Republic Day Fashion 2025: ಗಣರಾಜ್ಯೋತ್ಸವದ ಸಂಭ್ರಮಕ್ಕೆ ಬಂತು ತಿರಂಗಾ ದುಪಟ್ಟಾ
Republic Day Fashion 2025: ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಥ್ ನೀಡಲು ನಾನಾ ಬಗೆಯ ತಿರಂಗಾ ದುಪಟ್ಟಾಗಳು ಮಾರುಕಟ್ಟೆಗೆ ಆಗಮಿಸಿವೆ. ಅವು ಯಾವ್ಯುವು? ಧರಿಸುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಥ್ ನೀಡಲು ನಾನಾ ಬಗೆಯ ತಿರಂಗಾ ದುಪಟ್ಟಾಗಳು ಮಾರುಕಟ್ಟೆಗೆ ಆಗಮಿಸಿವೆ. ಮಾನಿನಿಯರ ಡ್ರೆಸ್‌ಕೋಡ್‌ಗೆ ಜತೆಯಾಗುವ ಕಲರ್‌ಫುಲ್ ತಿರಂಗಾ ದುಪಟ್ಟಾಗಳು (Republic Day Fashion 2025) ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ.
ಮಾನಿನಿಯರ ಸಲ್ವಾರ್, ಚೂಡಿದಾರ್ ಹಾಗೂ ಇತರೆ ಉಡುಪುಗಳೊಂದಿಗೆ ಧರಿಸಬಹುದಾದ ತಿರಂಗಾ ದುಪಟ್ಟಾಗಳು, ಗಣರಾಜ್ಯೋತ್ಸವದ ಡ್ರೆಸ್‌ಕೋಡ್‌ನಂತೆ ಬಿಂಬಿಸುತ್ತವೆ. ಈ ತ್ರಿವರ್ಣ ದುಪಟ್ಟಾಗಳು ಮಹಿಳೆಯರ ಸಂಭ್ರಮಕ್ಕೆ ಸಾಥ್ ನೀಡುತ್ತವೆ ಎನ್ನುವ ದುಪಟ್ಟಾ ಮಾರಾಟಗಾರರಾದ ಶಕೀಲ್ ಅಹಮದ್ ಹೇಳುವಂತೆ ಪ್ರತಿ ವರ್ಷವೂ ಇವು ನಾನಾ ಫ್ಯಾಬ್ರಿಕ್‌ನಲ್ಲಿ ಲಗ್ಗೆ ಇಡುತ್ತವೆ ಎನ್ನುತ್ತಾರೆ.
ಕಾಟನ್ ತಿರಂಗಾ ದುಪಟ್ಟಾ
ಕಾಟನ್ ತಿರಂಗಾ ದುಪಟ್ಟಾಗಳು, ಕೊಂಚ ದುಬಾರಿ. ಕಾಟನ್ ಪ್ರೇಮಿಗಳು ಇವನ್ನು ಖರೀದಿಸುತ್ತಾರೆ. ಇವನ್ನು ಶಾಲನಂತೆಯೂ ಧರಿಸಬಹುದು. ಇತ್ತೀಚೆಗೆ ರಂಗು ರಂಗಾದ ತಿರಂಗಾ ದುಪಟ್ಟಾಗಳು ಟ್ರೆಂಡಿಯಾಗಿವೆ.
ಕ್ರೇಪ್ ತಿರಂಗಾ ದುಪಟ್ಟಾ
ಕ್ರೇಪ್‌ನ ಫ್ಯಾಬ್ರಿಕ್‌ನ ತಿರಂಗಾ ದುಪಟ್ಟಾಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಹುಡುಗಿಯರಿಂದಿಡಿದು ವಯಸ್ಸಾಗಿರುವ ಮಹಿಳೆಯರು ಕೂಡ ಇವನ್ನು ಹೆಚ್ಚಾಗಿ ಪ್ರಿಫರ್ ಮಾಡುತ್ತಾರೆ. ಇವನ್ನು ಸ್ಟೋಲ್‌ನಂತೆಯೂ ಕತ್ತಿಗೆ ಸುತ್ತಿಕೊಂಡು ಹಾಕಿಕೊಳ್ಳಬಹುದು. ದುಪಟ್ಟಾದಂತೆಯೂ ನಾನಾ ಬಗೆಯಲ್ಲಿ ಧರಿಸಬಹುದು.
ಕಾಟನ್ ಸಿಲ್ಕ್ ತಿರಂಗಾ ದುಪಟ್ಟಾ
ಈ ಫ್ಯಾಬ್ರಿಕ್‌ನ ತಿರಂಗಾ ದುಪಟ್ಟಾ ಎಥ್ನಿಕ್ ಲುಕ್ ನೀಡುವುದರೊಂದಿಗೆ ಗ್ರ್ಯಾಂಡ್ ಲುಕ್ ಕಲ್ಪಿಸುತ್ತದೆ. ಲೆಹೆಂಗಾ, ಸಲ್ವಾರ್ ಹಾಗೂ ಯಾವುದೇ ಎಥ್ನಿಕ್ ಉಡುಪಿಗೂ ಗ್ರ್ಯಾಂಡ್ ಲುಕ್ ನೀಡುತ್ತವೆ.
ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
ತಿರಂಗಾ ದುಪಟ್ಟಾ ರೂಲ್ಸ್
* ತಿರಂಗಾ ದುಪಟ್ಟಾವನ್ನು ಉಲ್ಟಾ ಪಲ್ಟಾ ಧರಿಸಬೇಡಿ.
* ಫ್ಯಾಷನ್ ಹೆಸರಲ್ಲಿ ಕಾಲಿಗೆ ತಾಗುವಂತೆ ಧರಿಸಕೂಡದು.
* ಅವಮಾನ ಉಂಟಾಗುವ ಹಾಗೆ ಸ್ಟೈಲಿಂಗ್ ಮಾಡಕೂಡದು.
* ಡಿಸೆಂಟ್ ಲುಕ್‌ಗೆ ಧರಿಸುವುದು ಉತ್ತಮ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)