Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
Makeup Kit Awareness 2025: ಸೌಂದರ್ಯ ಹೆಚ್ಚಿಸುವ ಸೌಂದರ್ಯವರ್ಧಕಗಳು ಹೆಚ್ಚು ಕಾಲ ಬಾಳಿಕೆ ಬರಲು ಹಾಗೂ ಕಾಪಾಡಲು ಈ 5 ಟಿಪ್ಸ್ ಪಾಲಿಸಿ ನೋಡಿ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್‌ಗಳು.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌಂದರ್ಯವರ್ಧಕಗಳು ಹೆಚ್ಚು ದಿನ ಬಾಳಿಕೆ ಬರಬೇಕೇ? ವದನಕ್ಕೆ ಹಚ್ಚುವ ಮೇಕಪ್ ಪ್ರಸಾದನಗಳು ಹಾಳಾಗದಂತೆ ಇರಿಸಬೇಕೇ? ಹಾಗಾದಲ್ಲಿ ಈ 5 ಟಿಪ್ಸ್ ಪಾಲಿಸಿ ನೋಡಿ ಎನ್ನುತ್ತಾರೆ ಮೇಕಪ್ ತಜ್ಞೆ ಮಾಲಾ.
ಎಕ್ಸ್‌ಪೈರಿ ಡೇಟ್ ನೋಡಿ ಖರೀದಿ ಮಾಡಿ
ಸದಾ ನೀವು ಖರೀದಿಸುವ ಯಾವುದೇ ಮೇಕಪ್ ಕಿಟ್ ಅಥವಾ ಆಕ್ಸೆಸರೀಸ್‌ಗಳನ್ನು ಕೊಳ್ಳುವ ಮೊದಲು ಸಿದ್ಧಪಡಿಸಿದ ದಿನಾಂಕ ಹಾಗೂ ಬಳಸಲು ಯೋಗ್ಯವಲ್ಲದ ದಿನಾಂಕ (ಎಕ್ಸ್‌ಪೈರಿ ಡೇಟ್) ಗಮನಿಸಿ. ಆದಷ್ಟೂ ಹೆಚ್ಚು ದಿನಗಳ ಅಂತರ ಇರುವಂತಹ ಪ್ರಾಡಕ್ಟ್‌ಗಳನ್ನೇ ಖರೀದಿಸಿ. ಅತಿ ಹೆಚ್ಚಾಗಿ ಖರೀದಿಸುವ ಲಿಪ್ಸ್‌ಟಿಕ್, ಪೌಂಢೇಶನ್ ಕ್ರೀಮ್, ಕಾಂಪಾಕ್ಟ್ ಪೌಡರ್ ಹಾಗೂ ಐ ಲೈನರ್, ಮಸ್ಕರಾ ಕೊನೆಯ ದಿನಾಂಕ ನೋಡಿಯೇ ಖರೀದಿಸುವುದು ಕಡ್ಡಾಯ ಎಂಬುದನ್ನು ಮರೆಯಬೇಡಿ.
ಎಲ್ಲವೂ ಗುಣಮಟ್ಟದ್ದಾಗಿರಲಿ
ನೀವು ಖರೀದಿಸುವ ಯಾವುದೇ ಮೇಕಪ್ ಪ್ರಸಾದನಗಳು ಉತ್ತಮ ಬ್ರ್ಯಾಂಡ್ ಅಥವಾ ಗುಣಮಟ್ಟದ್ದಾಗಿರಬೇಕು. ಕಡಿಮೆ ಬೆಲೆಯಲ್ಲಿ ಸಿಕ್ಕಿತೆಂದು ಎಂದಿಗೂ ಖರೀದಿಸ ಕೂಡದು. ಕಳಪೆ ಗುಣಮಟ್ಟದ್ದು ತ್ವಚೆಗೆ ಸಮಸ್ಯೆಯುಂಟು ಮಾಡಬಹುದು ಮರೆಯದಿರಿ.
ಕಾಸ್ಮೆಟಿಕ್‌ಗಳನ್ನು ಸೇಲ್‌ನಲ್ಲಿ ಖರೀದಿಸಬೇಡಿ
ನೀವು ಧರಿಸುವ ಉಡುಪುಗಳನ್ನು ಸೇಲ್‌ನಲ್ಲಿ ಖರೀದಿ ಮಾಡಿದರೇ ನಿಮಗೆ ಲಾಭವಾದೀತು. ಹಾಗೆಂದು ಕಾಸ್ಮೆಟಿಕ್ ಸೇಲ್‌ಗಳಲ್ಲಿ ಮೇಕಪ್‌ಗೆ ಸಂಬಂಧಿಸಿದ ಯಾವುದೇ ಪರಿಕರಗಳನ್ನು ಖರೀದಿಸುವುದು ನಾಟ್ ಓಕೆ. ಅದರಲ್ಲೂ ಮುಖಕ್ಕೆ ಲೇಪಿಸುವ, ತುಟಿಗೆ, ಕಣ್ಣಿಗೆ ಹಚ್ಚುವ ಶೇಡ್, ಕ್ರೀಮ್‌ಗಳನ್ನು ಖರೀದಿಸುವಾಗ ಎಚ್ಚರ. ಯಾಕೆಂದರೆ ಸೇಲ್‌ನಲ್ಲಿ ಹಿಂದಿನ ಸೀಸನ್‌ನ ಉಳಿದ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಖರೀದಿಸಿದರೂ ಮೊದಲು ಬಳಸುವ ಕೊನೆಯ ದಿನಾಂಕ ನೋಡಿಕೊಳ್ಳಿ. ಓಕೆ ಎಂದಾದಲ್ಲಿ ಖರೀದಿಸಿ. ಕೊನೆಯ ದಿನಾಂಕ ಸಮೀಪ ಇದ್ದಲ್ಲಿ ಕೊಳ್ಳುವುದು ಬೇಡವೇ ಬೇಡ.
ಮೇಕಪ್ ಕಿಟ್ ಶೇರಿಂಗ್ ಮಾಡದಿರಿ
ಆಪ್ತ ಅಥವಾ ಮನೆಯವರನ್ನು ಹೊರತುಪಡಿಸಿ ಇತರರೊಂದಿಗೆ ಮೇಕಪ್ ಪರಿಕರಗಳನ್ನು ಹಂಚಿಕೊಳ್ಳದಿರಿ. ಹಂಚಿಕೊಳ್ಳಲೇಬೇಕಾದ ಸಂದರ್ಭ ಬಂದಲ್ಲಿ ಪ್ರತ್ಯೇಕವಾದ ಬ್ರಶ್ ಬಳಸುವಂತೆ ಹೇಳಿ. ಅವರಿಗೆ ತ್ವಚೆಯ ಸಮಸ್ಯೆ ಇದ್ದಲ್ಲಿ ಆದಷ್ಟೂ ನೀಡದಿರಿ.
ಈ ಸುದ್ದಿಯನ್ನೂ ಓದಿ | Highwaist Pant Fashion 2025: ವಿಂಟರ್‌ಗೆ ಮರಳಿದ ಹೈವೇಸ್ಟ್ ಪ್ಯಾಂಟ್ ಫ್ಯಾಷನ್
ಮೇಕಪ್ ಬ್ರಶ್‌ಗಳನ್ನು ಸ್ವಚ್ಛವಾಗಿರಿಸಿ
ನಿಮ್ಮ ಮೇಕಪ್ ಬ್ರಶ್‌ಗಳನ್ನು ಸ್ವಚ್ಛವಾಗಿರಿಸಿ. ಬಳಸಿದ ನಂತರ ಧೂಳು ಇಲ್ಲದ ಕಬೋರ್ಡ್ ನಲ್ಲಿರಿಸಿ. ತಿಂಗಳಿಗೊಮ್ಮೆ ಕ್ಲೀನ್ ಮಾಡಿ. ಇನ್ನು ಕಣ್ಣುಗಳಿಗೆ ಹಚ್ಚುವ ಮಸ್ಕರ ಹಾಗೂ ಐ ಶ್ಯಾಡೋ ಮತ್ತು ಐ ಲೈನರ್‌ಗಳನ್ನು ಹೆಚ್ಚು ಗಾಳಿಯಾಡಲು ಬಿಡಬಾರದು. ಕಣ್ಣಿಗೆ ಕಾಣದ ಮೈಕ್ರೋ ಬ್ಯಾಕ್ಟಿರಿಯಾಗಳು ಒಳ ಸೇರುವ ಸಂಭವವಿರುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)