಾಯಪಟ್ಟರು.

ಎಸ್‌ಎಂಐನ ಅಸೋಸಿಯೇಟ್ ಡೈರೆಕ್ಟರ್ (ಅಕಾಡೆಮಿಕ್ಸ್) ರಮೇಶ್ ಕಲ್ಕೂರ್ ಅವರು, ʼನಮ್ಮ ಮಟ್ಟಿಗೆ ಶಿಕ್ಷಣವೆಂದರೆ ಕೇವಲ ವೃತ್ತಿಜೀವನಕ್ಕೆ ಸಿದ್ಧರಾಗುವುದಲ್ಲ, ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಭವಿಷ್ಯ ಎಂಬುದು ತಲುಪಬೇಕಾದ ಗುರಿಯಲ್ಲ, ಬದಲಾಗಿ ಹೊಸ ಅವಕಾಶಗಳನ್ನು ನಿರ್ಮಿಸುವ ಮತ್ತು ಸಮುದಾಯಗಳನ್ನು ಬೆಸೆಯುವ ಸತತ ಪ್ರಕ್ರಿಯೆʼ ಎಂದು ಹೇಳಿದರು.

ನಾಲ್ಕು ದಿನಗಳ ಈ ಪ್ರದರ್ಶನದಲ್ಲಿ ಸಾರ್ವಜನಿಕರು ಮತ್ತು ಕಲಾ ಆಸಕ್ತರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ವೈವಿಧ್ಯತೆ ಮತ್ತು ಪ್ರಯೋಗಶೀಲತೆಯನ್ನು ಒಳಗೊಂಡ ಕೃತಿಗಳು ಎಸ್‌ಎಂಐನ ಶೈಕ್ಷಣಿಕ ತತ್ವವನ್ನು ಎತ್ತಿ ಹಿಡಿದವು.