ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Astrologer BK Subhash Chandra Jain: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಕರಾವಳಿಯ ಖ್ಯಾತ ಜೈನ ಜ್ಯೋತಿಷಿ ಬಿ.ಕೆ.ಸುಭಾಷ್ ಚಂದ್ರ ಜೈನ್ ಭೇಟಿ

ಬೆಂಗಳೂರಿನಲ್ಲಿ ಚಾತುರ್ಮಾಸ ಮಾಡುತ್ತಿರುವ ಪ್ರಖ್ಯಾತ ಜೈನಮುನಿ ಗಳಾದ ಅನೇಕಾಂತ ಸಾಗರ ಮಹಾರಾಜರ ಅಪೇಕ್ಷೆಯಂತೆ ಅಕ್ಟೋಬರ್ 25ನೇ ತಾರೀಕು ನಗರದ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯುವ "ಬೃಹತ್ ಸಿದ್ದ ನವಗ್ರಹ ತೀರ್ತಂಕರ ಮಹಾ ಆರಾಧನಾ ಮಹೋತ್ಸವ" ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸಿದ್ದು ಖಂಡಿತ ಜೈನ ಸಮುದಾಯದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕರ್ನಾಟಕಾದ್ಯಂತ ಜನಪರ ಅಭಿವೃದ್ಧಿ ಕೆಲಸ, ಮೂಲ ಸೌಕರ್ಯ ಮತ್ತು ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸುವ ಮೂಲಕ ಚರಿತ್ರೆ ಸೃಷ್ಟಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ರವರನ್ನು ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನ ಸೌಧದಲ್ಲಿ ಕರಾವಳಿ ತೀರದ ವಾಸ್ತು ಜ್ಯೋತಿಷ್ಯ ಶಾಸ್ತ್ರಜ್ಞ ಬಿ.ಕೆ.ಸುಭಾಷ್ ಚಂದ್ರ ಜೈನ್(
Vastu Astrologer BK Subhash Chandra Jain) ರವರು ಮುಖ್ಯಮಂತ್ರಿಗಳನ್ನು ಭೇಟಿಯಾದರು.

WhatsApp Image 2026-09-17 at 08.37.37 ok

ಈ ವೇಳೆ, ಜನಪರ ಅಭಿವೃದ್ಧಿ ಕೆಲಸಗಳ ಬಗ್ಗೆ ಆಳವಾಗಿ ಚರ್ಚಿಸಿದರು ಹಾಗೂ ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಹಲವು ದಶಕಗಳ ಕೋರಿಕೆ ಯಾದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ(Tulu Language)ಯನ್ನು ಎಂಟನೇ ಪರಿಚಯದ ಹಾಗೂ ಎರಡನೇ ಆಡಳಿತ ಭಾಷೆಯನ್ನು ಮಾಡಬೇಕೆಂಬ ಕೋರಿಕೆಯನ್ನು ಮುಂದಿಟ್ಟರು.

ಇದನ್ನೂ ಓದಿ: Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಹಾಗೆಯೇ, ಪ್ರಸ್ತುತ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ(Veerendra Heggde)ಯವರ ಆಶೀರ್ವಾದದ ಮೂಲಕ ಶ್ರೀಮತಿ ಅನಿತಕ್ಕ ಸುರೇಂದ್ರಣ್ಣ ದಂಪತಿಗಳ ಮಾರ್ಗ ದರ್ಶನದಂತೆ ರಾಜಧಾನಿ ಬೆಂಗಳೂರಿನಲ್ಲಿ ಚಾತುರ್ಮಾಸ ಮಾಡುತ್ತಿರುವ ಪ್ರಖ್ಯಾತ ಜೈನಮುನಿ ಗಳಾದ ಅನೇಕಾಂತ ಸಾಗರ ಮಹಾರಾಜರ ಅಪೇಕ್ಷೆಯಂತೆ ಅಕ್ಟೋಬರ್ 25ನೇ ತಾರೀಕು ನಗರದ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯುವ "ಬೃಹತ್ ಸಿದ್ದ ನವಗ್ರಹ ತೀರ್ತಂಕರ ಮಹಾ ಆರಾಧನಾ ಮಹೋತ್ಸವ" ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸಿದ್ದು ಖಂಡಿತ ಜೈನ ಸಮುದಾಯದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ.

ಹಾಗೂ ಸುಹಾಸ್ತಿ ಜೈನ್ ಮಿಲನ ಈ ವರ್ಷದ ಜಿನ ಸಮ್ಮಿಲನ ಕಾರ್ಯಕ್ರಮವು ದೂರದ ಶಿಖರ್ಜಿ ಯಲ್ಲಿ ನಡೆಯುವುದರಿಂದ ಶಿಖರ್ಜಿ ಯಾತ್ರೆಯ ಸಂಪೂರ್ಣ ಕಾರ್ಯಕ್ರಮದ ವಿವರಗಳ ಬ್ರೊಶರ್ ರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivakumar), ಮತ್ತು ಸಾಮಾಜಿಕ ಹೋರಾಟಗಾರ ಸಮಾಜ ಸೇವಕ ಮುಖಂಡ ಮಾಳ ಹರ್ಷೇಂದ್ರ ಜೈನ್, ಐಟಿ ಉದ್ಯೋಗಿ ಸುನಿತಾ ಮ್ಯಾನೇಜಸ್, ಶ್ರೀಮತಿ ರಶ್ಮಿ ಜೈನ್ ಉಪಸ್ಥಿತರಿದ್ದರು.